Karnataka Times
Trending Stories, Viral News, Gossips & Everything in Kannada

HSRP: ಇದುವರೆಗೂ HSRP ನಂಬರ್ ಪ್ಲೇಟ್ ಹಾಕದವರಿಗೆ ಹೊಸ ಅಪ್ಡೇಟ್! ಶೀಘ್ರದಲ್ಲೇ ಪೊಲೀಸರಿಂದ ಈ ನಿರ್ಧಾರ

advertisement

ಇತ್ತೀಚಿನ ದಿನಗಳಲ್ಲಿ ರೋಡಿನಲ್ಲಿ ಚಲಿಸುತ್ತಿರುವ ವಾಹನಗಳ ಮೇಲೆ ಟ್ರಾಫಿಕ್ ಪೊಲೀಸರು ಸಾಕಷ್ಟು ಹದ್ದಿನ ಕಣ್ಣನ್ನು ಇಟ್ಟಿದ್ದು, ಸಿಕ್ಕಿಬಿದ್ರೆ ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಫೈನ್ ಹಾಕೋದು ಕನ್ಫರ್ಮ್ ಆಗಿದೆ. ಹೌದು ನಾವು ಮಾತನಾಡಲು ಹೊರಟಿರೋದು HSRP ನಂಬರ್ ಪ್ಲೇಟ್ (HSRP Number Plate) ಬಗ್ಗೆ ಜಾರಿಗೆ ಬಂದಿರುವಂತಹ ಹೊಸ ನಿಯಮದ ಬಗ್ಗೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

HSPR ನಂಬರ್ ಪ್ಲೇಟ್ ಇಲ್ದಿದ್ರೆ ಬಿಗ್ ಫೈನ್

ಸದ್ಯದ ಮಟ್ಟಿಗೆ ಭಾರತೀಯ ರೋಡುಗಳಲ್ಲಿ HSRP ನಂಬರ್ ಪ್ಲೇಟ್ ಅತ್ಯಂತ ಪ್ರಮುಖವಾಗಿದೆ. ವಾಹನಗಳ ಸುರಕ್ಷತೆಯ ವಿಚಾರಕ್ಕಾಗಿ ಈ ನಂಬರ್ ಪ್ಲೇಟ್ಗಳನ್ನು ಕಡ್ಡಾಯ ಮಾಡಲಾಗಿದೆ. ವಾಹನಗಳನ್ನು ಬದಲಾಯಿಸುವಂತಹ ಮೋಸದಾಟಗಳನ್ನು ತಡೆಯುವ ನಿಟ್ಟಿನಲ್ಲಿ ಈ ನಂಬರ್ ಪ್ಲೇಟ್ಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಸಾಮಾನ್ಯವಾಗಿ ಏನಾದರೂ ತಪ್ಪು ಇದ್ರೆ ನೀವು ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಹಿಡಿದರೆ ಫೈನ್ ಹಾಕಿಯೇ ಹಾಕುತ್ತಾರೆ. ಅದು ನೂರು ಇನ್ನೂರು ರೂಪಾಯಿ ಅಲ್ಲ ಬರೋಬ್ಬರಿ 5000 ಫೈನ್ ಆಗಿದೆ. ಹೀಗಾಗಿ ಈ ಫೈನ್ ಕಟ್ಟುವಂತಹ ಜಂಜಾಟದಿಂದ ಹೊರ ಬರಬೇಕು ಅಂದ್ರೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ.

