Karnataka Times
Trending Stories, Viral News, Gossips & Everything in Kannada

Tobacco: ಈ ನಿಯಮ ಮೀರಿದರೆ ತಂಬಾಕು ಉತ್ಪನ್ನ ಮಾರಾಟಗಾರರಿಗೆ ದಂಡ ವಸೂಲಿ!

advertisement

ತಂಬಾಕು (Tobacco) ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅದರ ಸೇವನೆ ಮಾಡಬಾರದು ಎಂದು ಸರಕಾರ ಎಷ್ಟು ಬಾರಿ ಎಚ್ಚರಿಸಿದರೂ ಕೊಳ್ಳುವವರು ಮಾತ್ರ ಆರೋಗ್ಯ ಕಾಳಜಿ ಇಲ್ಲದೆ ನಿತ್ಯ ಸೇವನೆ ಮಾಡುತ್ತಿರುತ್ತಾರೆ. ಹಾಗಾಗಿ ಅದರ ಉತ್ಪಾದನೆ, ಮಾರಾಟ ಕೂಡ ಲಂಗು ಲಗಾಮಿಲ್ಲದೇ ಎಲ್ಲೇ ಮೀರಿ ನಡೆಯುತ್ತಿದೆ. ಹಾಗಾಗಿ ಕೇಂದ್ರ ಸರಕಾರ ಹೊಸ ನಿಯಮ ಜಾರಿಗೆ ತರುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಪಾನ್, ಗುಟ್ಕ ಮಾರುವವರಿಗೆ ಈ ವಿಚಾರ ದೊಡ್ಡ ಮಟ್ಟಿಗೆ ಶಾಖ್ ನೀಡಬಹುದು ಎಂದು ಹೇಳಬಹುದು.

ಇನ್ನು ಮುಂದೆ ನೋಂದಣಿ ಕಡ್ಡಾಯ:

ತಂಬಾಕು (Tobacco), ಪಾನ್ ಮಸಾಲ (PAN Masala), ಗುಟ್ಕ (Gutka), ಜರ್ದಾ (Zarda) ಇತರ ತಂಬಾಕಿನ ಉತ್ಪನ್ನವನ್ನು ಪ್ಯಾಕ್ ಮಾಡಿ ಮಾರಾಟ ಮಾಡುವವರು ನಾವಿಂದು ತಿಳಿಸಹೊರಟಿರುವ ವಿಚಾರ ತಿಳಿಯಲೇ ಬೇಕು. ತಂಬಾಕು ಉತ್ಪನ್ನವನ್ನು ಪ್ಯಾಕ್ ಮಾಡಿ ಮಾರಾಟ ಮಾಡುವವರು ಕೇಂದ್ರ ಸರಕಾರದ ಹೊಸ ನಿಯಮ ಅರಿಯಬೇಕು. ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಪ್ಯಾಕ್ ಮಾಡುವವರು ಕಡ್ಡಾಯವಾಗಿ ಪ್ಯಾಕಿಂಗ್ ಮೆಷಿನ್ ಅನ್ನು ಜಿಎಸ್ ಟಿ (GST) ಕಚೇರಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ತಪ್ಪಿದರೆ ಬಾರೀ ಮೊತ್ತದ ದಂಡ ಕೂಡ ಬರಿಸಬೇಕಿದೆ.

ದೊಡ್ಡ ಮೊತ್ತದ ದಂಡ:

 

 

