Karnataka Times
Trending Stories, Viral News, Gossips & Everything in Kannada

Gold: ಈಗಾಗಲೇ ಸಾಕಷ್ಟು ಬಂಗಾರ ಮಾಡಿಸಿಟ್ಟ ಕುಟುಂಬಗಳಿಗೆ ಸಿಹಿಸುದ್ದಿ! ಏನಾಗಲಿದೆ ಗೊತ್ತೇ?

advertisement

ಚಿನ್ನದ (Gold) ಬೆಲೆ ಅನ್ನೋದು ಯಾವ ರೀತಿಯಲ್ಲಿ ಏರಿಕೆ ಕಾಣ್ತಾ ಇದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಚಿನ್ನ ಆಧುನಿಕ ಜಗತ್ತಿಗೆ ಪರಿಚಯವಾದ ದಿನದಿಂದಲೂ ಕೂಡ ಚಿನ್ನದ ಮೌಲ್ಯ ಅನ್ನೋದು ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಅನಿಶ್ಚಿತತೆ ಎನ್ನುವುದು ಹೆಚ್ಚಾಗಿರುವುದರಿಂದಾಗಿ ಪ್ರತಿಯೊಬ್ಬರೂ ಕೂಡ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಈ ಕಾರಣದಿಂದಾಗಿ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಹೇಳಬಹುದಾಗಿದೆ. 2024ರ ಅಂತ್ಯಕ್ಕೆ ಭಾರತ ದೇಶದಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಳನ್ನು ಮೀರಿದ್ರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಅದಕ್ಕೆ ಮೂರು ಪ್ರಮುಖ ಕಾರಣಗಳಿದ್ದು ಬನ್ನಿ ಅವುಗಳನ್ನು ತಿಳಿದುಕೊಳ್ಳೋಣ.

Image Source: iStock

advertisement

ಚಿನ್ನದ ಬೆಲೆ 1 ಲಕ್ಷಕ್ಕೆ ಏರೋದಕ್ಕೆ ಇಲ್ಲಿವೆ ನೋಡಿ ಮೂರು ಪ್ರಮುಖ ಕಾರಣಗಳು

  •  ಮೊದಲನೇದಾಗಿ ಭಾರತ ಹಾಗೂ ಚೀನಾ ದೇಶಗಳ ರಿಸರ್ವ್ ಬ್ಯಾಂಕ್ ಗಳು ಚಿನ್ನವನ್ನು ಖರೀದಿ ಮಾಡುವುದಕ್ಕೆ ಹೆಚ್ಚಾಗಿ ಹಣವನ್ನು ಬಳಸಿಕೊಳ್ಳುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚೀನಾ ದೇಶದ ಗೋಲ್ಡ್ ರಿಸರ್ವ್ ಎನ್ನುವುದು 16 ಪ್ರತಿಶತ ಹೆಚ್ಚಾಗಿದೆ. ಇದರಲ್ಲಿಯೇ ಚೀನಾ ಚಿನ್ನದ ಮೇಲೆ ಎಷ್ಟರ ಮಟ್ಟಿಗೆ ಕಣ್ಣನ್ನ ಇಟ್ಟಿದೆ ಅನ್ನೋದನ್ನ ನೀವು ತಿಳಿದುಕೊಳ್ಳಬಹುದಾಗಿದೆ. ಇನ್ನೊಂದು ಕಡೆಯಲ್ಲಿ ನಮ್ಮ ಭಾರತ ದೇಶ ಕೇವಲ ಮೂರು ತಿಂಗಳಲ್ಲಿಯೇ ಕಳೆದ ಇಡೀ ಒಂದು ವರ್ಷಕ್ಕಿಂತ ಹೆಚ್ಚಿನ ಚಿನ್ನವನ್ನು ಖರೀದಿ ಮಾಡಿದ ಅನ್ನೋದು ತಿಳಿದುಬಂದಿದೆ. ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ಎರಡು ದೇಶಗಳು ಈ ರೀತಿಯಲ್ಲಿ ದೊಡ್ಡಮಟ್ಟದ ಚಿನ್ನವನ್ನು ಖರೀದಿ ಮಾಡುತ್ತಿರುವುದು ಚಿನ್ನದ ಬೆಲೆ ಏರಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
  •  ಸದ್ಯದ ಮಟ್ಟಿಗೆ ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವಂತಹ ಕದನವನ್ನು ಇಡೀ ವಿಶ್ವವೇ ಬಿಟ್ಟ ಕಣ್ಣಿನಲ್ಲಿ ನೋಡುತ್ತಿದೆ. ಇದೇ ಕಾರಣಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಂತಹ ಹೂಡಿಕೆದಾರರು ಹೆಚ್ಚಾಗಿ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ ಯಾಕೆಂದರೆ ಬೇರೆ ಎಲ್ಲಾ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂಬುದಾಗಿ ಕರೆಯಲಾಗುತ್ತದೆ. ಹೀಗಾಗಿ ಎಲ್ಲರೂ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುತ್ತಿರುವುದು ಚಿನ್ನದ ಬೆಲೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ.
  •  ಪ್ರತಿಯೊಂದು ದೇಶಗಳು ಕೂಡ ಡಾಲರ್ ಪ್ಲಸ್ ಒನ್ ನಿಯಮವನ್ನ ಅನುಸರಿಸುವಂತಹ ಪರಿಸ್ಥಿತಿಗೆ ಬಂದಿವೆ. ಬೇರೆ ದೇಶದಿಂದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಂಡಿರುವ ಕೂಡ ಪ್ರತಿಯೊಂದು ದೇಶಗಳು ಪ್ರಮುಖವಾಗಿ ಡಾಲರ್ ಅನ್ನು ಕರೆನ್ಸಿ ರೂಪದಲ್ಲಿ ಕೇಳುತ್ತವೆ. ಡಾಲರ್ ಬಿಟ್ರೆ ಎಲ್ಲಾ ಕಡೆಯಲ್ಲಿ ನಡೆಯುವಂತಹ ಒಂದೇ ಒಂದು ಮೌಲ್ಯ ಇದು ವಸ್ತು ಅಂದರೆ ಅದು ಚಿನ್ನ. ಹೀಗಾಗಿ ಡಾಲರ್ ಪ್ರಾಬಲ್ಯವನ್ನು ಮುರಿಯೋದಕ್ಕಾಗಿ ಚೀನಾ ಭಾರತ ಹಾಗೂ ರಷ್ಯಾ ದೇಶಗಳು ಸೇರಿದಂತೆ ಸಾಕಷ್ಟು ದೇಶಗಳು ಚಿನ್ನವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದು ಇದೇ ಕಾರಣಕ್ಕಾಗಿ ಎಲ್ಲಾ ದೇಶಗಳು ಚಿನ್ನವನ್ನು ಹೆಚ್ಚಾಗಿ ತಮ್ಮ ರಿಸರ್ವ್ಗಳಲ್ಲಿ ಉಳಿಸಿಕೊಳ್ಳುತ್ತಿವೆ. ಈ ಕಾರಣಕ್ಕಾಗಿ ಕೂಡ ಈ ವರ್ಷದ ಅಂತ್ಯದಲ್ಲಿ ಭಾರತ ದೇಶದಲ್ಲಿ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿಗಳಿಗೆ ತಲುಪುವಂತಹ ಸಾಧ್ಯತೆ ಹೆಚ್ಚಾಗಿದೆ.

advertisement

Leave A Reply

Your email address will not be published.