Karnataka Times
Trending Stories, Viral News, Gossips & Everything in Kannada

Yamaha RX100: ಯಮಹ RX100 ಬೈಕ್ ಗೆ ಕಾಯುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ

advertisement

ಯುವಕರಿಗೆ‌ ಬೈಕ್ ಎಂದರೆ ಹಿಂದಿನಿಂದಲೂ ಕ್ರೇಜ್ ಹಾಗಾಗಿ ಕಾರು, ಸ್ಕೂಟರ್ ಇತರ ವಾಹನಗಳಿಗಿಂತ ಹೆಚ್ಚು ಇಷ್ಟ ಪಡುವುದು ಬೈಕ್ ಅನ್ನೇ ಎನ್ನಬಹುದು. ಬೈಕ್ ರೈಡ್ ಬಗ್ಗೆ ಹೆಚ್ಚಿನ ಯುವಕರಿಗೆ ಆಸಕ್ತಿ ಇದ್ದು ಸುಮ್ಮನೆ ಆದರೂ ಒಂದು ರೌಂಡ್ ಹಾಕಿ ಬೈಕ್ ರೈಡ್ ಮಾಡುವರು ಇದ್ದಾರೆ.‌ ಬೈಕ್ ರೈಡ್ ಅಂದಾಗ ಯುವಕರಿಗೆ ಹೆಚ್ಚು ನೆನಪಾಗುವುದು 90ರ ಸಮಯದಲ್ಲಿ‌ ಅತೀ ಹೆಚ್ಚು ಯುವಕರನ್ನು ಸೆಳೆದ Yamaha RX100, ವಿಭಿನ್ನ ಲುಕ್‌ ನಿಂದ ಆಕರ್ಷಕ ನೋಟವನ್ನು ಹೊಂದಿದ್ದ ಈ ಬೈಕ್‌ಗೆ ಈಗಲೂ ಬಹಳಷ್ಟು ಯುವಕರಿಗೆ ಈ ಬೈಕ್ ಅಂದರೆ ಇಷ್ಟ. ಇದೀಗ ಮತ್ತೆ ಹೊಸ ನವೀಕರಣದೊಂದಿಗೆ ಮಾರುಕಟ್ಟೆಗೆ ಬರಲು ಈ ಬೈಕ್ ಸಜ್ಜಾಗಿದೆ.

ಆಧುನಿಕ ಲುಕ್ ನೊಂದಿಗೆ ಎಂಟ್ರಿ:

Yamaha RX100 ಬೈಕ್ ಸುಮಾರು ವರ್ಷಗಳ ಹಿಂದೆ ಮಾರಾಟ ಮತ್ತು ಉತ್ಪಾದನೆ ಸ್ಥಗಿತಗೊಂಡಿತ್ತು. ಇದೀಗ ಹಳೆಯ ಸವಾರರಿಗೆ ಮೆಮೊರಿ ನೀಡಲು ಮತ್ತೆ ಮಾರುಕಟ್ಟೆಗೆ ಎಂಟ್ರಿ ನೀಡಲು ಮುಂದಾಗಿದೆ. ಯಮಹಾ ಕಂಪನಿ ಈ ಬೈಕ್​ ಅನ್ನು ಲಾಂಚ್ ಮಾಡಲಿದ್ದು ನೂತನ ಆಧುನಿಕ ವಿನ್ಯಾಸ ದೊಂದಿಗೆ ಮತ್ತೆ ಎಂಟ್ರಿ ನೀಡಲಿದ್ದು ಇದರ ಫೀಚರ್ಸ್ ಹೇಗಿರಲಿದೆ ಎಂಬ ಮಾಹಿತಿ ಈ‌ ಲೇಖನದಲ್ಲಿ ಇದೆ.

