Karnataka Times
Trending Stories, Viral News, Gossips & Everything in Kannada

Bhagyalaxmi Scheme: ಹೆಣ್ಣು ಮಕ್ಕಳು ತಂದೆ ತಾಯಿಯರಿಗೆ ಭಾರವಾಗಬಾರದು, ಇದಕ್ಕಾಗಿ ಸರ್ಕಾರ ಈ ಯೋಜನೆಯಲ್ಲಿ ನೀಡುತ್ತಿದೆ 2 ಲಕ್ಷ ರೂಪಾಯಿ!

advertisement

ಹಿಂದೆಲ್ಲ ಹೆಣ್ಣು ಮಕ್ಕಳು ಜನಿಸಿದರೆ ಮಕ್ಕಳನ್ನು ಕೆಟ್ಟದ್ದು ಹೊರೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಸರಕಾರ ನೀಡುವ ಯೋಜನೆ ಸಾಮಾಜಿಕ ವ್ಯವಸ್ಥೆ ಎಲ್ಲ ಬದಲಾಗುತ್ತಿರುವ ಹಿನ್ನೆಲೆ ಈ ರೀತಿಯ ಭಾವನೆ ಕೂಡ ಕಾಲ ಕ್ರಮೇಣ ಬದಲಾಗುತ್ತಾ ಸಾಗಿದೆ ಎಂದು ಹೇಳಬಹುದು. ಹೆಣ್ಣು ಮಕ್ಕಳಿಗೆ ಇಂದು ಪ್ರತಿ ಹಂತದಲ್ಲಿ ಮೀಸಲಾತಿ ಅವಕಾಶ ನೀಡುತ್ತಾ ಬರಲಾಗುತ್ತಿದೆ ಅದೇ ರೀತಿ ಹೆಣ್ಣು ಮಗು ಜನಿಸಿದ ಕೂಡಲೇ ಯೋಜನೆಯೊಂದು ಈಗಾಗಲೇ ಆರಂಭ ಆಗಿದ್ದು ಇದರಿಂದ ಮಗುವಿನ ತಂದೆ ತಾಯಿಗೆ ದೊಡ್ಡ ಮಟ್ಟಿಗೆ ಲಾಭ ಆಗಲಿದೆ.

ಯಾವುದು ಈ ಯೋಜನೆ?

ಈ ಯೋಜನೆಯ ಹೆಸರು ಭಾಗ್ಯಲಕ್ಷ್ಮೀ ಆಗಿದ್ದು ಮಗು ಜನಿಸಿದ ಬಳಿಕ ಪೋಷಕರಿಗೆ ನೀಡಲಾಗುವ ಸಹಾಯಧನದ ವ್ಯವಸ್ಥೆ ಎನ್ನಬಹುದು. ಹೆಣ್ಣು‌ಮಕ್ಕಳ ಜನನ ವಾಗದಂತೆ ನಡೆಯುತ್ತಿದ್ದ ಭ್ರುಣ ಹತ್ಯೆ ತಡೆಯುವ ಸಲುವಾಗಿ ಸರಕಾರ ಅನೇಕ ಯೋಜನೆ ಈಗಾಗಲೇ ಪರಿಚಯಿಸಿದ್ದು ಹೆಣ್ಣು ಮಕ್ಕಳ ಉಳಿವಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗುತ್ತಿದ್ದು ಭಾಗ್ಯ ಲಕ್ಷ್ಮೀ ಯೋಜನೆ (Bhagyalaxmi Scheme) ಮೂಲಕ ಮಗುವಿನ ಹೆಸರಿಗೆ 50 ಸಾವಿರ ರೂಪಾಯಿ ನೀಡುವ ಬಾಂಡ್ ನೀಡಲಾಗುತ್ತದೆ. ಇದು ಮಕ್ಕಳ ಭವಿಷ್ಯಕ್ಕೆ ಸಾಕಷ್ಟು ಉಪಯೋಗ ಆಗಲಿದೆ.

