Karnataka Times
Trending Stories, Viral News, Gossips & Everything in Kannada

Gold Price In Dubai: ಹೆಚ್ಚಿನ ಜನ ದುಬೈನಲ್ಲಿ ಚಿನ್ನ ಖರೀದಿಸ್ತಾರೆ, ಅಷ್ಟಕ್ಕೂ ದುಬೈನಲ್ಲಿ 24ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?

advertisement

ಚಿನ್ನ ಅಥವಾ ಬಂಗಾರ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಬಂಗಾರ ಪ್ರಿಯರೇ ಆಗಿರುತ್ತಾರೆ. ಯಾವುದೇ ಮಹಿಳೆ ಯಾವುದೇ ಸಮಾರಂಭಕ್ಕೆ ಪಾಲ್ಗೊಳ್ಳಬೇಕು ಅಂದ್ರೆ ಚಿನ್ನ ಖರೀದಿ ಮಾಡುವುದು, ಚಿನ್ನಾಭರಣ ತೊಡುವುದು ಸಹಜ. ಅದೇ ರೀತಿ ಸಾಕಷ್ಟು ಪುರುಷರು ಚಿನ್ನದ ಮೇಲೆ ಹೂಡಿಕೆ ಕೂಡ ಮಾಡುತ್ತಾರೆ. ಚಿನ್ನದ ಹೂಡಿಕೆ ಅತ್ಯಂತ ಉತ್ತಮ ಉಳಿತಾಯ ಎನಿಸಿಕೊಂಡಿದೆ.

ಚಿನ್ನದ ಬೆಲೆ (Gold Rate) ದೇಶದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಇಂತಹ ಸಮಯದಲ್ಲಿ ನಿಮಗೆ ನಾವು ಗುಡ್ ನ್ಯೂಸ್ ಒಂದನ್ನು ನೀಡುತ್ತಿದ್ದೇವೆ. ನೀವು ಹೆಚ್ಚಾಗಿ ಕೇಳಿರಬಹುದು ದುಬೈ ನಿಂದ ಚಿನ್ನ ಖರೀದಿ ಮಾಡಿಕೊಂಡು ಬರುವ ಬಗ್ಗೆ. ದುಬೈನಲ್ಲಿ ಚಿನ್ನ ಶುದ್ಧತೆಯ ದೃಷ್ಟಿಯಿಂದ ಮಾತ್ರವಲ್ಲದೆ ಅಗ್ಗವು ಆಗಿರುವುದರಿಂದ ದುಬೈ ನಿಂದ ಚಿನ್ನ ಖರೀದಿಸಿಕೊಂಡು ತರಲಾಗುತ್ತದೆ.

ದುಬೈ ಚಿನ್ನದ ಬೆಲೆ!

ದುಬೈನಲ್ಲಿ 10 ಗ್ರಾಂ, 24 ಕ್ಯಾರೆಟ್ ಚಿನ್ನದ ಬೆಲೆ (Gold Price In Dubai) 2450 ದಿರ್ಹಮ್. ಅಂದ್ರೆ ಭಾರತೀಯ ಹಣದಲ್ಲಿ ಹೇಳುವುದಾದರೆ 55,434 ರೂ. ಭಾರತದಲ್ಲಿ ಈಗ ಇಷ್ಟು ಚಿನ್ನದ ಬೆಲೆ 64,000 ತಲುಪಿದೆ ರೂ. ತಲುಪಿದೆ. ಅಂದರೆ ಸರಿ ಸುಮಾರು 8,000 ರೂ.ಗಳನ್ನು ಪ್ರತಿ 10 ಗ್ರಾಂ ಚಿನ್ನದ ಮೇಲೆ ಉಳಿತಾಯ ಮಾಡಬಹುದು.

ದುಬೈ ಚಿನ್ನಕ್ಕೆ ಯಾಕೆ ಹೆಚ್ಚು ಬೇಡಿಕೆ ಗೊತ್ತಾ?

