Karnataka Times
Trending Stories, Viral News, Gossips & Everything in Kannada

Tax: ಮದುವೆಯಲ್ಲಿ ಪಡೆಯುವ ಉಡುಗೊರೆಗಳ ಮೇಲೆ ಎಷ್ಟು ಟ್ಯಾಕ್ಸ್ ಕಟ್ಟಬೇಕು? ನಿಯಮದಲ್ಲಿ ಏನಿದೆ!

advertisement

ಮದುವೆಗಳಲ್ಲಿ ಉಡುಗೊರೆ ನೀಡುವ ಟ್ರೆಂಡ್​ ನಲ್ಲಿ ಈಗ ಸ್ವಲ್ಪ ಬದಲಾವಣೆಯಾಗಿದೆ. ಮೊದಲೆಲ್ಲಾ ಜನರು ನಗದು ಹಣ ಹಾಗೂ ಒಡವೆಗಳನ್ನು ಉಡುಗೊರೆಯ ರೂಪದಲ್ಲಿ ಕೊಡುತ್ತಿದ್ದರು. ಆದರೆ ಈಗ ಷೇರಗಳು, FD ಗಳು, ಮತ್ತು ಆಸ್ತಿ (Property) ಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಹಾಗಿದ್ದರೆ ಮದುವೆ ಸಂದರ್ಭ ಪಡೆಯುವ ಉಡುಗೊರೆಗಳ ಮೇಲೆ ಯಾವ ಪ್ರಮಾಣದಲ್ಲಿ ತೆರಿಗೆ (Tax) ಹಾಕಲಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳೋಣ.

ಮದುವೆ ಉಡುಗೊರೆಗೆ ತೆರಿಗೆ ಏಕೆ?

ಮದುವೆಯ ಸಮಯದಲ್ಲಿ ಚರ -ಸ್ಥಿರ ಆಸ್ತಿಗಳೆರಡನ್ನೂ ಉಡುಗೊರೆಗಳ ರೂಪದಲ್ಲಿ ನೀಡಲಾಗುತ್ತದೆ. ಷೇರುಗಳು (Shares), ಫಿಕ್ಸೆಡ್‌ ಡೆಪಾಸಿಟ್‌ಗಳು (Fixed Deposits), ಮ್ಯೂಚುಯಲ್‌ ಫಂಡ್‌ಗಳು (Mutual Funds), ಮತ್ತು ಒಡವೆಗಳು ಚರಾಸ್ತಿಗಳ ಅಡಿಯಲ್ಲಿ ಬಂದರೆ, ಭೂಮಿ, ಮನೆ, ಮತ್ತು ಫ್ಲಾಟ್‌ಗಳು ಸ್ಥಿರಾಸ್ತಿಗಳ ಅಡಿಯಲ್ಲಿ ಬರುತ್ತವೆ. 1961ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ಹಣಕಾಸು ವರ್ಷವೊಂದರಲ್ಲಿ ಪಡೆದ ₹50 ಸಾವಿರಕ್ಕೂ ಹೆಚ್ಚು ಮೌಲ್ಯದ ಉಡುಗೊರೆಯ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ.

 

 

