Karnataka Times
Trending Stories, Viral News, Gossips & Everything in Kannada

HSRP Number Plate: ಕೇವಲ 5 ನಿಮಿಷದಲ್ಲಿ HSRP ನಂಬರ್ ಪ್ಲೇಟ್ Online ನಲ್ಲಿ ಬುಕ್ ಮಾಡುವ ಸರಳ ವಿಧಾನ ಹೀಗಿದೆ

advertisement

ಇತ್ತೀಚೆಗೆ ವಾಹನಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಎಲ್ಲ ಕಡೆಯಲ್ಲಿಯೂ HSRP Number Plate ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದ್ದನ್ನು ನಾವು ಕಾಣಬಹುದು. 2019ಗಿಂತ ಮೊದಲು ಖರೀದಿ ಮಾಡಿದ್ದ ಎಲ್ಲ ತರದ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಮಾಡಿಸಲೇ ಬೇಕು ಎಂಬ ನಿಯಮವನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು ಇದನ್ನು ಎಲ್ಲ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯ ಮಾಡಲಾಗಿದೆ. ಆದರೆ ಈ HSRP ನಂಬರ್ ಪ್ಲೇಟ್ ಅನ್ನು ಪಡೆಯುವುದು ಹೇಗೆ ಎಂಬುದೇ ಅನೇಕರಿಗೆ ತಿಳಿದಿರಲಾರದು. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ವಿಶೇಷ ಸೂಚನೆ?

 

Image Source: Live Law

 

ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಲಘು ಮೋಟಾರ್ ಹಳೆ ವಾಹನಗಳಿಗೆ HSRP Number Plate ಅನ್ನು ಕಡ್ಡಾಯ ಮಾಡಲಾಗಿದ್ದು ವಾಹನ ಸವಾರರ ಹಿತದೃಷ್ಟಿಯಿಂದ ಈ ಕ್ರಮ ಬಹಳ ಅಗತ್ಯವಾಗಿದೆ. ಅತಿ ಸುರಕ್ಷಿತ ನೋಂದಣಿ ಫಲಕವಾದ (HSRP) ಅಳವಡಿಕೆಯನ್ನು ಮಾಡಲು ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಈ ಹಿಂದೆ ಫೆಬ್ರವರಿ 17ರ ಒಳಗೆ ನೋಂದಣಿ ಮಾಡಿಸಲು ಗಡುವು ನೀಡಲಾಗಿತ್ತು ಆದರೆ ವಾಹನ ಹೊಂದಿದ್ದವರು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಮನಗಂಡ ಸರಕಾರ ಗಡುವು ವಿಸ್ತರಿಸಿ ಕಡ್ಡಾಯವಾಗಿ HSRP ಅಳವಡಿಸಲು ಸೂಚನೆ ನೀಡಿದೆ.

advertisement

HSRP Number Plate ಹೇಗೆ ಅಪ್ಲೈ ಮಾಡಬೇಕು?

HSRP Number Plate ಅನ್ನು ನೀವು ಆನ್ಲೈನ್ ಮೂಲಕ ಅಪ್ಲೆ ಮಾಡಬಹುದು. ನಿಮ್ಮ ಮೊಬೈಲ್ ಗೂಗಲ್ ನಲ್ಲಿ SIAM ಗೆ ಭೇಟಿ ನೀಡಿ ಬಳಿಕ ಅದರಲ್ಲಿ HSRP Registration ಬ್ಲಾಗ್ ಆಯ್ಕೆ ನಿಮಗೆ ಸಿಗಲಿದೆ. ಅದನ್ನು ಓಪನ್ ಮಾಡಿ. ಹೀಗೆ ನಿಮ್ಮ HSRP Application ನ ಫುಲ್ ಡೀಟೈಲ್ಸ್ ನಿಮಗೆ ಸಿಗಲಿದೆ. ಅದರಲ್ಲಿ ನಿಮ್ಮ ಪೂರ್ತಿ ಹೆಸರು, Email ID, state, Vehicle Registration Number, Mobile Number, Date Of Registration ಎಂಬ ಆಪ್ಶನ್ ಇರಲಿದೆ. ಅದೆಲ್ಲವನ್ನು ಸರಿಯಾಗಿ ಫಿಲ್ ಮಾಡಿ I Agree ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

 

Image Source: India TV News

 

ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ವಾಹನದ ಬ್ರ್ಯಾಂಡ್ ಆಯ್ಕೆ ಕೇಳಲಿದೆ. ಅದರಲ್ಲಿ BMW, Hero, Suzuki ಹೀಗೆ ನಾನಾ ಕಂಪೆನಿ ಇರಲಿದ್ದು, ನಿಮ್ಮ ಕಂಪೆನಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅದಾದ ಬಳಿಕ High Security Registration Plate With Color ಎಂದು ಬರಲಿದೆ. ಅದರಲ್ಲಿ ಬುಕ್ ಎಂದು ಕೊಟ್ಟರೆ ಬುಕ್ಕಿಂಗ್ ಡೀಟೈಲ್ಸ್ ಸಿಗಲಿದೆ. ಬುಕ್ಕಿಂಗ್ ಮಾಹಿತಿಯಲ್ಲಿ ನಿಮ್ಮ RC Number, ಎಂಜಿನ್ ನಂಬರ್, ವೆಹಿಕಲ್ ನಂಬರ್ ತೆರೆದುಕೊಳ್ಳಲಿದೆ. ಯಾವ ಇಂಧನದ ಆಯ್ಕೆ ಇರಲಿದೆ, ಯಾವ ಕಲರ್ ಇದೆ ಇತ್ಯಾದಿ ಮಾಹಿತಿ ಸಹ ಇರಲಿದ್ದು ಎಲ್ಲವನ್ನು ಭರ್ತಿ ಮಾಡಿ.

ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ನೀವು ಸಬ್ಮಿಟ್ ನೀಡಿದರೆ ಮೊಬೈಲ್ ಸಂಖ್ಯೆ ನೀಡಿದ್ದಕ್ಕೆ OTP ಬರಲಿದೆ ಅದನ್ನು ಕೂಡ ಮೆನ್ಶನ್ ಮಾಡಬೇಕು. ಇದಾದ ಬಳಿಕ Home Delivery or Dealership ಎಂಬ ಆಯ್ಕೆ ಸಿಗಲಿದೆ. ಡೀಲರ್ಸ್ ಆಯ್ಕೆ ಮಾಡಿದರೆ ನಿಮ್ಮ ಹತ್ತಿರದ ಶಾಪ್ ನಲ್ಲಿ HSRP Number Plate  ನ್ನು ತಂದುಕೊಡಲಾಗುವುದು. ಬಳಿಕ ಕನ್ಫರ್ಮ್ ಡೀಲರ್ ಮೇಲೆ ಕ್ಲಿಕ್ ಮಾಡಿದರೆ ಯಾವ ತಾರೀಖಿನಂದು ಬೇಕು ಮತ್ತು ಎಷ್ಟು ಸಮಯಕ್ಕೆ ಅನುಕೂಲ ಎಂಬುದನ್ನು ಕ್ಲಿಕ್ ಮಾಡಿರಿ. ಬಳಿಕ ಅದರ ಪೇಮೆಂಟ್ ಪ್ರೊಸೆಸ್ ಅನ್ನು ಕೂಡ ಮುಗಿಸಿರಿ. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ HSRP ನಂಬರ್ ಪ್ಲೇಟ್ ನಿಮಗೆ ಸಿಗಲಿದೆ.

advertisement

Leave A Reply

Your email address will not be published.