Karnataka Times
Trending Stories, Viral News, Gossips & Everything in Kannada

Gold Price: ಚಿನ್ನದ ಬೆಲೆ ಮತ್ತಷ್ಟು ಇಳಿಕೆ, ಬೆಂಗಳೂರಲ್ಲಿ 10 ಗ್ರಾಂ ಗೋಲ್ಡ್‌ ದರ ಎಷ್ಟು?

advertisement

ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold & Silver Price) ಮತ್ತೆ ಇಳಿಕೆಯಾಗಿವೆ. ಷೇರು ಮಾರುಕಟ್ಟೆಯ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ (MCX) ನಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿಯ ಫ್ಯೂಚರ್‌ ಬೆಲೆ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನ- ಬೆಳ್ಳಿ ಬೆಲೆ ಕುಸಿತ ಕಂಡಿದೆ.ಚಿನ್ನ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶ.

ಏಕೆಂದರೆ ಸುಮಾರು ಹತ್ತು ದಿನಗಳ ನಂತರ ಚಿನ್ನದ ದರ (Gold Price) ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಿಂದ ಚಿನ್ನದ ದರದಲ್ಲಿ ಸತತವಾಗಿ 600 ರೂ. ಏರಿಕೆಯಾಗಿತ್ತು. ಈಗ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಭಾರೀ ಪ್ರಮಾಣದಲ್ಲಿ ಚಿನ್ನದ ಆಮದು ನಡೆಯುತ್ತಿದೆ. ಚಿನ್ನವನ್ನು ಆಭರಣಗಳ ತಯಾರಿಗಷ್ಟೇ ಅಲ್ಲದೆ ಹೂಡಿಕೆಯ ಸಾಧನವಾಗಿಯೂ ಬಳಸುತ್ತಾರೆ.

ರಾಜಧಾನಿ ಬೆಂಗಳೂರಿನಲ್ಲಿ ದರ ಹೇಗಿದೆ?

 

 

advertisement

ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ಬೆಲೆ 58,250ರೂ. ಇದೆ. ನಿನ್ನೆಯ ಬೆಲೆಗೆ ಹೋಲಿಸಿದರೆ, ಇಂದು 10 ಗ್ರಾಂ ಚಿನ್ನದ ಬೆಲೆ (Gold Price) ಯಲ್ಲಿ 150 ರೂ. ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 63,530 ರೂ. ಇದೆ. ನಿನ್ನೆಯ ಬೆಲೆಗೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ.

ಫೆಬ್ರವರಿ 5, 2024 ರಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. 2024ರ ಏಪ್ರಿಲ್ 5 ರ ವಿತರಣೆಗಾಘಿ ಚಿನ್ನದ ಫ್ಯೂಚರ್‌ ಬೆಲೆ ಪ್ರತಿ 10 ಗ್ರಾಂಗೆ 87 ಕುಸಿತವನ್ನು ದಾಖಲಿಸಿದ ನಂತರ 62,525 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ಸೆಷನ್‌ನಲ್ಲಿ 62,562 ರೂ. ಇತ್ತು.2024ರ ಮಾರ್ಚ್ 5 ವಿತರಣೆಗಾಗಿ ಬೆಳ್ಳಿಯ ಫ್ಯೂಚರ್‌ ಬೆಲೆ ಪ್ರತಿ ಕೆಜಿಗೆ 276 ರೂ. ಕುಸಿತ ಕಂಡು ಕೆಜಿಗೆ 71,029 ರೂ.ನಂತೆ ವಹಿವಾಟು ನಡೆಸುತ್ತಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್‌ 10 ಗ್ರಾಂ)

  • ಹೊಸದಿಲ್ಲಿ: 58,100 ರೂಪಾಯಿ
  • ಮುಂಬೈ: 57,950 ರೂಪಾಯಿ
  • ಕೋಲ್ಕತ್ತಾ: 57,950 ರೂಪಾಯಿ
  • ಚೆನ್ನೈ: 58,500 ರೂಪಾಯಿ

advertisement

Leave A Reply

Your email address will not be published.