ಸಂಬಂಧಿಕರ ವ್ಯಾಖ್ಯೆಯ ಅಡಿಯಲ್ಲಿ ಬರುವಂತಹ ಜನರಿಂದ ಪಡೆಯುವ ಯಾವುದೇ ಮೌಲ್ಯದ ಉಡುಗೊರೆಯ ಮೇಲೆ ತೆರಿಗೆ (Tax) ಕಟ್ಟಬೇಕಾಗಿಲ್ಲ. ಜೀವನ ಸಂಗಾತಿ, ಒಡಹುಟ್ಟಿದವರು, ಪೋಷಕರು, ಸಂಗಾತಿಯ ಪೋಷಕರು ಈ ಸಂಬಂಧಿಕರ ವ್ಯಾಖ್ಯೆಯ ಅಡಿಯಲ್ಲಿ ಬರ್ತಾರೆ. ಅಂದರೆ ಮದುವೆಯ ಸಂದರ್ಭದಲ್ಲಿ ಅಲ್ಲದೇ, ಸಾಮಾನ್ಯ ಸಂದರ್ಭಗಳಲ್ಲೂ ಸಹ, ವಿಶಾಲ್‌ ಅವರೇನಾದ್ರೂ ಇಂತಹ ಸಂಬಂಧಿಕರಿಂದ ಷೇರುಗಳು, ಎಫ್‌.ಡಿ.ಗಳು, ಮ್ಯೂಚುಯಲ್‌ ಫಂಡ್‌ಗಳು, ಅಥವಾ ಯಾವುದೇ ಸ್ವತ್ತನ್ನು ಉಡುಗೊರೆಯಾಗಿ ಪಡೆದರೆ ಅವುಗಳ ಮೇಲೆ ಯಾವ ತೆರಿಗೆಯೂ ಅನ್ವಯವಾಗುವುದಿಲ್ಲ.

ತೆರಿಗೆ ವಿನಾಯಿತಿ ಹೇಗೆ?

ನಾವೀಗ ಮಿತ್ರರು ಮತ್ತು ಪರಿಚಿತರ ಬಗ್ಗೆ ಮಾತನಾಡೋಣ. ಅವರು ಸಹ ಮದುವೆಯ ಸಂದರ್ಭ ಗಿಫ್ಟ್ ನೀಡಿರುತ್ತಾರೆ. ಅವರಿಂದಲೂ ಸಹ ಮದುವೆಗಳ ಸಮಯದಲ್ಲಿ, ಉಡುಗೊರೆಗಳನ್ನು ಪಡೆಯಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಕೇವಲ ಮದುವೆಯ ಸಂದರ್ಭದಲ್ಲಿ ಮಾತ್ರವೇ, ಯಾವುದೇ ದುಬಾರಿ ಮೌಲ್ಯದ ಚರ-ಸ್ಥಿರಾಸ್ತಿಗಳನ್ನು ಉಡುಗೊರೆಯ ರೂಪದಲ್ಲಿ ಪಡೆದರೆ, ಅವುಗಳ ಮೇಲೆ ಯಾವುದೇ ತೆರಿಗೆಯನ್ನು ಕಟ್ಟಬೇಕಾಗಿಲ್ಲ.

advertisement

ಮದುವೆಯ ಸಂದರ್ಭವನ್ನು ಬಿಟ್ಟು ವಾರ್ಷಿಕೋತ್ಸವಗಳು, ಹುಟ್ಟುಹಬ್ಬ ಅಥವಾ ಹಬ್ಬಗಳ ಸಂದರ್ಭಗಳಲ್ಲಿ ನೀವೇನಾದರೂ ಉಡುಗೊರೆಗಳನ್ನು ಪಡೆದರೆ, ಅವುಗಳ ಮೇಲೆ ನೀವು ತೆರಿಗೆ ಕಟ್ಟಲೇಬೇಕಾಗುತ್ತದೆ. ಕೇವಲ ಎರಡು ಸ್ಥಿತಿಗಳಲ್ಲಿ ಮಾತ್ರವೇ ತೆರಿಗೆಯನ್ನು ಹಾಕಲಾಗೋದಿಲ್ಲ. ಮೊದಲನೆಯದು, ಹಣಕಾಸು ವರ್ಷವೊಂದರಲ್ಲಿ ಪಡೆದ ಉಡುಗೊರೆಯ ಮೌಲ್ಯವು ₹50 ಸಾವಿರಕ್ಕಿಂತಲೂ ಕಡಿಮೆ ಇದ್ದಾಗ ಹಾಗೂ ಎರಡನೆಯದು, ಉಡುಗೊರೆಯನ್ನು ನೀಡುತ್ತಿರುವ ವ್ಯಕ್ತಿಯು ನಿಮ್ಮ ಹತ್ತಿರದ ಸಂಬಂಧಿ ಆಗಿದ್ದಾಗ ಮಾತ್ರ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಬಹುದು.

