Karnataka Times
Trending Stories, Viral News, Gossips & Everything in Kannada

HSRP Number Plate: ನಾಳೆಯಿಂದಲೇ HSRP ನಂಬರ್ ಪ್ಲೇಟ್ ಹಾಕಿಸಲೇಬೇಕು! ನಿಯಮ ಬದಲು

advertisement

HSRP ನಂಬರ್ ಪ್ಲೇಟ್ (HSRP Number Plate) ಅನ್ನು ಇಡಬೇಕು ಎನ್ನುವುದಾಗಿ ನಿಯಮಗಳು ಈಗಾಗಲೇ ಜಾರಿಯಾಗಿವೆ. ಮೇ ತಿಂಗಳ ಪ್ರಾರಂಭದಿಂದಲೇ ಈ ಐಸ್ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ವಾಹನಗಳಲ್ಲಿ ಅಳವಡಿಸಬೇಕು ಎನ್ನುವುದಾಗಿ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಏಪ್ರಿಲ್ 1 2019ಕ್ಕಿಂತ ಮುಂಚೆ ಖರೀದಿ ಮಾಡಿ ರಿಜಿಸ್ಟರ್ ಮಾಡಿಕೊಂಡಿರುವಂತಹ ವಾಹನಗಳ ನಂಬರ್ ಪ್ಲೇಟ್ ಅನ್ನು HSRP ನಂಬರ್ ಪ್ಲೇಟ್ ಗೆ ಬದಲಾಯಿಸಿಕೊಳ್ಳಬೇಕು ಎನ್ನುವಂತಹ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಮೇ 31ರ ಒಳಗೆ ಈ ಕೆಲಸವನ್ನು ಮಾಡಬೇಕು ಎನ್ನುವುದಾಗಿ ಈಗಾಗಲೇ ನಿಯಮ ಕೂಡ ಸ್ಪಷ್ಟವಾಗಿದೆ.

ಹಾಕಿಸಿಕೊಳ್ಳದಿದ್ದರೆ ಫೈನ್ ಎಷ್ಟು ಗೊತ್ತಾ?

 

Image Source: IndiaToday

 

HSRP Number Plate ಅನ್ನು ಯಾವುದೇ ವ್ಯಕ್ತಿ ಸರಿಯಾಗಿ ಸಮಯಕ್ಕೆ ವಾಹನಕ್ಕೆ ಅಳವಡಿಸಿಕೊಳ್ಳದೆ ಹೋದಲ್ಲಿ ದೊಡ್ಡಮಟ್ಟದಲ್ಲಿ ಜುರ್ಮಾನೆಯನ್ನು ವಿಧಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ದ್ವಿಚಕ್ರ ತ್ರಿಚಕ್ರ ಹಾಗೂ ಟ್ರ್ಯಾಕ್ಟರ್ ಮೇಲೆ ಎರಡು ಸಾವಿರ ರೂಪಾಯಿಗಳ ಫೈನ್ ಹಾಗೂ ದೊಡ್ಡ ವಾಹನಗಳ ಮೇಲೆ 5,000 ರೂಪಾಯಿಗಳ ಫೈನ್ ಅನ್ನು ವಿಧಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ನಕಲಿ ನಂಬರ್ ಬಳಕೆ ಮಾಡುವುದನ್ನು ಕಡಿಮೆ ಮಾಡೋ ಕಾರಣಕ್ಕಾಗಿ ಈ ರೀತಿಯ ಕ್ರಮಗಳನ್ನು ಕೈ ತೆಗೆದುಕೊಳ್ಳಲಾಗುತ್ತಿದೆ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

advertisement

HSRP ನಂಬರ್ ಪ್ಲೇಟ್ಗಳನ್ನು ಹಾಕಿಸಿಕೊಳ್ಳುವುದರ ಹಿಂದಿನ ನಿಜವಾದ ಕಾರಣ:

 

Image Source: DeshGujarat

 

HSRP ನಂಬರ್ ಪ್ಲೇಟ್ (HSRP Number Plate) ಅನ್ನು ಏಪ್ರಿಲ್ 1 2019 ಕ್ಕಿಂತ ಮುಂಚೆ ಖರೀದಿ ಮಾಡುವ ಅಥವಾ ರಿಜಿಸ್ಟರ್ ಮಾಡಿರುವಂತಹ ವಾಹನಗಳ ಮೇಲೆ ಅಳವಡಿಸಿಕೊಳ್ಳಲೇ ಬೇಕಾಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅಪರಾಧ ಮಾಡುವಾಗ ನಂಬರ್ ಪ್ಲೇಟ್ ಗಳನ್ನು ತೆಗೆದುಹಾಕುವುದು ಅಥವಾ ನಂಬರ್ ಪ್ಲೇಟ್ ಗಳನ್ನ ಮರೆಮಾಚುವ ಕೆಲಸವನ್ನು ಮಾಡಲಾಗುತ್ತಿತ್ತು ಆದರೆ ಇನ್ನು ಮುಂದೆ ಆ ರೀತಿಯ ಯಾವುದೇ ಕೆಲಸಗಳಿಗೂ ಕೂಡ ಆಸ್ಪದ ಇರುವುದಿಲ್ಲ.

ಇನ್ಮುಂದೆ ಯಾವುದೇ ರೀತಿಯ ನಿಯಮಗಳನ್ನು ಮುರಿಯೋದು ಅಥವಾ ಮೀರೋದು ಯಾವುದು ಕೂಡ ನಡೆಯೋದಿಲ್ಲ ಯಾಕೆಂದರೆ ಅವುಗಳ ಮೇಲೆ ಇನ್ಮುಂದೆ ದೊಡ್ಡ ಮಟ್ಟದ ಫೈನ್ ಅನ್ನು ವಿಧಿಸಲಾಗುತ್ತದೆ.

SIAM ಪೋರ್ಟೆಲ್ ನಲ್ಲಿ ನೀವು ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ಪಡೆದುಕೊಳ್ಳಬಹುದು. ಈ ವೆಬ್ ಸೈಟ್ ನಲ್ಲಿ ಹೋಗಿ ನೀವು ನಿಮ್ಮ ನಗರ ಹಾಗೂ ವಾಹನವನ್ನು ಪಡೆದುಕೊಂಡಿರುವ ಡೀಲರ್ಶಿಪ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಸಬ್ಮಿಟ್ ಮಾಡಿ ನಂತರ ನಿಮ್ಮ ನಂಬರ್ ಪ್ಲೇಟ್ ನೀವು ವಾಹನವನ್ನು ಖರೀದಿ ಮಾಡಿರುವಂತಹ ಶೋರೂಮ್ ಗೆ ಬರುತ್ತದೆ. ಅಲ್ಲಿಂದ ಅದನ್ನು ಪಡೆದುಕೊಂಡು ನಿಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.