Yamaha RX100 ಫೀಚರ್ಸ್:

 

advertisement

Image Source: Mint

 

  • ಈ ಬೈಕ್ ನೂತನ ಆಕರ್ಷಕ ನೋಟದೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು ಸಿಗ್ನೇಚರ್ ಸ್ಟೈಲಿಂಗ್ ನೊಂದಿಗೆ ವಿನ್ಯಾಸ ಮಾಡಲಾಗಿದೆ ಎನ್ನಲಾಗಿದೆ.
  • ಇದೀಗ ಇದರ ಎಂಜಿನ್ ಶಕ್ತಿಯನ್ನು 200 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ದೊಂದಿಗೆ ಮಾರುಕಟ್ಟೆ ಗೆ ಎಂಟ್ರಿ ನೀಡಲಿದೆ ಎನ್ನುವ ಮಾಹಿತಿಗಳು ಕೂಡ ಲಭ್ಯವಾಗಿದೆ
  • ಅದೇ ರೀತಿ ಈ Yamaha RX100 ನ ವೈಶಿಷ್ಟ್ಯ ಗಳು ಮೊಡರ್ನ್ ರೀತಿಯಲ್ಲಿ ಇರಲಿದ್ದು ಬೈಕ್ ಡಿಸ್ಕ್ ಬ್ರೇಕ್‌ಗಳು, ವಿನ್ಯಾಸ ಮತ್ತು LED ಹೆಡ್‌ಲೈಟ್‌ಗಳು, DRL ಗಳಂಹ ನೂತನ ವೈಶಿಷ್ಟ್ಯ ಗಳು ಇರಬಹುದು.
  • ಈ ಬೈಕ್ ನ ಕಾಂಪ್ಯಾಕ್ಟ್ ವಿನ್ಯಾಸ ಬಳಸಲು ಸುಲಭವಾದ ನ್ಯಾವಿಗೇಷನ್ ಸಿಸ್ಟಮ್‌ನಂತಹ ಉತ್ತಮ ಆಯ್ಕೆಗಳು ಇರಬಹುದು ಎನ್ನಲಾಗಿದೆ.
  • ಅದೇ ರೀತಿ ಹೊಸ RX100 225.9cc ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಇಂಜಿನ್‌ನೊಂದಿಗೆ ಬರಲಿದೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ.
  • ಇನ್ನು ಕ್ಲಾಸಿಕ್ ಟಯರ್ ಡ್ರಾಪ್ ಇಂಧನ ಟ್ಯಾಂಕ್, ಬೋಲ್ಡ್ ಹ್ಯಾಂಡಲ್‌ಬಾರ್ ಅಳವಡಿಸಲಿದೆ.
  • ಅದೇ ರೀತಿ ಈ ಯಮಹಾ RX 100 ಹೆಚ್ಚು ಪವರ್ ಫುಲ್ ಆಗಿರುವ ಎಂಜಿನ್ ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು ಯುವಕರನ್ನು ಥ್ರಿಲ್ ಮಾಡಲಿದೆ.

ಬೆಲೆ ಎಷ್ಟು ಇರಬಹುದು?

 

Image Source: BikeJunction

 

ಈ ಬೈಕ್ ನಲ್ಲಿ ಆಧುನಿಕ ವೈಶಿಷ್ಟ್ಯ ಗಳನ್ನು ಅಳವಡಿಸುದರ ಜೊತೆಗೆ ರೈಡ್ ಮಾಡುವ ಉತ್ತಮ‌ ಅನುಭವ ವನ್ನು ಈ ಬೈಕ್ ನೀಡಲಿದೆ. ಇದರ ಬೆಲೆಯು ಸುಮಾರು ರೂ 1.25 ಲಕ್ಷದವರೆಗೆ ಇರಬಹುದು ಎಂದು ವಿವಿಧ ಮೂಲಗಳ ಮಾಹಿತಿ ಪ್ರಕಾರ ಲಭ್ಯವಾಗಿದೆ. ಬೈಕ್ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಎನ್ನುವ ಮಾಹಿತಿಯು ಇನ್ನಷ್ಟೇ ಲಭ್ಯವಾಗ ಬೇಕಿದೆ. ಒಟ್ಟಿನಲ್ಲಿ ಈ ಬೈಕ್ ಯುವಕರನ್ನಂತು ಮತ್ತಷ್ಟು ಥ್ರಿಲ್ ಮಾಡಲಿದೆ.

advertisement

Leave A Reply

Your email address will not be published.