ಯಾವ ಸಂದರ್ಭದಲ್ಲಿ ತೆರಿಗೆ ಕಟ್ಟಬೇಕು?

ಮದುವೆಯ ಸಂದರ್ಭದಲ್ಲಿ, ನೀವು ಅಥವಾ ಪತ್ನಿ ಕುಟುಂಬದ ಸದಸ್ಯರು, ಬಂಧುಗಳು ಅಥವಾ ಮಿತ್ರರು ಸೇರಿದಂತೆ ಯಾರಿಂದಲೇ ಆಗಲೀ ಪಡೆಯೋ ಉಡುಗೊರೆಗಳ ಮೇಲೆ ತೆರಿಗೆ ಕಟ್ಟಬೇಕಿಲ್ಲ. ತಾವು ಪಡೆದ ಉಡುಗೊರೆಯಿಂದ ಆದಾಯ ಗಳಿಸುವಂತಿದ್ದರೆ ಮಾತ್ರವೇ ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ನಾವೀಗ ಒಂದು ಉದಾಹರಣೆಯ ಮೂಲಕ ಅರ್ಥ ಮಾಡ್ಕೊಳ್ಳೋಣ. ವರ ತಮ್ಮ ಮಾವನಿಂದ ಒಂದು ಮನೆಯನ್ನು ಉಡುಗೊರೆಯಾಗಿ ಪಡೆಯುತ್ತಾರೆ ಎಂದು ಭಾವಿಸೋಣ.

ಅದನ್ನೀಗ ಅವರು ಬಾಡಿಗೆಗೆ ಕೊಟ್ಟಿದ್ದಾರೆ ಅಂತ ಅಂದ್ಕೊಳ್ಳೋಣ, ಅಂದ್ರೆ, ವರ ಅದರಿಂದ ಬಾಡಿಗೆ ಆದಾಯ ಗಳಿಸುತ್ತಿದ್ದಾರೆ ಎಂದಾಯಿತು. ಇದನ್ನು ಉಡುಗೊರೆಯಿಂದ ಬರೋ ಆದಾಯ ಎಂದು ಕರೆಯಲಾಗುತ್ತದೆ. ಈ ಬಾಡಿಗೆ ಆದಾಯದ ಮೇಲೆ ಆವರ ತೆರಿಗೆ ಕಟ್ಟಬೇಕಾಗುತ್ತೆ. ಹಾಗೆಯೇ, ಅವರಿಗೆ ₹5 ಲಕ್ಷ ಮೌಲ್ಯದ ಒಂದು ಎಫ್‌.ಡಿ. ಉಡುಗೊರೆಯ ರೂಪದಲ್ಲಿ ಬಂದಿದೆ ಅಂತ ಅಂದ್ಕೊಳ್ಳೋಣ. ಆಗ ಅದರಿಂದ ಬರೋ ಬಡ್ಡಿಯ ಆದಾಯದ ಮೇಲೆ ಮದುವೆಯಾದ ವರ ತೆರಿಗೆ ಕಟ್ಟಬೇಕಾಗುತ್ತದೆ.

