Karnataka Times
Trending Stories, Viral News, Gossips & Everything in Kannada

Atal Pension Yojana: ಮೆಚ್ಯೂರಿಟಿಯ ಮೊದಲು ಅಟಲ್ ಪಿಂಚಣಿ ಯೋಜನೆ ಹಣವನ್ನು ಹಿಂಪಡೆಯಬಹುದೇ? ಇಲ್ಲಿದೆ ಉತ್ತರ

advertisement

ಅಟಲ್ ಪಿಂಚಣಿ ಯೋಜನೆ (Atal Pension Yojana) ಕೇಂದ್ರ ಸರ್ಕಾರದ ಬಹು ಮುಖ್ಯವಾದ ಯೋಜನೆಯಾಗಿದ್ದು ಹೂಡಿಕೆಗೆ ಈ ಯೋಜನೆ ಬಹಳಷ್ಟು ಪ್ರೆರೆಪಿತವಾಗುತ್ತದೆ. ಇದನ್ನು ಪ್ರಧಾನಿ ಮೋದಿ (PM Modi) 2015 ರಲ್ಲಿ ಆರಂಭ ಮಾಡಿದ್ದು ನೀವು ವೃದ್ಧಾಪ್ಯದ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲು ಈ ಯೋಜನೆಯನ್ನು ಬಳಸಿಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮತ್ತು ಫಲಾನುಭವಿಯ ವಯಸ್ಸಿಗೆ ಅನುಗುಣವಾಗಿ ಪಿಂಚಣಿ ಮೊತ್ತವನ್ನು ನೀಡಲಾಗುತ್ತದೆ.

ಯಾವಾಗ ನೊಂದಾವಣೆ ಮಾಡಬಹುದು?

ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಅಪ್ಲೈ ಮಾಡಿದ್ರೆ ಬಹಳ ಉತ್ತಮ. ಹೌದು ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಮತ್ತು ನಿವೃತ್ತಿಯ ನಂತರ ಹೆಚ್ಚಿನ ಪ್ರಯೋಜನ ಪಡೆಯಲು ಈ ಯೋಜನೆ ಸಹಕಾರಿ. ಅಟಲ್ ಪಿಂಚಣಿ ಯೋಜನೆಯ (Atal Pension Yojana) ಲಾಭ ಪಡೆಯಲು ವ್ಯಕ್ತಿಯ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು. 40 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಈ ಯೋಜನೆಯ ಲಾಭ ಪಡೆಯಲು ಸಾಧ್ಯ ಇಲ್ಲ.

ಇಷ್ಟು ಮೊತ್ತ ಪಾವತಿಸಿ:

ಪ್ರತಿ ತಿಂಗಳು ಕೇವಲ 210 ರೂಪಾಯಿ ಪಾವತಿಸಿದರೆ ಸಾಕು. 60 ವರ್ಷಗಳ ನಂತರ ಪ್ರತಿ ತಿಂಗಳು 5,000 ರೂ. ಪಿಂಚಣಿ (Pension) ಸೌಲಭ್ಯ ಪಡೆಯಲು ಅವಕಾಶ ಇದೆ. 35 ನೇ ವಯಸ್ಸಿನಲ್ಲಿ ಪಿಂಚಣಿ ಆರಂಭ ಮಾಡಿದ್ರೆ 25 ವರ್ಷಗಳವರೆಗೆ ನೀವು ಪ್ರತಿ 6 ತಿಂಗಳಿಗೊಮ್ಮೆ 5,323 ರೂ. ಪಡೆಯಬಹುದು. ನಿಮ್ಮ ಒಟ್ಟು ಹೂಡಿಕೆಯು 2.66 ಲಕ್ಷ ಮೊತ್ತ ಆಗಿರುತ್ತದೆ.

advertisement

ಮೊದಲು ಪಡೆಯಬಹುದೇ?

 

 

ಅಟಲ್ ಪಿಂಚಣಿ ಯೋಜನೆ (Atal Pension Yojana) ಹಣವನ್ನು ಅರ್ಜಿದಾರರು 60 ವರ್ಷಕ್ಕಿಂತ ಮೊದಲು ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯ ಬೇಕು ಎಂದು ಇದ್ದರೆ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ಅಥವಾ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯಲು ಅವಕಾಶ ಇದೆ.

ಮರಣದ ನಂತರ ಯಾರಿಗೆ ಸಲುತ್ತದೆ?

ಈ ಯೋಜನೆಯ ಚಂದಾದಾರರು ಒಂದು ವೇಳೆ ಮರಣ ಹೊಂದಿದ್ದಲ್ಲಿ ಸಂಗಾತಿಗೆ ಅದೇ ಮೊತ್ತದ ಪಿಂಚಣಿಯನ್ನು ಪಾವತಿ ಮಾಡಲಾಗುತ್ತದೆ. ಒಂದು ವೇಳೆ ಚಂದಾದಾರರು ಮತ್ತು ಸಂಗಾತಿ ಇಬ್ಬರೂ ಪಿಂಚಣಿ ಪಡೆಯುವ ಮೊದಲೇ ನಿಧನರಾದರೆ ಪಿಂಚಣಿ ಮೊತ್ತ ನಾಮನಿರ್ದೇಶಿತರಿಗೆ ಸಲ್ಲುತ್ತದೆ.

advertisement

Leave A Reply

Your email address will not be published.