Karnataka Times
Trending Stories, Viral News, Gossips & Everything in Kannada

Hyundai Creta EV: ಟಾಟಾ ಕಂಪೆನಿಗೆ ಪ್ರತಿಸ್ಪರ್ಧಿಯಾಗಿ ಬರ್ತಿದೆ ಹುಂಡೈನ ಈ ಅಧಿಕ ಫೀಚರ್ಸ್ ಎಲೆಕ್ಟ್ರಿಕ್ ಕಾರು, 475km ಮೈಲೇಜ್

advertisement

ಇತ್ತೀಚಿನ ದಿನದಲ್ಲಿ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುವ ಪ್ರಾಶಸ್ತ್ಯ ಅಧಿಕ ಆಗಿದೆ ಎಂದು ಹೇಳಬಹುದು. ಹಾಗಾಗಿ ಅನೇಕ ಕಂಪೆನಿಗಳು ಎಲೆಕ್ಟ್ರಿಕ್ ಕಾರು, ಬೈಕ್ ಹಾಗೂ ಸೈಕಲ್ ಉತ್ಪನ್ನಕ್ಕೆ ಆಧಿಕ ಪ್ರಾತಿನಿಧ್ಯ ನೋಡುತ್ತಲೇ ಬಂದಿದ್ದಾರೆ. ಇದೀಗ ಹೊಸದಾಗಿ ಎಲೆಕ್ಟ್ರಿಕ್ ಕಾರು ಖರೀದಿ ಮಾಡಬೇಕೆಂದು ಯೋಚಿಸುತ್ತಿದ್ದವರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದೆ. ಹುಂಡೈ (Hyundai) ಕಂಪೆನಿಯ ಕ್ರೇಟಾ ಆವೃತ್ತಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರು (Electric Car) ಬಿಡುಗಡೆಗೆ ಸಜ್ಜಾಗಿದ್ದು ನೂತನ ಕಾರು ಖರೀದಿ ಮಾಡುವವರಿಗೆ ಉತ್ತಮ ಆಯ್ಕೆ ಇದಾಗಲಿದೆ ಎಂದರೂ ತಪ್ಪಾಗದು.

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರತಿಷ್ಟಿತ ಸ್ಥಾನ ಹೊಂದಿರುವ ಹುಂಡೈ ಕಂಪೆನಿ ಈ ಹಿಂದಿನಿಂದಲೂ ಗುಣಮಟ್ಟದ ವಾಹನ ಉತ್ಪಾದನೆಯಲ್ಲಿ ಹೆಸರು ಮಾಡಿದ್ದು ಇದೀಗ ಹುಂಡೈ ಕಂಪೆನಿ ಅಧೀನದಲ್ಲಿನ ಕ್ರೇಟಾ (Hyundai Creta EV) ಮಾಡೇಲ್ ಅನ್ನು ವಿಭಿನ್ನವಾಗಿ ಪರಿಚಯಿಸುವ ಆವೃತ್ತಿ ಕಂಡುಹಿಡಿಯಲಾಗಿದೆ‌. ಹಾಗಾಗಿ ಭಾರತೀಯರಿಗೆ ಈ ಮಾಡೆಲ್ ಬಹಳ ಇಷ್ಟವಾಗಲಿದ್ದು ಅದರ ಗುಣ ವಿಶೇಷತೆ, ಬೆಲೆ ಇತ್ಯಾದಿ ವಿವರ ಈ ಕೆಳಗಿನಂತಿದೆ.

 

 

ಏನೆಲ್ಲ ಗುಣವಿಶೇಷತೆ ಇದೆ?