advertisement

ದುಬೈನಿಂದ ಆಭರಣ ಖರೀದಿ ಮಾಡುವುದಕ್ಕೆ ಅದು ಅಗ್ಗ ಎನ್ನುವುದು ಮಾತ್ರವಲ್ಲದೆ, ಇತರ ದೇಶಗಳಿಗೆ ಹೋಲಿಸಿದರೆ ದುಬೈ ಚಿನ್ನ ಹೆಚ್ಚು ಉತ್ತಮವಾಗಿರುತ್ತದೆ. ಶುದ್ಧತೆಯ ದೃಷ್ಟಿಯಿಂದ ದುಬೈ ಚಿನ್ನ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ದುಬೈನಲ್ಲಿ ಚಿನ್ನಾಭರಣ ಖರೀದಿ ಮಾಡಿದ್ರೆ ನಿಮಗೆ ಬಹಳ ವಿಶೇಷವಾದ ಡಿಸೈನ್ ದೊರಕುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಸಿಗದೇ ಇರುವಂತಹ ವಿಶೇಷವಾಗಿರುವ ವಿನ್ಯಾಸದ ಚಿನ್ನಾಭರಣ ಖರೀದಿ ಮಾಡುವುದಾದರೆ ದುಬೈ ಚಿನ್ನಾಭರಣ ಖರೀದಿ ಆಯ್ಕೆ ಮಾಡಿಕೊಳ್ಳಬಹುದು.

ದುಬೈ ನಿಂದ ಚಿನ್ನ ತರುವುದಕ್ಕೆ ತೆರಿಗೆ!

ನೀವು ವಿದೇಶದಿಂದ ಯಾವುದೇ ವಸ್ತು ಖರೀದಿ ಮಾಡಿಕೊಂಡು ತಂದರು ಅದಕ್ಕೆ ತೆರಿಗೆ ಪಾವತಿ ಮಾಡಲೇಬೇಕು. ಅದರಲ್ಲೂ ಚಿನ್ನ ಖರೀದಿಗೆ ಕಸ್ಟಮ್ ಸುಂಕವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ವಿದೇಶದಲ್ಲಿ ಎಷ್ಟು ಸಮಯ ಇದ್ದೀರಿ ಹಾಗೂ ನೀವು ತಂದಿರುವ ವಸ್ತು ಎಷ್ಟು ತೂಕದ್ದು ಎನ್ನುವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಯಾವುದೇ ಒಬ್ಬ ವ್ಯಕ್ತಿ ವರ್ಷಾನುಗಟ್ಟಲೆ ವಿದೇಶದಲ್ಲಿ ನೆಲೆಸಿ, ಅಲ್ಲಿಂದ ಚಿನ್ನ ಅಥವಾ ಇತರ ವಸ್ತು ತಂದರೆ ಆತನಿಗೆ ತೆರಿಗೆ ಪಾವತಿಸುವ ಮೊತ್ತ ಸ್ವಲ್ಪ ಕಡಿಮೆ ಇರುತ್ತದೆ. ಆದ್ರೆ ಕೇವಲ ಮೂರು ನಾಲ್ಕು ದಿನ ಪರ ದೇಶದಲ್ಲಿ ವಾಸಿಸಿ ಹಿಂತಿರುಗಿ ಬಂದರೆ ಅವರಿಗೆ ಇರುವ ಸುಂಕ ನಿಯಮಗಳು ಬೇರೆ.

ವಿದೇಶದಲ್ಲಿ ಒಂದು ವರ್ಷದವರೆಗೆ ವಾಸಿಸಿದ ಮಹಿಳೆ ಹಿಂತಿರುಗಿ ದೇಶಕ್ಕೆ ಬರುವಾಗ ತನ್ನ ಜೊತೆಗೆ 40 ಗ್ರಾಂ ಚಿನ್ನವನ್ನು ತರಬಹುದು. ಹಾಗೂ ಪುರುಷರು 20 ಗ್ರಾಂ ಚಿನ್ನವನ್ನು ತರಬಹುದು. ಇನ್ನು ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗಿದ್ದರೆ ಪುರುಷರು 50,000ಗಳ ಚಿನ್ನ ಖರೀದಿ ಮಾಡಬಹುದು ಹಾಗೂ ಮಹಿಳೆಯರು ಒಂದು ಲಕ್ಷ ರೂಪಾಯಿಗಳವರೆಗಿನ ಚಿನ್ನ ಖರೀದಿ ಮಾಡಿಕೊಂಡು ಬರಬಹುದು. ಕುಟುಂಬದ ಎಲ್ಲಾ ಸದಸ್ಯರು ಕೂಡ ಇದೇ ಮೊತ್ತದ ಚಿನ್ನ ಖರೀದಿ ಮಾಡಿಕೊಂಡು ಬರಬಹುದು. ಹಾಗಾಗಿ ಎಲ್ಲರೂ ಸೇರಿ ಚಿನ್ನ ಖರೀದಿ ಮಾಡಿದರೆ ಒಂದು ದೊಡ್ಡ ಮೊತ್ತದ ಚಿನ್ನವೇ ನಿಮ್ಮ ಕಬೋರ್ಡ್ ಸೇರಬಹುದು!!

advertisement

Leave A Reply

Your email address will not be published.