advertisement

ಪ್ಯಾಕಿಂಗ್ ಮೆಷಿನ್ ಅನ್ನು ನೋಂದಣಿ ಮಾಡಿಸದೇ ಇದ್ದರೆ ಒಂದು ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ಈ ಬಗ್ಗೆ ಕಳೆದ ವರ್ಷವೇ ಜಿಎಸ್ ಟಿ ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ಈಗ ಕಾರ್ಯ ವ್ಯಾಪ್ತಿಗೆ ಬರಲಿದೆ. ಎಪ್ರಿಲ್ ಒಂದರಿಂದ ನಿಯಮ ಜಾರಿಯಾಗಲಿದ್ದು ಅಷ್ಟರೊಳಗೆ ನೋಂದಣಿ ಮಾಡಿಸದಿರುವವರು ಈ ಬಗ್ಗೆ ಎಚ್ಚೆತ್ತುಕೊಳ್ಳಿ. ಹಾಗಾಗಿ ಎಪ್ರಿಲ್ ಒಂದರ ಒಳಗೆ ನೋಂದಣಿ ಮಾಡಿಸದೇ ಪ್ಯಾಕಿಂಗ್ ಮೆಷಿನ್ ಬಳಸುವುದುವಕಂಡು ಬಂದರೆ ಅವರಿಗೆ ಒಂದು ಲಕ್ಷ ದಂಡ ಹಾಕಲಾಗುತ್ತದೆ.

ಸಮಿತಿ ಸಭೆಯಲ್ಲಿ ಚರ್ಚೆ:

2023ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ (Nirmala Sitharaman) ಜಿಎಸ್ ಟಿ ಸಮಿತಿ ಸಭೆ ನಡೆಯುವಾಗ ತಂಬಾಕು ಉತ್ಪಾದನೆ ಪ್ಯಾಕಿಂಗ್ ಮೆಷಿನ್ ಬಗ್ಗೆ ಚರ್ಚೆ ನಡೆಸಲಾಯಿತು. ಆ ಸಭೆಯಲ್ಲಿ ತಂಬಾಕು ಉತ್ಪನ್ನಗಳ ಉತ್ಪಾದನ ಮಿತಿ ಸಹ ಅರಿವಿಗೆ ಕೂಡ ಬರಲಿಲ್ಲ ಹಾಗಾಗಿ ಆದಾಯ ಸೋರಿಕೆ ಆಗಿದ್ದ ವಿಚಾರ ತಿಳಿದು ಬಂದಿತ್ತು. ನೋಂದಣಿ ಮಾಡಿಸದೇ ಅಕ್ರಮ ಮಾರ್ಗದ ಮೂಲಕ ತಂಬಾಕು ಮಾರಾಟ ಮಾಡಲಾಗುತ್ತಿದ್ದು ಇದಕ್ಕೆ ನಿಯಮ ಕಡ್ಡಾಯ ಎಂದು ಹೇಳಲಾಗಿತ್ತು. ಈ ಮೂಲಕ ಎಲ್ಲ ತರನಾದ ವರದಿ ಪರಿಶೀಲಿಸಿ ಈ ಕ್ರಮ ಜಾರಿ ತರಲು ಮುಂದಾಗಲಾಗಿದೆ.

ಯಾಕಾಗಿ ಈ ಯೋಜನೆ ಜಾರಿಗೆ ಬಂದಿದೆ:

ತಂಬಾಕು ಉತ್ಪಾದನೆ ಮತ್ತು ಮಾರಾಟವು ಒಂದು ಲಾಭದಾಯಕ ಕ್ಷೇತ್ರವಾಗಿದ್ದು ಇದರಲ್ಲಿ ಆದಾಯ ಸೋರಿಕೆ ಎನ್ನುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಾಗಿ ಆದಾಯ ಸೋರಿಕೆ ತಡೆಗಟ್ಟುವ ನೆಲೆಯಲ್ಲಿ ಪ್ಯಾಕಿಂಗ್ ಮೆಷಿನ್ ಗಳಿಗೆ ನೋಂದಣಿ ಕಡ್ಡಾಯ ಮಾಡಲಾಗಿದೆ. 2023ರ ಸೆಂಟ್ರಲ್ ಜಿಎಸ್ ಟಿ ಮೂಲಕ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಕಳೆದ ವರ್ಷದಲ್ಲೇ ಈ ಬಗ್ಗೆ ಜಿಎಸ್ ಟಿ ಅಧಿಕಾರಿಗಳು ಸೂಚನೆ ನೀಡಿದ್ದರೂ ನಿಯಮ ಮೀರಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ಅನೇಕರಿಗೆ ದಂಡ ಸಹ ವಿಧಿಸಲಾಗಿತ್ತು.

advertisement

Leave A Reply

Your email address will not be published.