Image Source: Spinny

HSRP ಸೆಕ್ಯೂರಿಟಿ ನಂಬರ್ ಪ್ಲೇಟ್ ಎನ್ನುವುದು ಇಡೀ ಭಾರತ ದೇಶದಲ್ಲಿ ಕಡ್ಡಾಯವಾಗಿ ಬಿಟ್ಟಿದೆ. ಕೆಲವೊಂದು ರಾಜ್ಯಗಳಲ್ಲಿ ಇದಕ್ಕೆ ಅಪ್ಲೈ ಮಾಡುವಂತಹ ಕೊನೆಯ ದಿನಾಂಕ ಕೂಡ ಮುಗಿದು ಬಿಟ್ಟಿದೆ. ಈ ನಂಬರ್ ಪ್ಲೇಟ್ಗಳನ್ನು ಅಲ್ಯೂಮಿನಿಯಂ ಅಥವಾ ಬೇರೆ ಲೋಹದಿಂದ ನಿರ್ಮಿಸಲಾಗುತ್ತದೆ. ಇದರಲ್ಲಿ ಯೂನಿಟ್ ಐಡೆಂಟಿಫಿಕೇಶನ್ ನಂಬರ್, ಪೋಲೊಗ್ರಾಮ್ ಹಾಗೂ ಗಾಡಿಯ ರಿಜಿಸ್ಟ್ರೇಷನ್ ನಂಬರ್ ಇರುತ್ತದೆ. ಇದರಲ್ಲಿ ಏನಾದರೂ ಮಾಡೋಕೆ ಹೋದರೆ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ. ಇನ್ನು ಇದನ್ನು ಕಾನೂನು ಬಾಹಿರ ಅಪರಾಧ ಎಂಬುದಾಗಿ ಪರಿಗಣಿಸಲಾಗುತ್ತದೆ. ಇಂತಹ ನಿಯಮಗಳು ಕರ್ನಾಟಕ ರಾಜ್ಯದಲ್ಲಿ ಕೂಡ ಅತಿ ಶೀಘ್ರದಲ್ಲಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯ ಇಲ್ಲ.

advertisement

HSRP ನಂಬರ್ ಪ್ಲೇಟ್ಗೆ ಅಪ್ಲೈ ನಂಬರ್ ಪ್ಲೇಟ್ಗೆ ಅಪ್ಲೈ ಮಾಡುವ ವಿಧಾನ ಹಾಗೂ ಸಂಪೂರ್ಣ ಮಾಹಿತಿ

HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಕೆಲವೊಂದು ಪ್ರಮುಖ ದಾಖಲೆಗಳನ್ನು ನೀವು ಸಿದ್ಧವಾಗಿರಿಸಿ ಕೊಳ್ಳಬೇಕಾಗುತ್ತದೆ. ನಿಮ್ಮ ಗಾಡಿಯ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಹಾಗೂ ಐಡೆಂಟಿಟಿ ಪ್ರೂಫ್ ಅನ್ನು ಹಾಗೂ ಅಡ್ರೆಸ್ ಪ್ರೂಫ್ ಪ್ರಮುಖವಾಗಿ ನೀಡಬೇಕು.

Image Source: Latest Laws

bookmyhsrp.com ವೆಬ್ಸೈಟ್ನಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಸೇವೆ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಲಭ್ಯವಿದ್ದು ಇಲ್ಲಿ ನೀವು ಕೇಳಲಾಗುವಂತಹ ಇಂಜಿನ್ ಹಾಗೂ ಚೇಸಿಸ್ ನಂಬರ್, ಇಂಧನದ ವಿಧಾನ ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ತುಂಬಬೇಕಾಗಿರುತ್ತದೆ. ಇನ್ನು ಟ್ರಾನ್ಸ್ಪೋರ್ಟ್ ಅಥಾರಿಟಿಯ ಅನ್ವಯ ನೀವು ಶುಲ್ಕವನ್ನು ನೀಡಬೇಕಾಗಿರುತ್ತದೆ. ಇದರ ರಸೀದಿಯನ್ನು ನೆನಪಿಟ್ಟುಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.

HSRP ನಂಬರ್ ಪ್ಲೇಟ್ ಬಂದ ಮೇಲೆ ಅದನ್ನು ಅಳವಡಿಸುವುದಕ್ಕಿಂತ ಮುಂಚೆ ಆ ನಂಬರ್ ಪ್ಲೇಟ್ ಹಾಗೂ ಸಂಬಂಧಪಟ್ಟಂತಹ ದಾಖಲೆಗಳನ್ನು ನೀವು ನಿಮ್ಮ ಜೊತೆಗೆ ಕೊಂಡೊಯ್ಯ ಬೇಕಾಗಿರುತ್ತದೆ. ಇದಾದ ನಂತರ ನೀವು ನಂಬರ್ ಪ್ಲೇಟ್ ಅನ್ನು ನಮೂದಿಸಬಹುದಾಗಿದೆ.

advertisement

Leave A Reply

Your email address will not be published.