Karnataka Times
Trending Stories, Viral News, Gossips & Everything in Kannada

Indian Railways: ರೈಲು ಪ್ರಯಾಣಿಕರು ಇನ್ಮುಂದೆ ಈ ನಿಯಮ ಪಾಲಿಸೋದು ಕಡ್ಡಾಯ, ತಪ್ಪಿದ್ದಲ್ಲಿ ಭಾರಿ ದಂಡ ವಿಧಿಸಲಾಗುತ್ತೆ!

advertisement

ಇಂದು ಬಸ್ ಗಿಂತ ಹೆಚ್ಚಾಗಿ ಪ್ರಯಾಣಿಕರು ರೈಲು ಪ್ರಯಾಣವನ್ನೆ ಇಷ್ಟ ಪಡುತ್ತಾರೆ. ಯಾಕಂದ್ರೆ ಪ್ರಯಾಣಕ್ಕೂ ಸುಲಭ, ದರವೂ ಕಡಿಮೆ. ಇಂದು ದೇಶದಾದ್ಯಂತ ಜನರು ತಮ್ಮ ದಿನನಿತ್ಯದ ಪ್ರಯಾಣಕ್ಕಾಗಿ, ದೂರದ ಪ್ರಯಾಣಕ್ಕಾಗಲಿ ರೈಲಿನ ಮೇಲೆ ಅವಲಂಭಿತರಾಗಿದ್ದು ಬೇಗನೆ ತಲುಪಲು ‌ಕೂಡ ಸಾಧ್ಯವಾಗುತ್ತದೆ. ಅದೇ ರೀತಿ ರೈಲ್ವೆ ಇಲಾಖೆಯು (Indian Railways Department)  ಕೂಡ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡುತ್ತಲೆ ಬಂದಿದೆ.

ಈ ನಿಯಮ ಪಾಲಿಸಬೇಕು:

 

 

ಇನ್ಮುಂದೆ ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುವವರು ಈ ನಿಯಮ ಪಾಲಿಸಲೇ ಬೇಕಿದೆ. ಹೌದು ಪ್ರಯಾಣದ ಸಮಯದಲ್ಲಿ ಜೋರಾಗಿ ಮಾತನಾಡುವುದು, ಮೊಬೈಲ್ ನಲ್ಲಿ ಹೆಚ್ಚು ಸೌಂಡ್ ಇಟ್ಟು ಹಾಡುಗಳನ್ನು ಕೇಳುವುದು ಇತ್ಯಾದಿ ಮಾಡಬಾರದು. ಈಗಾಗಲೇ ಈ ವಿಚಾರ ದಿಂದಾಗಿ ಹಲವು ದೂರುಗಳು ಕೇಳಿಬಂದಿದ್ದು ಉಳಿದ ಪ್ರಯಾಣಿಕರಿಗೆ ಇದು ತೊಂದರೆ ಯಾಗುವ ನಿಟ್ಟಿನಲ್ಲಿ ಇದಕ್ಕಾಗಿಯೇ ರೈಲ್ವೇ ಇಲಾಖೆ ಕೆಲವೊಂದು ನಿಯಮ ಜಾರಿಗೆ ತಂದಿದೆ. ರಾತ್ರಿ 10 ಗಂಟೆಯ ನಂತರ ಜನಸಂದಣಿಯಿಂದ ಇತರೆ ಪ್ರಯಾಣಿಕರಿಗೆ ತೊಂದರೆ ಯಾಗುತ್ತದೆ. ಇನ್ನು ರಾತ್ರಿ 10 ಗಂಟೆಯ ನಂತರ ರೈಲಿನಲ್ಲಿ ಯಾವುದೇ ಲೈಟ್ ಗಳನ್ನೂ ಆನ್ ಮಾಡಬಾರದು ಎಂಬ ನಿಯಮ ಜಾರಿಗೆ ತಂದಿದೆ.

advertisement

ಸಮಯ ಬದಲಾವಣೆ:

ಈ ಹಿಂದೆ AC Coaches ಮತ್ತು ಸ್ಪೀಪರ್‌ ರೈಲು ಪ್ರಯಾಣ ಮಾಡುವವರು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿದ್ದೆ ಮಾಡಲು ಅವಕಾಶ ಇತ್ತು. ಆದರೆ ಈಗ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಅದೇ ರೀತಿ ಆನ್‌ಲೈನ್‌ ಊಟವನ್ನು ರಾತ್ರಿ 10 ಗಂಟೆಯ ನಂತರ ನೀಡ ಲಾಗುವುದಿಲ್ಲ ಎಂಬ ನಿಯಮ ತಂದಿದೆ.

ದಂಡ ವಿಧಿಸಲಾಗುತ್ತದೆ:

ರೈಲು ಪ್ರಯಾಣದ ಸಂದರ್ಭದಲ್ಲಿ ಮದ್ಯ ಸೇವಿಸಿ ರೈಲಿನಲ್ಲಿ ಪ್ರಯಾಣಿಸಿದರೆ ಅಂತವರಿಗೆ ದಂಡವನ್ನು ಸಹ ವಿಧಿಸಲಾಗುತ್ತದೆ. ಅದೇ ರೀತಿ ರೈಲ್ವೇ ನಿಯಮಗಳ ಮೂಲಕ ರೈಲಿನಲ್ಲಿ ಧೂಮಪಾನ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಪ್ರಯಾಣಿಕರು ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಮಯದಲ್ಲಿ ಅದನ್ನು ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ.

advertisement

Leave A Reply

Your email address will not be published.