Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ನಲ್ಲಿನ ಹೆಸರು ಬದಲಾವಣಗೆ ಎಷ್ಟು ಬಾರಿ ಅವಕಾಶ ಇದೆ? ರೂಲ್ಸ್ ತಿಳಿದುಕೊಳ್ಳಿ!

advertisement

ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಜಾರಿಗೆ ಬಂದ ಮೇಲೆ ಅತ್ಯಂತ ಪ್ರಮುಖವಾದ ದಾಖಲೆ ಆಗಿ ಹೋಗಿದೆ. ಯಾವುದೇ ಸರ್ಕಾರಿ ಕಚೇರಿಯ ಕೆಲಸ ಇರಲಿ ಅಥವಾ ಪ್ರೈವೇಟ್ ಕಂಪನಿಗಳಲ್ಲಿಯೇ ಇರಲಿ ಆಧಾರ್ ಖಂಡಿತ ಕೇಳುವ ಒಂದು ಪ್ರಮುಖ ದಾಖಲೆ ಆಗಿರುತ್ತದೆ. ಹಲವು ದಾಖಲೆಗಳನ್ನು ಹೊಂದುವ ಬದಲು ಒಂದು ಆಧಾರ್ ಕಾರ್ಡ್ ಇದ್ದಾಗ ಕೆಲಸ ಸುಲಭವಾಗಿ ಆಗುತ್ತದೆ. ನಾವು ವಾಸಿಸುವ ಸ್ಥಳವನ್ನು ಬದಲಾಯಿಸುತ್ತಿದ್ದಂತೆ ವಿಳಾಸವನ್ನು ಬದಲಾಯಿಸುತ್ತಾ ಇರಬಹುದು ಇದೇ ರೀತಿ ಹಲವಾರು ಬದಲಾವಣೆಗಳನ್ನು ಆಧಾರದಲ್ಲಿ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಮಾಡಿಕೊಳ್ಳಬಹುದು ಇದು ಮಾಡಿಕೊಳ್ಳುವುದು ಬಹಳ ಅಗತ್ಯ ಆಗಿರುತ್ತದೆ. ಇದರಿಂದ ನಮ್ಮ ವಿಳಾಸ ಅಪ್ಡೇಟ್ ಆಗುತ್ತಾ ಇರುತ್ತದೆ.

ಹೀಗೆ ಮಾಡಿಕೊಂಡು ಬದಲಾವಣೆಗಳು ಎಷ್ಟು ಬಾರಿ ದಾರಿಯಾದರೂ ಮಾಡಬಹುದೇ ಅಥವಾ ಅದಕ್ಕೆ ಯಾವುದಾದರೂ ಮಿತಿಗಳು ಇವೆಯೇ ಎಂಬುದು ನಿಮಗೆ ಗೊತ್ತೇ ? ಹಲವಾರು ದಾಖಲೆಗಳು ಇಷ್ಟೇ ಬಾರಿ ಬದಲಾವಣೆ ಮಾಡಬಹುದು ಎಂಬ ಮಿತಿಯೊಂದಿಗೆ ಬರುತ್ತವೆ ಇದೇ ರೀತಿ ಆಧಾರ್ ನಲ್ಲಿ ಕೂಡ ಹಲವಾರು ವಿವರಗಳನ್ನು ಎಷ್ಟು ಬಾರಿಯಾದರೂ ಬದಲಾಯಿಸಬಹುದಾದರೆ ಇನ್ನೂ ಕೆಲವು ವಿವರಗಳನ್ನು ಬದಲಾಯಿಸಲು ಮಿತಿಗಳನ್ನು ನೀಡಲಾಗಿದೆ.

advertisement

ಹೆಸರನ್ನು ಎಷ್ಟು ಬಾರಿ ಬದಲಾಯಿಸಬಹುದು ?

ಆಧಾರ್ ಕಾರ್ಡನ್ನು ನಮಗೆ ನೀಡುವ ಯು ಎ ಡಿ ಎ ಐ (UADAI) ನಿಮಗೆ ಆಧಾರ್ ಕಾರ್ಡ್ ನ ವಿವರಗಳನ್ನು ಬದಲಾವಣೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಆದರೆ ಎಷ್ಟು ಬಾರಿ ಈ ಬದಲಾವಣೆಗಳನ್ನು ಎಷ್ಟು ಬಾರಿ ಮಾಡಬಹುದು ಎಂಬುದು ನಮಗೆ ಗೊತ್ತಿರಬೇಕು. ವಿಳಾಸವನ್ನು ನಾವು ಮನೆ ಬದಲಾವಣೆ ಮಾಡಿದಂತೆ ಬದಲಾಯಿಸಿಕೊಳ್ಳಬಹುದು. ಕೆಲಸ ಹುಡುಕುತ್ತಾ ಬೇರೆ ಊರುಗಳಿಗೆ ಅಥವಾ ಒಂದೇ ಊರಿನ ಬೇರೆ ಕಡೆ ವಾಸ್ತವ್ಯ ಹೂಡುವುದು ಸಾಮಾನ್ಯ ಮತ್ತು ಅಗತ್ಯ. ಇದಕ್ಕಾಗಿ ವಿಳಾಸ ಬದಲಾವಣೆಗೆ ಯಾವುದೇ ಮಿತಿ ನೀಡಲಾಗಿಲ್ಲ. ಆದರೆ ಹೆಸರಿನಲ್ಲಾಗುವ ಬದಲಾವಣೆಗೆ ಮಿತಿ ಇದೆ ಈ ಮಿತಿ ಎಷ್ಟು ಎಂಬುದು ಈಗ ನೋಡೋಣ.

ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ನಿಮಗೆ ಯು ಎ ಡಿ ಎ ಐ ಎರಡು ಬಾರಿ ಮಾತ್ರ ಅವಕಾಶ ನೀಡುತ್ತದೆ. ಮೊದಲಬಾರಿ ನಾವು ಆಧಾರ್ ಕಾರ್ಡ್ ಮಾಡಿಸಿದಾಗ ಯಾವುದಾದರೂ ಬದಲಾವಣೆ ಕಂಡುಬಂದಲ್ಲಿ ಇದನ್ನು ಮಾಡಿಕೊಳ್ಳಬಹುದು. ಮುಂದೆ ಯಾವತ್ತಾದರೂ ಹೆಸರಿನಲ್ಲಿ ಬದಲಾವಣೆ ಮಾಡಿದಾಗ ಹೆಸರು ಬದಲಾವಣೆಗಾಗಿ ಆಯ್ಕೆ ಇರಬೇಕು ಎನ್ನುವ ಕಾರಣಕ್ಕಾಗಿ ಎರಡನೇ ಬದಲಾವಣೆಯನ್ನು ನೀಡುತ್ತದೆ ಆದರೆ ಎರಡಕ್ಕಿಂತ ಹೆಚ್ಚಿನ ಬಾರಿ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದಾದರೆ ಯುಎಡಿಎಐ ಶಾಖೆಗೆ ಹೋಗಿ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಿನಂತಿಯು 30 ದಿನಗಳಲ್ಲಿ ಸ್ವೀಕಾರ ಆಗುತ್ತದೆ. 30 ದಿನಗಳ ತನಕ ನಮ್ಮ ಅರ್ಜಿಯು ಸ್ವೀಕಾರ ಆಗದೆ ಇದ್ದಲ್ಲಿ 1947 ಗೆ ಡಯಲ್ ಮಾಡುವ ಮೂಲಕ ವಿನಂತಿ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.