Karnataka Times
Trending Stories, Viral News, Gossips & Everything in Kannada

PAN Card: ಪಾನ್ ಕಾರ್ಡ್ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಆದಾಯ ಇಲಾಖೆ ಹೊಸ ಸೂಚನೆ!

advertisement

ಆದಾಯ ತೆರಿಗೆ (Income Tax) ಇಲಾಖೆಯ ವತಿಯಿಂದ ಪಾನ್ ಕಾರ್ಡ್ (PAN Card) ಇದ್ದವರಿಗೆ ಹೊಸ ಸೂಚನೆಯಂದು ಅಂದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ಪ್ಯಾನ್ ವಂಚನೆ ಯೋಜನೆಯನ್ನು ಆದಾಯ ತೆರಿಗೆ ಇಲಾಖೆಯು ಬಯಲಿಗೆಳೆದಿದೆ. ಮನೆ ಬಾಡಿಗೆ ಭತ್ಯೆ (HRA) ಅನ್ನು ತಪ್ಪಾಗಿ ಕ್ಲೈಮ್ ಮಾಡಲು ವ್ಯಕ್ತಿಗಳಿಂದ ಶಾಶ್ವತ ಖಾತೆ ಸಂಖ್ಯೆಗಳ (PAN) ದುರುಪಯೋಗ ಆಗುತ್ತಾ ಇರುವುದು ತಿಳಿದುಬಂದಿದ್ದು, 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ವಂಚಿಸಲಾಗಿದೆ ಎಂದು ಸಾವಿರಾರು ಪ್ರಕರಣಗಳು ಪತ್ತೆಯಾಗಿವೆ.

ಪ್ರಕರಣದ ಹೈಲೈಟ್ಸ್:

ಇನ್ನು ಇದರ ಕುರಿತಾಗಿ ತನಿಖೆಗಳು ನಡೆಯುತ್ತಿದ್ದು ಈ ವಿಷಯವು ಕಾನೂನು ಪರಿಣಾಮಗಳಿಗೆ ಕಾರಣವಾಗುತ್ತದೆ. ಇನ್ನು ಒಬ್ಬ ವ್ಯಕ್ತಿಯಿಂದ ಸುಮಾರು 1 ಕೋಟಿ ರೂಪಾಯಿ ಬಾಡಿಗೆ ರಸೀದಿಗಳನ್ನು ಅಧಿಕಾರಿಗಳು ಪತ್ತೆ ಮಾಡಿದಾಗ PAN Card ವಂಚನೆ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಇನ್ನು ಇದರಿಂದ PAN ಗಳ ಅತಿರೇಕದ ದುರ್ಬಳಕೆಯ ಕುರಿತು ಹೆಚ್ಚಿನ ತನಿಖೆಯನ್ನು ಈ ಘಟನೆಯು ಪ್ರೇರೇಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಆಘಾತಕಾರಿಯಾಗಿ ಕೆಲವು ಕಂಪನಿಗಳ ಉದ್ಯೋಗಿಗಳು ತೆರಿಗೆ ವಿನಾಯಿತಿಗಳನ್ನು ಪಡೆಯಲು ಅದೇ ಪ್ಯಾನ್ ಕಾರ್ಡ್ (PAN Card) ನಂಬರ್ ಅನ್ನು ಬಳಸಿದ ವಿಷಯವು ಕಂಡುಬಂದಿವೆ.

Image Source: HT-Tech

advertisement

ಇನ್ನು ಮುಖಾಮುಖಿ ತನಿಖೆಯ ನಂತರ ಬಾಡಿಗೆ ಆದಾಯ HRA ಕ್ಲೈಮ್ ಮಾಡಲು PAN ಗಳನ್ನು ಬಳಸಿದ ವ್ಯಕ್ತಿಗಳು ವಹಿವಾಟಿನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿರುವುದು ತಿಳಿದುಬಂದಿದ್ದು, ತಾವು ಯಾವುದೇ ರೀತಿಯಾದ ಬಾಡಿಗೆ ಆದಾಯವನ್ನು ಪಡೆದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಈ ಕುರಿತಾಗಿ ಮಾತನಾಡಿರುವ ಅಧಿಕಾರಿಗಳು ಬಾಡಿಗೆ ಆದಾಯದ ಮೇಲಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು HRA ವಿನಾಯಿತಿಗಳ ದುರುಪಯೋಗದ ಜಟಿಲತೆ ಎದುರಾಗಿದೆ.

ಈ ಕಾರ್ಯಾಗಳು PAN ಹೊಂದಿರುವವರ ಅರಿವಿಲ್ಲದೆಯೇ, ಆಗಿರುವಂತಹ PAN ದುರುಪಯೋಗದ ಮತ್ತೊಂದು ನಿದರ್ಶನವನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಯಾವುದೇ ಬಾಡಿಗೆ ವಹಿವಾಟುಗಳನ್ನು ಚೆಕ್ ಮೂಲಕ ನಡೆಸಬೇಕು ಮತ್ತು ಎಲೆಕ್ಟ್ರಾನಿಕ್ ವರ್ಗಾವಣೆಗಳು, ಬಾಡಿಗೆ ಆದಾಯದ ಕುರಿತು ದೃಢೀಕರಣವನ್ನು ಪ್ರದರ್ಶಿಸಲು ತೆರಿಗೆ ರಿಟರ್ನ್‌ಗಳಲ್ಲಿ ಸರಿಯಾದ ವರದಿಯನ್ನು ಬಿಡುಗಡೆ ಮಾಡುತ್ತಿದೆ ಎಂದು ತಜ್ಞರು ಸಲಹೆಯನ್ನು ನೀಡಿದ್ದಾರೆ‌.

Image Source: News18

ಇನ್ನು ಉದ್ಯೋಗಿಗಳು HRA ವಿನಾಯಿತಿಗಾಗಿ ಪಾವತಿಸಿದ ಬಾಡಿಗೆಯ ಪುರಾವೆಯನ್ನು ಪರಿಶೀಲಿಸುವಾಗ ಸಮಂಜಸವಾದ ಚೆಕ್ ಮತ್ತು ಬ್ಯಾಲೆನ್ಸ್‌ಗಳನ್ನು ಅನುಷ್ಠಾನಗೊಳಿಸಲು ಅವರೇ ಜವಾಬ್ದಾರರಾಗಿರುತ್ತಾರೆ. ಮತ್ತು ದಾಖಲೆಗಳು ಸರಿಯಾದ ರೀತಿಯಲ್ಲಿ ಇಲ್ಲದೆ ಇದ್ದಾಗ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು, ಮತ್ತು ಕೆಲವು ಸಂದರ್ಭಗಳಲ್ಲಿ ಉದ್ಯೋಗಿಗಳು HRA ಅಥವಾ ಇತರ ಭತ್ಯೆಗಳಿಗಾಗಿ ನಕಲಿ ಹಕ್ಕುಗಳನ್ನು ಸಲ್ಲಿಸುವಂತಹ ಉದ್ಯೋಗಿಗಳನ್ನು ವಜಾಗೊಳಿಸಬಹುದು ಎಂದು ಆದಾಯ ಇಲಾಖೆಯು ತಿಳಿಸಿದೆ.

advertisement

Leave A Reply

Your email address will not be published.