Karnataka Times
Trending Stories, Viral News, Gossips & Everything in Kannada

RBI: 2000 ರೂಪಾಯಿ ನೋಟುಗಳ ವಿನಿಮಯ ಕುರಿತು ಮಹತ್ವದ ಸಂದೇಶ ಕೊಟ್ಟ ಅರ್ ಬಿಐ.

advertisement

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಗಾಟನೆ ನಡೆಯಲಿದೆ. ಈಗಾಗಲೇ ಇದರ ತಯಾರಿ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಅರ್ಧ ದಿನ ರಜೆಯನ್ನು ಘೋಷಿಸಿದೆ. ಅದೇ ರೀತಿ ಅಂದು ಸಾರ್ವಜನಿಕ ವಲಯದ ಬ್ಯಾಂಕ್ , ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಅಂದು ಅರ್ಧ ದಿನ ರಜೆ ಹೊಂದಿರುತ್ತವೆ.

ಅರ್ ಬಿ ಐ ಸ್ಪಷ್ಟನೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) 2000 ರೂಪಾಯಿಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಠೇವಣಿ ಮಾಡುವ ಸೌಲಭ್ಯದ ಕುರಿತು ಸ್ಪಷ್ಟನೆ ನೀಡಿದೆ. ಜನವರಿ 22, 2024 ರಂದು ನೋಟುಗಳನ್ನು ವಿನಿಮಯ ಮಾಡುವ ಅವಕಾಶ ವಿರುವುದಿಲ್ಲ. ಅಂದು ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವ ಕಾರಣದಿಂದಾಗಿ ಈ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಹೇಳಿದೆ. ಈ ಸೌಲಭ್ಯ ಜನವರಿ 23, 2024 ರಂದು ಪುನರಾರಂಭವಾಗಲಿದೆ ಎಂದು ಆರ್‌ಬಿಐ ಸ್ಪಷ್ಟ ಪಡಿಸಿದೆ.

advertisement

ಯಾವ ಬ್ಯಾಂಕ್ ಗಳಿಗೆ ರಜೆ

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಮಾತ್ರ ಕೇಂದ್ರ ಸರ್ಕಾರ ಅರ್ಧ ದಿನದ ರಜೆ ಘೋಷನೆ ಮಾಡಿದೆ. ಇದು ಖಾಸಗಿ ಬ್ಯಾಂಕ್‌ಗಳ ಮೇಲೆ ಅನ್ವಯ ವಾಗುವುದಿಲ್ಲ. ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಪ್ರಕಟನೆ ಮೂಲಕ ಎಲ್ಲಾ ಪಬ್ಲಿಕ್‌ ಸೆಕ್ಟರ್‌ ಬ್ಯಾಂಕ್‌ ಗಳು, ಜೀವವಿಮಾ ನಿಗಮ ಕಂಪನಿಗಳು, ಪಬ್ಲಿಕ್‌ ಸೆಕ್ಟರ್‌ ಹಣಕಾಸು ಸಂಸ್ಥೆಗಳು, ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಅರ್ಧ ದಿನದ ರಜೆ ಇರಲಿದೆ.

ಸುತ್ತೊಲೆಯಲ್ಲಿ ಏನಿದೆ?

ರಾಮ ಮಂದಿರ (Ram Mandir) ಉದ್ಘಾಟನೆ ಸಂಭ್ರಮ ಕಾಣಲು ಜನವರಿ 22 ರಂದು ಮಧ್ಯಾಹ್ನ 2:30 ರವರೆಗೆ ಬ್ಯಾಂಕ್‌ಗಳನ್ನು ಮುಚ್ಚಿರುತ್ತವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಉದ್ಘಾಟನೆ ದಿನವಾದ ಅಂದು ಜನವರಿ 22ರಂದು ಹಲವು ರಾಜ್ಯಗಳು ರಜೆ ಘೋಷಣೆ ಮಾಡಿದ್ದು ಉತ್ತರ ಪ್ರದೇಶ, ಗೋವಾ, ಹರಿಯಾಣ, ಛತ್ತೀಸ್‌ಗಢ, ತ್ರಿಪುರಾ, ಒಡಿಶಾ, ಗುಜರಾತ್ ಮತ್ತು ಅಸ್ಸಾಂ ರಾಜ್ಯದಲ್ಲಿ ರಜೆ ಇರಲಿದೆ.

advertisement

Leave A Reply

Your email address will not be published.