Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಇಲ್ಲ ಅಂದ್ರೆ ಇನ್ಮುಂದೆ ಈ ಸೌಲಭ್ಯ ಸಿಗಲ್ಲ! ಜಾರಿಗೆ ಬಂತು ಹೊಸ ನಿಯಮ.

advertisement

ಇತ್ತೀಚಿನ ದಿನಗಳಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹೊಸ ನಿಯಮಗಳು ಜಾರಿಗೆ ಬಂದಿದ್ದು, ಅದರಲ್ಲೂ ವಿಶೇಷವಾಗಿ HSRP Number Plate ಅತ್ಯಂತ ಪ್ರಮುಖ ಹಾಗೂ ಕಡ್ಡಾಯ ವಿಚಾರವಾಗಿದೆ. ಇನ್ನು ಈ ನಂಬರ್ ಪ್ಲೇಟ್ ವಿಚಾರದಲ್ಲಿ ಈಗ ಹೊಸ ನಿಯಮವನ್ನು ಕೂಡ ಜಾರಿಗೆ ತರಲಾಗಿದ್ದು ಅದರ ಬಗ್ಗೆ ಕೂಡ ಮಾತನಾಡೋಣ ಬನ್ನಿ.

High security number plate ಇಲ್ದಿದ್ರೆ ಈ ಕೆಲಸ ಮಾಡೋ ಹಾಗಿಲ್ಲ

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ವಾಹನಗಳನ್ನು ಎಲ್ಲಿ ಬೇಕಾದರೂ ಕೂಡ ಪಾರ್ಕ್ ಮಾಡಬಹುದು. ಆದರೆ ಈಗ ಹೊಸದಾಗಿ ಜಾರಿಗೆ ಬಂದಿರುವಂತಹ ನಿಯಮಗಳ ಪ್ರಕಾರ HSRP Number Plate ಇಲ್ಲದೇ ಇರುವಂತಹ ವಾಹನಗಳು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡೋ ಹಾಗಿಲ್ಲ. ಒಂದು ವೇಳೆ ಹಾಗೆ ಮಾಡಿದ್ದೆ ಆದಲ್ಲಿ ಅವರ ಮೇಲೆ ಸೂಕ್ತ ಕ್ರಮ ಅಥವಾ ಫೈನ್ ವಿಧಿಸಬಹುದಾಗಿದೆ. ಪ್ರತಿಯೊಂದು ವಾಹನ ಸ್ಟ್ಯಾಂಡ್ ಗಳಿಗೂ ಇದರ ಬಗ್ಗೆ ಚೀಟಿಯನ್ನು ಕಳಿಸಿ ಈ ನಿಯಮಗಳ ಬಗ್ಗೆ ಮಾಹಿತಿಯನ್ನು ಕೂಡ ಸಂಸ್ಥೆಯಿಂದ ನೀಡಲಾಗಿದೆ. ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ನಿಯಮ ಈಗ ಜಾರಿಗೆ ಬಂದಿರುವುದು ಪ್ರಯಾಗ್ ರಾಜ್ ನಲ್ಲಿ. ಮುಂದಿನ ದಿನಗಳಲ್ಲಿ ಇದು ಕರ್ನಾಟಕಕ್ಕೆ ಕೂಡ ಬಂದ್ರು ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯ ಇಲ್ಲ.

Image Source: YouTube

advertisement

ಇಲಾಖೆಯ ಮೂಲಗಳ ಪ್ರಕಾರ ಒಂದು ವೇಳೆ ನಿಗದಿತ ದಿನಾಂಕದ ಒಳಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಪಾರ್ಕಿಂಗ್ ಸ್ಟ್ಯಾಂಡ್ ನಲ್ಲಿ ವಾಹನಗಳನ್ನು ಪಾರ್ಕ್ ಮಾಡೋದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಅನ್ನೋದಾಗಿ ಹೇಳಿದೆ. ಇನ್ನು ಸ್ಟ್ಯಾಂಡಿನವರು ಕೂಡ ಇಂತಹ ವಾಹನಗಳನ್ನು ಪಾರ್ಕ್ ಮಾಡೋದಕ್ಕೆ ಬಿಡೋದಿಲ್ಲ. ಯಾಕೆಂದರೆ ಈ ಬಗ್ಗೆ ಇಲಾಖೆಯಿಂದಾನೆ ಸ್ಟ್ಯಾಂಡಿನವರಿಗೆ ನೋಟಿಸ್ ಹೋಗಿದೆ. ಪ್ರಯಾಗ ರಾಜ್ಯದಲ್ಲಿ 14.60 ಲಕ್ಷಗಳಿಗಿಂತಲೂ ಹೆಚ್ಚಿನ ದ್ವಿಚಕ್ರ ಹಾಗೂ ಬೇರೆ ವಾಹನಗಳು ಈ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಆರಂಭದಲ್ಲಿ ಸಾಕಷ್ಟು ಜನರು ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ನಂಬರ್ ಪ್ಲೇಟ್ ಅನ್ನು ಪಡೆದುಕೊಂಡಿದ್ದಾರೆ ಆದರೆ ಇನ್ನು ಸಾಕಷ್ಟು ಜನರು ನಿರ್ಲಕ್ಷ ತೋರಿಸಿ ಇದುವರೆಗೂ ನಂಬರ್ ಪ್ಲೇಟ್ ಅನ್ನು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲಿಲ್ಲ.

HSRP ಹಾಕಿಸಿಕೊಳ್ಳದೆ ಹೋದಲ್ಲಿ ಫೈನ್ ಎಷ್ಟು?

ಮೂರು ತಿಂಗಳ ಮುಂಚೆ ನೋಡುವುದಾದರೆ 8.10 ಲಕ್ಷ ವಾಹನಗಳ ವರೆಗೆ ಕೂಡ ದಂಡವನ್ನು ಕಟ್ಟಬೇಕಾಗಿತ್ತು. ಆದರೆ ಈಗ ಅದು ಕಡಿಮೆಯಾಗಿ 4.50 ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಇನ್ನು ಈ ರೀತಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಮೊದಲ ಬಾರಿಗೆ ಸಿಕ್ಕಿಬಿದ್ದಲ್ಲಿ ಸಾವಿರ ರೂಪಾಯಿ ಹಾಗೂ ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.

Image Source: Paytm

ಈ ರೀತಿ ನಿರ್ಲಕ್ಷ ಮಾಡಿ ನಂಬರ್ ಪ್ಲೇಟ್ ಹಾಕಿಕೊಳ್ಳದೆ ಇರುವಂತಹ ಜನರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ರೈಲ್ವೆ ಸ್ಟೇಷನ್ (Railway Station) ಹಾಗೂ ಇನ್ನಿತರ ವಾಹನಗಳ ಸ್ಟ್ಯಾಂಡ್ ನಲ್ಲಿ ಕೂಡ ಇದರ ಬಗ್ಗೆ ಅಧಿಕೃತ ಪತ್ರವನ್ನು ಅವರಿಗೆ ಕಳುಹಿಸಲಾಗಿದೆ. ಚೆಕಿಂಗ್ ಜೊತೆಗೆ ಜಾಗೃತಿ ಅಭಿಯಾನ ಕೂಡ ಇದರ ಜೊತೆಗೆ ಸಮ ಪ್ರಮಾಣದಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇನ್ನು ನಿಮ್ಮ ವಾಹನಕ್ಕೆ ಹಾಕಿಸಿಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ದಂಡ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

advertisement

Leave A Reply

Your email address will not be published.