Karnataka Times
Trending Stories, Viral News, Gossips & Everything in Kannada

HC Balakrishna: ಕಾಂಗ್ರೆಸ್ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳು ಬಂದ್! ಶಾಸಕರ ಹೇಳಿಕೆ ವೈರಲ್.

advertisement

ರಾಜ್ಯದ ಜನತೆ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ. ತಮ್ಮ ಇಚ್ಛೆಗೆ ಅನುಗುಣವಾಗಿ ಮತ ಚಲಾಯಿಸುವ ಹಕ್ಕು ಕೂಡ ಇಲ್ಲದಂತೆ ಆಗಿದೆ. ಇದಕ್ಕೆ ಕಾರಣ ಏನು ಗೊತ್ತಾ? ಇತ್ತೀಚಿಗೆ ಸಂಸದ ಹೆಚ್ ಸಿ ಬಾಲಕೃಷ್ಣ, ಮಾಗಡಿ ತಾಲೂಕಿನ ಶ್ರೀ ಗಿರಿಪುರದ ಜನ ಸಂಪರ್ಕ ಸಭೆಯಲ್ಲಿ ಇಂತಹ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.

“ಅಕ್ಷತೆ ಕಾಳಿಗೆ ಆಸೆ ಬಿದ್ದು ಕೇಂದ್ರ ಸರ್ಕಾರದ ಪರವಾಗಿ ಮತ ಚಲಾಯಿಸಿದರೆ ಗ್ಯಾರಂಟಿ ಯೋಜನೆಗಳನ್ನ ಕ್ಯಾನ್ಸಲ್ ಮಾಡ್ತೀವಿ” ಹೆಚ್ ಸಿ ಬಾಲಕೃಷ್ಣ (H C Balakrishna) .. ಹೌದು, ರಾಮಮಂದಿರದ ಅಕ್ಷತೆಯ ಆಸೆಗೆ ಬಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ನೀಡದೆ ಬಿಜೆಪಿಗೆ ಮತ ಹಾಕಿದರೆ ನಿಮಗೆ ಈಗ ಕೊಡುತ್ತಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕ್ಯಾನ್ಸಲ್ ಮಾಡುತ್ತೇವೆ. ಹಾಗಾಗಿ ಅಕ್ಷತೆಗೆ ಮತ ಕೊಡುತ್ತೀರೋ ಅಥವಾ ಗ್ಯಾರಂಟಿ ಯೋಜನೆಗೂ ಎನ್ನುವುದನ್ನು ವಿಚಾರ ಮಾಡಿ. ನೀವು ಕಾಂಗ್ರೆಸ್ ಗೆ ಮತ ನೀಡಿಲ್ಲ ಎಂದರೆ ನಿಮಗೆ ಗ್ಯಾರೆಂಟಿ ಯೋಜನೆಯ ಅಗತ್ಯ ಇಲ್ಲ ಎಂದು ತಾನೇ ಅರ್ಥ? ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಬಳಿ ಕೂಡ ಚರ್ಚೆ ನಡೆಸಲಾಗಿದೆ. ಒಂದು ವೇಳೆ ಕಾಂಗ್ರೆಸ್ ಪರವಾಗಿ ಮತ ಚಲಾಯಿಸದೆ ನಮ್ಮ ವಿರುದ್ಧವಾಗಿ ಮತ ಚಲಾಯಿಸಿ, ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರೆ ಈಗ ಕೊಡುತ್ತಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್ ಆಗುತ್ತವೆ.

advertisement

ರಾಜ್ಯ ಸರ್ಕಾರ ಮಹಿಳೆಯರಿಗೆ ಶೇಕಡ 90ರಷ್ಟು ಸಹಾಯ ಮಾಡಿದೆ. ಯುವಕರಿಗೂ ಧನ ಸಹಾಯ ನೀಡುತ್ತಿದೆ. ಎಲ್ಲಾ ಪ್ರಯೋಜನಗಳು ಮುಂದುವರಿಬೇಕು ಅಂದ್ರೆ ನಿಮ್ಮ ಮತ ಕಾಂಗ್ರೆಸ್ ಪರವಾಗಿ ಇರಬೇಕು ಎಂದು, ಹೆಚ್ ಸಿ ಬಾಲಕೃಷ್ಣ ಹೇಳಿದ್ದಾರೆ.

ಡಿಕೆ ಸುರೇಶ್ ಪರವಾಗಿ ಮತ ನೀಡಿ!

ಇನ್ನು ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಸಚಿವ ಹೆಚ್ ಸಿ ಬಾಲಕೃಷ್ಣ, ಡಿಕೆ ಸುರೇಶ್ ಪರವಾಗಿ ಮತ ಚಲಾಯಿಸುವಂತೆ ತಾಕೀತು ಮಾಡಿದ್ದಾರೆ. ಒಂದು ವೇಳೆ ನೀವು ಕಾಂಗ್ರೆಸ್ ಅನ್ನು ಬಹುಮತದಿಂದ ಆಯ್ಕೆ ಮಾಡದೆ ಇದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ತಿರಸ್ಕಾರ ಮಾಡಿದ್ದೀರಿ ಎಂದು ತಿಳಿದು ಅವುಗಳನ್ನು ಕ್ಯಾನ್ಸಲ್ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಬಾಲಕೃಷ್ಣ ಅವರ ಈ ಬ್ಲಾಕ್ ಮೇಲ್ ಬಹು ಚರ್ಚೆಗೆ ಕಾರಣವಾಗಿದೆ.

advertisement

Leave A Reply

Your email address will not be published.