advertisement

  • ಹೊಸದಾಗಿ ಬಿಡುಗಡೆಯಾಗುವ ಈ ಆವೃತ್ತಿಯಲ್ಲಿ ಕ್ರೇಟಾ ಫೇಸ್ ಲೀಸ್ಟ್ ಇರಲಿದೆ.
  • Quadbeam, LED Hand Lamp, Horizon LED Position Lamp, DRL ಎಂಬ ಅನೇಕ ಫೀಚರ್ಸ್ ಸಿಗಲಿದೆ.
  • ವಾಹನದ ಮುಂಭಾಗ ಮತ್ತು ಹಿಂಭಾಗ ಎಲ್ ಇಡಿ ಟರ್ನ್ ಸಿಗ್ನಲ್ ಹಾಗೂ ಎಲ್ ಇಡಿ ಟೈಲ್ ಲ್ಯಾಂಪ್ ಇರಲಿದೆ.
  • ಮುಂಭಾಗ ಹಾಗೂ ಹಿಂಭಾಗದ ಬಂಪರ್ ವಿನ್ಯಾಸವನ್ನು ಹೆಚ್ಚು ಆಕರ್ಷಕವಾಗಿ ರಚಿಸಲಾಗಿದೆ.
  • ಇದರ ಚಕ್ರ ಕೂಡ ನೋಡಲು ಅತ್ಯಾಕರ್ಷಕವಾಗಿದೆ.
  • ಸ್ಟೈ ಶಾರ್ಟ್ ಕ್ರೇಟಾ ಇವಿ (Hyundai Creta EV) ಯಲ್ಲಿ ಮಿಶ್ರ ಲೋಹದ ಚಕ್ರ ಅಳವಡಿಸಲಾಗಿದೆ.
  • ಸುಮಾರು 17ರಿಂದ 18 ಇಂಚಿನ ವರೆಗೆ ಈ ಚಕ್ರ ಇರಲಿದ್ದು ನೋಡಲು ಬೊಂಬಾಟ್ ಲುಖ್ ನೀಡಲಿದೆ.
  • ಇದರಲ್ಲಿ ಸುಖಕರ ಆಸನಗಳಿದ್ದು ಧ್ವನಿ ಮೂಲಕ ನೀವು ಕಮಾಂಡ್ ಮಾಡುವ ಆಯ್ಕೆ ಸಿಗಲಿದೆ.
  • ಡುಯಲ್ ಜೊನ್ ಹಾಗೂ ಸ್ವಯಂ ಚಾಲಿತ ತಾಪಮಾನ ನಿಯಂತ್ರಣ ವ್ಯವಸ್ಥೆ ಸಹ ಇದರಲ್ಲಿ ಇರಲಿದೆ.
  • ಸ್ಮಾರ್ಟ್ ಪೆನರೋನೊಮಿಕ್ ಸನ್ ರೂಫ್ ವ್ಯವಸ್ಥೆ ಇದರಲ್ಲಿ ಇರಲಿದೆ.

ಅಧಿಕ ಸುರಕ್ಷತೆ:

ಅಪಾಯದ ಸಂದರ್ಭದಲ್ಲಿ ಅನುಕೂಲ ಆಗಲೆಂದು ಮುಂಭಾಗದಲ್ಲಿ ಆರು ಏರ್ ಬ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಹಿಂಭಾಗ ಹಾಗೂ ಮುಂಭಾಗದಲ್ಲಿ ಪಾರ್ಕಿಂಗ್ ಸಂವೇದಕ ಇದ್ದು ಅನುಕೂಲ ಸಿಗಲಿದೆ. ಟೈರ್ ನಲ್ಲಿ ಮಾನಿಟರಿಂಗ್ ಸಿಸ್ಟಂ ಇದ್ದು ಸಡನ್ ಬ್ರೇಕ್ ನಲ್ಲಿ ಕೂಡ ಬ್ಯಾಲೆನ್ಸ್ ಮಾಡಲಿದೆ. ಈ ಒಂದು ಕ್ರೆಟಾ ಇವಿ (Hyundai Creta EV) ವಾಹನದ ಮೂಲಕ ಒಮ್ಮೆ ಚಾರ್ಜ್ ಮಾಡಿದರೆ 450km ವರೆಗೆ ಪ್ರಯಾಣ ಮಾಡಬಹುದು. 45ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ.

ಬೆಲೆ ಎಷ್ಟು?

ಈ ಒಂದು ಎಲೆಕ್ಟ್ರಾನಿಕ್ ವಾಹನವು ಟಾಟಾ ಕಂಪೆನಿಗೆ ಪ್ರಬಲ ಪೈಪೋಟಿ ನೀಡಲಿದ್ದು ಗ್ರಾಹಕರ ಮನಸ್ಸು ಕದಿಯುವಲ್ಲಿ ಅನುಮಾನ ಇಲ್ಲ. ಇಷ್ಟೆಲ್ಲ ಪ್ರಯೋಜನ ಇರುವ ಈ ವಾಹನದ ಬೆಲೆ 10.99 ಲಕ್ಷ ರೂಪಾಯಿ ಆಗಿದ್ದು ವಿಭಿನ್ನ ಕಲರ್ ಆಯ್ಕೆ ಸಹ ಸಿಗಲಿದೆ.

advertisement

Leave A Reply

Your email address will not be published.