Karnataka Times
Trending Stories, Viral News, Gossips & Everything in Kannada

Post Office: ಗಂಡ ಹೆಂಡತಿಗೆ ಸಿಹಿಸುದ್ದಿ ಕೊಟ್ಟ ಪೋಸ್ಟ್ ಆಫೀಸ್! ಈ ಯೋಜನೆಗೆ ಮುಗಿಬಿದ್ದ ಜನ

advertisement

ಗಂಡ ಹೆಂಡತಿ ಯಾವ ರೀತಿಯಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆಯುವ ಮೂಲಕ ಪೋಸ್ಟ್ ಆಫೀಸ್ನ ಈ ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿಸುವುದಕ್ಕೆ ಹೊರಟಿದ್ದೇವೆ. ಕಳೆದ ವರ್ಷದ ಏಪ್ರಿಲ್ ಒಂದರಂದು ಸರ್ಕಾರ ಈ ಯೋಜನೆಯ ಮೇಲೆ ಬಡ್ಡಿದರವನ್ನು ಹೆಚ್ಚಿಸಿದ್ದು ಇದರಲ್ಲಿ ನೀವು ಸಿಂಗಲ್ ಅಥವಾ ಜಂಟಿ ಖಾತೆಯನ್ನು ಕೂಡ ತೆರೆಯಬಹುದಾಗಿದೆ. ಪೋಸ್ಟ್ ಆಫೀಸ್ (Post Office) ನ ಈ ತಿಂಗಳ ಯೋಜನೆ ಅಡಿಯಲ್ಲಿ ನೀವು ಒಂದು ವೇಳೆ ಒಂದು ವರ್ಷದ ನಂತರ ಇಲ್ಲವೇ ಒಂದು ವರ್ಷಗಳಿಂದ ಮೂರು ವರ್ಷಗಳ ನಡುವೆ ಹಣವನ್ನು ಮುಂಚಿತವಾಗಿ ಹಿಂಪಡೆಯುವುದನ್ನು ಮಾಡಿದ್ರೆ ಸಿಗುವಂತಹ ಹಣದ ಮೇಲೆ ಎರಡು ಪ್ರತಿಶತ ಶುಲ್ಕವನ್ನು ವಿಧಿಸಿ ನಂತರ ಉಳಿದ ಹಣವನ್ನು ನಿಮ್ಮ ಕೈಗೆ ನೀಡಲಾಗುತ್ತದೆ.

ಗಂಡ ಹೆಂಡತಿ ಇಬ್ಬರೂ ಕೂಡ ಖಾತೆಯನ್ನು ಮಾಡಿದ್ರೆ ಅದು ನಿಮ್ಮ ಜಂಟಿ ಖಾತೆಯಾಗಿ ಪರಿವರ್ತನೆ ಆಗುತ್ತದೆ. ಪೋಸ್ಟ್ ಆಫೀಸ್ನ (Post Office) ಈ ಮಾಸಿಕ ಆದಾಯ ಯೋಜನೆ ಅಡಿಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ 7.4% ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ. ಸಾವಿರ ರೂಪಾಯಿಗಳ ಮೂಲಕ ನೀವು ಈ ಯೋಜನೆಯನ್ನು ಪ್ರಾರಂಭಿಸಬಹುದಾಗಿದ್ದು ಐದು ವರ್ಷಗಳ ಮೆಚ್ಯುರಿಟಿ ಅವಧಿ ಹೊಂದಿರುತ್ತದೆ. ಮೊದಲ ಒಂದು ವರ್ಷದವರೆಗೆ ಈ ಹಣವನ್ನು ತೆಗೆಯಲು ಸಾಧ್ಯವಿರುವುದಿಲ್ಲ. 9 ಲಕ್ಷ ರೂಪಾಯಿಗಳ ವರೆಗೆ ಕೂಡ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

advertisement

Image Source: TV9 Bharatvarsh

ವೈಯಕ್ತಿಕ ಖಾತೆಯಲ್ಲಿ ಮೊದಲಿಗೆ 4.5 ಲಕ್ಷ ರೂಪಾಯಿಗಳ ವರೆಗೆ ಮ್ಯಾಕ್ಸಿಮಮ್ ಹಣವನ್ನು ಹೂಡಿಕೆ ಮಾಡಬಹುದಾಗಿತ್ತು ಆದರೆ ಈಗ ಅದನ್ನು 9 ಲಕ್ಷಕ್ಕೆ ಏರಿಸಲಾಗಿದೆ. ಜಂಟಿ ಖಾತೆಯ ಮಿತಿಯನ್ನು ಒಂಬತ್ತರಿಂದ ಹದಿನೈದು ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಒಮ್ಮೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ನಿಮಗೆ ನಿಗದಿತ ಆದಾಯ ಕೈಗೆ ಒಂದು ಸೇರುತ್ತದೆ. ಮಾಸಿಕ ಆದಾಯ ಅಂದ್ರೆ 9 ಲಕ್ಷ ರೂಪಾಯಿಗಳ ವೈಯಕ್ತಿಕ ಹೂಡಿಕೆಯನ್ನು ನೀವು ಮಾಡಿದರೆ ಆಗ ತಿಂಗಳಿಗೆ ನಿಮಗೆ 5500 ಗಳು ಸಿಗುತ್ತವೆ ಹಾಗೂ ಜಂಟಿ ಖಾತೆಯಲ್ಲಿ ಅಂದರೆ ಗಂಡ ಹೆಂಡತಿ ಇಬ್ಬರೂ ಕೂಡ ಹೂಡಿಕೆ ಮಾಡುವುದರಿಂದ 11,100ಗಳ ಮಾಸಿಕ ಗಳಿಕೆಯನ್ನು ಗಂಡ ಹೆಂಡತಿ ಇಬ್ಬರೂ ಕೂಡ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಒಂದು ವೇಳೆ ಗಂಡ ಹೆಂಡತಿ ಇಬ್ಬರೂ ಕೂಡ ನಿಗದಿದ್ದ ಮಾಸಿಕ ಆದಾಯವನ್ನು ಪಡೆದುಕೊಳ್ಳುವಂತಹ ಹೆಚ್ಚೇನು ಬಂದಿದ್ರೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ನಿಮ್ಮ ಹೂಡಿಕೆಯಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ರಿಟರ್ನ್ ಅನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.