Karnataka Times
Trending Stories, Viral News, Gossips & Everything in Kannada

Gold Price: ಭಾರಿ ಬೇಡಿಕೆಯ ಬಳಿಕ ಹೈದ್ರಾಬಾದ್ ನಲ್ಲಿ ಇಳಿಕೆ ಕಂಡ ಚಿನ್ನದ ದರ, ಎಷ್ಟಾಗಿದೆ ಬೆಲೆ?

advertisement

ಚಿನ್ನ ಹೂಡಿಕೆಯ ಬಗ್ಗೆ ಇಂದು ಹೆಚ್ಚಿನ ಜನರು ಆಸಕ್ತಿ ವಹಿಸಿದ್ದಾರೆ‌. ಇಂದು ಸ್ವಲ್ಪವಾದರೂ ಹಣ ಉಳಿತಾಯ ಮಾಡಬೇಕು ಎಂದು ಇದ್ದಾಗ ಚಿನ್ನ ಖರೀದಿ‌ ಮಾಡುವ ಮೂಲಕ ಉಳಿಕೆ ಮಾಡುತ್ತಾರೆ. ಇನ್ನೇನು ಯುಗಾದಿಯ ಪರ್ವ ಕೂಡ ಆರಂಭವಾಗಲಿದ್ದು ಹೊಸ ವರ್ಷ ಎಂದೇ ಹೇಳಬಹುದು. ಹಾಗಾಗಿ ಬೆಲೆ ಹೆಚ್ಚು ಇದ್ದರೂ ಚಿನ್ನ ಖರೀದಿ ಮಾಡಲು ಗ್ರಾಹಕರು ಆಸಕ್ತಿ ವಹಿಸುತ್ತಾರೆ. ಇಂದು ಚಿನ್ನದ ಬೆಲೆ (Gold Price)ಯು ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು ಚಿನ್ನ ಖರೀದಿ (Gold Purchase) ಗ್ರಾಹಕರಿಗೆ ನಿರಾಸೆ ಉಂಟು ಮಾಡಿತ್ತು. ಇದೀಗ ನಿನ್ನೆಯಷ್ಟೆ ಗರಿಷ್ಠ ಮಟ್ಟವನ್ನು ತಲುಪಿದ ನಂತರ ವಿವಿಧ ನಗರದಲ್ಲಿ, ಹೈದರಾಬಾದ್‌ನಲ್ಲಿಯು ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು ಗ್ರಾಹಕರಿಗೆ ಈ ವಿಚಾರ ಖುಷಿ ನೀಡಿದೆ.

ಎಷ್ಟಾಗಿದೆ ಬೆಲೆ?

 

Image Source: Business Today

 

ಭಾರತದಲ್ಲಿ ಇಂದು 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯು 63,350 ರೂಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ (Gold Price) 10 ಗ್ರಾಂ ಬೆಲೆ 69,110 ರೂಪಾಯಿ ಆಗಿದೆ. ಹೈದರಾಬಾದ್‌ನಲ್ಲಿ ಮತ್ತು ಭಾರತದ ವಿವಿಧ ನಗರಗಳಲ್ಲಿ ಚಿನ್ನದ ದರಗಳ ಏರಿಕೆಯಿಂದಾಗಿ ಚೀನಾದ ಸೆಂಟ್ರಲ್ ಬ್ಯಾಂಕ್‌ನಿಂದ ಬೇಡಿಕೆ ಹೆಚ್ಚಳವಾದ ಕಾರಣವೂ ಬೆಲೆ ದುಪ್ಪಟ್ಟು ಆಗಿತ್ತು. ಇದೀಗ ಹೈದರಾ ಬಾದ್ ನಲ್ಲಿ ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 1 ಗ್ರಾಂ ಚಿನ್ನದ ಬೆಲೆ 6,987 ರೂ ಆಗಿದ್ದು, 8 ಗ್ರಾಂ ಚಿನ್ನದ ಬೆಲೆ 55,896 ರೂ ಆಗಿದ್ದು 10 ಗ್ರಾಂ ಚಿನ್ನದ ಬೆಲೆ 69,870 ರೂ ಆಗಿದೆ.

advertisement

ವಿವಿಧ ನಗರದಲ್ಲಿ Gold Price ಎಷ್ಟಾಗಿದೆ?

 

Image Source: News18

 

22 ಕ್ಯಾರಟ್ ಚಿನ್ನದ ಬೆಲೆ (Gold Price) ಯು ಚೆನ್ನೈ ನಲ್ಲಿ 64,550 ರೂಪಾಯಿ ಆಗಿದ್ದು, ಮುಂಬೈ ನಲ್ಲಿ 63,600 ರೂಪಾಯಿ ಆಗಿದೆ. ಕೋಲ್ಕತ್ತಾ ದಲ್ಲಿ 63,600 ರೂಪಾಯಿ ಆಗಿದ್ದು ಲಕ್ನೋ ದಲ್ಲಿ 63,750 ರೂಪಾಯಿ ಆಗಿದೆ, ಕೇರಳದಲ್ಲಿ 63,350 ರೂ ಆಗಿದ್ದು, ಅಹ್ಮದಾಬಾದ್ ನಲ್ಲಿ 63,400 ರೂ‌ ಆಗಿದೆ. ವಿದೇಶೀ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ‌ ಏರಿದ್ದ ಚಿನ್ನದ ಬೆಲೆ ಇಂದು ಗ್ರಾಮ್​ಗೆ 35 ರೂನಷ್ಟು ಕಡಿಮೆ ಆಗಿದೆ ಎನ್ನಬಹುದು.

ಬೆಳ್ಳಿ ಬೆಲೆ ಎಷ್ಟಾಗಿದೆ?

ಇಂದು ಬೆಳ್ಳಿಯು ಕೂಡ ಅತೀ ಮುಖ್ಯ ವಾಗಿದ್ದು ಬೆಳ್ಳಿಯ ವಸ್ತುಗಳನ್ನು ಕೂಡ ಹೆಚ್ಚಾಗಿ ಜನತೆ ಬಳಕೆ ಮಾಡುತ್ತಾರೆ‌‌. ಇಂದು ಬೆಳ್ಳಿ ಬೆಲೆ (Silver Price) ಯು ಒಂದು ಗ್ರಾಮ್​ಗೆ 79 ರು ಆಗಿದ್ದು, 100 ಗ್ರಾಮ್​ಗೆ 7,750 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಯಾಗಿದೆ.

advertisement

Leave A Reply

Your email address will not be published.