ಇಷ್ಟು ಮಾತ್ರವಲ್ಲದೇ, ಮದುಮಕ್ಕಳು ಉಡುಗೊರೆಯ ರೂಪದಲ್ಲಿ ಬಂದ ಸ್ವತ್ತುಗಳು, ಷೇರುಗಳು, ಅಥವಾ ಮ್ಯೂಚುಯಲ್‌ ಫಂಡ್‌ಗಳನ್ನು ಮಾರಿದರೆ, ಆಗ ಅವರು ಅದರಿಂದ ಗಳಿಸುವ ಮೊತ್ತದ ಮೇಲೆ ಕ್ಯಾಪಿಟಲ್‌ ಗೇಯ್ನ್ಸ್‌ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಕ್ಯಾಪಿಟಲ್‌ ಗೇಯ್ನ್ಸ್‌ ತೆರಿಗೆಯು ತೆರಿಗೆದಾರನು ಸ್ವತ್ತನ್ನು ತನ್ನ ಬಳಿ ಇಟ್ಟುಕೊಂಡಿದ್ದ ಅವಧಿಯನ್ನು ಅವಲಂಬಿಸಿರುತ್ತದೆ. ಅಂದರೆ ಉಡುಗೊರೆಯ ರೂಪದಲ್ಲಿ ಸ್ವತ್ತನ್ನು ಪಡೆದ ನಂತರ ಅದನ್ನು ಮಾರುವವರೆಗಿನ ಅವಧಿಯನ್ನು ಅವಲಂಬಿಸಿ ತೆರಿಗೆ ಹಾಕಲಾಗುತ್ತದೆ. ಬೇರೆ-ಬೇರೆ ರೀತಿಯ ಸ್ವತ್ತುಗಳಿಗೆ ಬೇರೆ-ಬೇರೆ ಹೋಲ್ಡಿಂಗ್‌ ಅಥವಾ ಹೊಂದಿರುವಿಕೆಯ ಅವಧಿಗಳು ಇರುತ್ತವೆ.

2023ರಲ್ಲಿ ಉಡುಗೊರೆಯಾಗಿ ಪಡೆದ ಮನೆಯನ್ನು 2027ರಲ್ಲಿ ಮಾರುತ್ತಾರೆ ಅಂತ ಎಂದುಕೊಳ್ಳೋಣ. ಆಗ, ಈ ಮಾರಾಟದಿಂದ ಬರೋ ಲಾಭವನ್ನು ಕ್ಯಾಪಿಟಲ್‌ ಗೇಯ್ನ್‌ ಅಥವಾ ಬಂಡವಾಳದ ಮೇಲಿನ ಲಾಭ ಎಂದು ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ, ಮನೆಯನ್ನು ಖರೀದಿಸಿದ ದಿನದಿಂದಲೇ ತೆರಿಗೆಯನ್ನು ಹಾಕಲಾಗುತ್ತದೆ ವಿನ: ಉಡುಗೊರೆಯನ್ನು ಪಡೆದ ದಿನಾಂಕದಿಂದಲ್ಲ. ಹೀಗಾಗಿ, ನೀವೂ ಸಹ ಮದುವೆಯಾಗುತ್ತಿದ್ದರೆ, ಮದುವೆಯ ಸಂದರ್ಭದಲ್ಲಿ ಪಡೆಯೋ ಉಡುಗೊರೆಗಳ ಬಗ್ಗೆ ಚಿಂತತಿಸುವ ಅಗತ್ಯ ಇಲ್ಲ. ಮದುವೆಯ ಸಂದರ್ಭದಲ್ಲಿ, ವಧು ಅಥವಾ ವರ ಯಾವುದೇ ದುಬಾರಿ ಮೌಲ್ಯದ ಉಡುಗೊರೆಯನ್ನು ಪಡೆದರೂ ಸಹ ಅದರ ಮೇಲೆ ಯಾವುದೇ ತೆರಿಗೆಯನ್ನೂ ಹಾಕಲಾಗೋದಿಲ್ಲ. ಅಂತಹ ಉಡುಗೊರೆಗಳಿಂದ ನೀವು ಆದಾಯ ಗಳಿಸಿದಾಗ ಮಾತ್ರವೇ ಅದರ ಮೇಲೆ ತೆರಿಗೆ ಹಾಕಲಾಗುತ್ತದೆ ಎನ್ನುವುದು ತಿಳಿದಿರಲಿ.

advertisement

Leave A Reply

Your email address will not be published.