2 ಲಕ್ಷ ರೂಪಾಯಿ:

 

 

advertisement

ಜನಿಸಿದ ಮಗುವಿಗೆ 21ವರ್ಷ ಆದ ಬಳಿಕ 2 ಲಕ್ಷ ರೂಪಾಯಿಯನ್ನು ಭಾಗ್ಯ ಲಕ್ಷ್ಮೀ ಯೋಜನೆ (Bhagyalaxmi Scheme) ಅಡಿಯಲ್ಲಿ ನೀಡಲಾಗುತ್ತದೆ. ಅದನ್ನು ಆ ಹೆಣ್ಣು ಮಗುವಿನ ಶಿಕ್ಷಣ , ಮದುವೆ ಇನ್ನಿತರ ವೆಚ್ಚಕ್ಕೆ ಬಳಸಬಹುದಾಗಿದೆ. ಈ ಮೂಲಕ ಸರಕಾರ ದಿಂದ ನಿಗದಿತ ಮೊತ್ತ ಬರುವ ಜೊತೆಗೆ ಪೋಷಕರು ಕಂತಿನ ರೂಪದಲ್ಲಿ ಕಟ್ಟಿದ್ದ ಮೊತ್ತ ಎರಡು ಸೇರಿಸಿ ಬಡ್ಡಿ ಕೂಡ ಸೇರಿಸಿ ಆ ಹೆಣ್ಣು ಮಗುವಿಗೆ ನಿರ್ದಿಷ್ಟ ಅವಧಿ ಮುಗಿದ ಬಳಿಕ ನೀಡಲಾಗುತ್ತದೆ.

ಶೈಕ್ಷಣಿಕ ನೆರವು:

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ ಹಾಗಾಗಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಲು ಅನೇಕ ಯೋಜನೆ ಪರಿಚಯಿಸಲಾಗಿದ್ದು ಅದರಲ್ಲಿ ಶೈಕ್ಷಣಿಕ ಸಹಾಯಧನ ಕೂಡ ಕಾಣಬಹುದು. 6 ನೇ ತರಗತಿ ವಿದ್ಯಾಭ್ಯಾಸ ಮಾಡಲು 3000 ರೂ., 8ನೇ ತರಗತಿಗೆ 5000, ಎಸೆಸೆಲ್ಸಿಗೆ 7,000 ಹಾಗೂ ಪಿಯು ವ್ಯಾಸಾಂಗ ಮಾಡಲು 8000 ಒಟ್ಟು 23,000 ರೂಪಾಯಿ ಶೈಕ್ಷಣಿಕ ಅಗತ್ಯತೆಗೆಂದು ಸರಕಾರ ಹೆಣ್ಣುಮಕ್ಕಳಿಗಾಗಿ ನೀಡುತ್ತಿದೆ.

ಫಲಾನುಭವಿಗಳಾಗಬೇಕೆ?

ಈ ಯೋಜನೆಗೆ ನೀವು ಫಲಾನುಭವಿಗಳಾಗಬೇಕಾದರೆ ಕೆಲ ಅಗತ್ಯ ಕ್ರಮ ಅನುಸರಿಸಬೇಕು. ವಾರ್ಷಿಕ ಆದಾಯ ಎರಡು ಲಕ್ಷ ಮೀರಿದದೇ ಭಾರತೀಯ ಪ್ರಜೆಯಾಗಿದ್ದು ಹೆಣ್ಣು ಮಗು ಜನಿಸಿದರೆ ಈ ಯೋಜನೆಗೆ ಫಲಾನುಭವಿಗಳಾಗಬಹುದು. ಒಂದು ಕುಟುಂಬದ ಇಬ್ಬರು ಹೆಣ್ಣು ಮಗುವಿಗೆ ಈ ಯೋಜನೆ ಸಿಗಲಿದೆ. ಮೊದಲಿಗೆ ಅಂಗನವಾಡಿ ಕೇಂದ್ರಕ್ಕೆ ಹೋಗಿ ರಿಜಿಸ್ಟ್ರೆಶನ್ ಮಾಡಬೇಕು.ಅಲ್ಲಿ ಮಗುವಿನ ಜನನ ಪತ್ರ, ಪೋಷಕರ ಆಧಾರ್ ಪ್ರತಿ, ಜಾತಿ – ಆದಾಯ ಪ್ರಮಾಣ ಪತ್ರ, ಫೋನ್ ಸಂಖ್ಯೆ, ಬ್ಯಾಂಕ್ ದಾಖಲಾತಿ ನೀಡಬೇಕು ಬಳಿಕ ಮಗುವಿಗೆ 21 ವರ್ಷವಾದಾಗ ಯೋಜನೆ ಸಿಗಲಿದೆ. 2006 ಮಾರ್ಚ್ 31ರ ಬಳಿಕ ಜನಿಸಿದ್ದವರು ಮಾತ್ರ ಅರ್ಹರು ಎಂಬುದು ನೀವು ಗಮನಿಸಬೇಕಿದೆ.

advertisement

Leave A Reply

Your email address will not be published.