Karnataka Times
Trending Stories, Viral News, Gossips & Everything in Kannada

Aadhaar Card: ಈ ರೀತಿ ಆಧಾರ್ ಕಾರ್ಡ್ ಬಳಸಿದರೆ 10,000 ದಂಡ, ಮೂರು ವರ್ಷ ಜೈಲು ಶಿಕ್ಷೆ!

advertisement

ನಾವು ಇಂದು ಯಾವುದೇ ರೀತಿಯ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ನ್ನು ಪ್ರಮುಖ ದಾಖಲೆಯಾಗಿ ಬಳಸಿಕೊಳ್ಳುತ್ತೇವೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ನೀವು ಸುಲಭವಾಗಿ ಸರ್ಕಾರದ ಯೋಜನೆಯ ಪ್ರಯೋಜನಗಳನ್ನು ಕೂಡ ಪಡೆಯಬಹುದು. ಆಧಾರ್ ಕಾರ್ಡ್ (Aadhaar Card) ಬಹಳ ಪ್ರಮುಖ ದಾಖಲೆಯಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ಅನ್ನೇ ಮುಖ್ಯ ಗುರುತಿನ ಚೀಟಿಯಾಗಿ ನೀಡಬೇಕಾಗುತ್ತದೆ.

ನಕಲಿ ಆಧಾರ್ ಕಾರ್ಡ್ ಹಾವಳಿ:

 

 

ಇತ್ತೀಚಿನ ದಿನಗಳಲ್ಲಿ ನಕಲಿ ಆಧಾರ್ ಕಾರ್ಡ್ (Aadhaar Card) ಹಾವಳಿ ಕೂಡ ಹೆಚ್ಚಾಗಿದೆ ಹಾಗಾಗಿ ಸರ್ಕಾರ ಇದನ್ನ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಭಾರೀ ಪ್ರಮಾಣದಲ್ಲಿ ದಂಡ ಜೊತೆಗೆ ಜೈಲು ಶಿಕ್ಷೆಯನ್ನು ಕೂಡ ವಿಧಿಸಲಿದೆ.

ಆಧಾರ್ ಕಾರ್ಡ್ ನಕಲಿ ಆಗಿದ್ದರೆ ಸುಲಭವಾಗಿ ಗುರುತಿಸಿ:

advertisement

ಆಧಾರ್ ಕಾರ್ಡ್ ನಕಲಿ ಎನ್ನುವುದನ್ನು ಗುರುತಿಸಿಕೊಳ್ಳಲು ಅಥವಾ ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆ ಯಾರೋ ನಕಲಿ ಮಾಡಿಕೊಂಡು ಬಳಸಿಕೊಳ್ಳುತ್ತಿದ್ದರೆ, ಅದನ್ನ ನೀವು ತಕ್ಷಣ ಆನ್ಲೈನ್ ಮೂಲಕವೇ ಪರಿಶೀಲಿಸಿಕೊಳ್ಳಬಹುದು.

ನಕಲಿ ಆಧಾರ್ ಕಾರ್ಡ್ ಕಂಡು ಹಿಡಿಯಲು, ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ YouTube ನಲ್ಲಿ ಅಧಿಕೃತವಾಗಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ ಈ ವಿಡಿಯೋ ನೋಡಿದರೆ ನಿಮಗೆ ನಕಲಿ ಆಧಾರ್ ಕಾರ್ಡ್ ಹೇಗೆ ಕಂಡುಹಿಡಿಯುವುದು ಎಂಬುದು ಅರ್ಥವಾಗುತ್ತದೆ.

ಆಧಾರ್ ಕಾರ್ಡ್ ಸಿಂಧುತ್ವವನ್ನು ಪರಿಶೀಲಿಸಲು ನೀವು UIDAI ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ಐಡಿ ಈ ರೀತಿ ಇದೆ www.uidai.gov.in ಇಲ್ಲಿ ಆಧಾರ್ ಸೇವಾ ವಿಭಾಗಕ್ಕೆ ಹೋಗಿ ಆಧಾರ್ ಸಂಖ್ಯೆ (Aadhaar Number) ಯನ್ನು ಪರಿಶೀಲಿಸಬೇಕು. ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಕೆಳಗೆ ಕೊಡಲಾಗಿರುವ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಬೇಕು.

ಈಗ ಪ್ರೊಸೀಡ್ ಟು ವೇರಿಫೈ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈ ರೀತಿ ಮಾಡಿದರೆ ನಿಮ್ಮ ಆಧಾರ್ ಪರಿಶೀಲನೆಗೊಳ್ಳುತ್ತದೆ ಹಾಗೂ ನಕಲಿ ಅಸಲಿ ಎನ್ನುವುದರ ಬಗ್ಗೆ ಮಾಹಿತಿ ಸಿಗುತ್ತದೆ.

ನಕಲಿ ಆಧಾರ್ ನೀಡಿದರೆ 10,000 ರೂಪಾಯಿ ದಂಡ:

ಒಂದು ವೇಳೆ ನೀವು ನಕಲಿ ಆಧಾರ್ ಕಾರ್ಡ್ (Fake Aadhaar card) ನೀಡಿ ಯಾವುದೇ ಕೆಲಸ ಮಾಡಿಕೊಳ್ಳುತ್ತಿದ್ದರೆ, ಇದು ಸರ್ಕಾರದ ಗಮನಕ್ಕೆ ಬಂದರೆ 10,000 ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆಯನ್ನು ಕೂಡ ವಿಧಿಸಬಹುದು. ಹಾಗಾಗಿ ಈ ಶಿಕ್ಷೆ ಹಾಗೂ ದಂಡದಿಂದ ಪಾರಾಗಲು ನೀವು ಸರಿಯಾಗಿರುವ ಒರಿಜಿನಲ್ ಆಧಾರ್ ಕಾರ್ಡ್ ಬಳಸುವುದು ಬಹಳ ಮುಖ್ಯ.

advertisement

Leave A Reply

Your email address will not be published.