Karnataka Times
Trending Stories, Viral News, Gossips & Everything in Kannada

ATM Money: ದೇಶಾದ್ಯಂತ ATM ನಿಂದ ಹಣ ತಗೆಯುವವರಿಗೆ ಗುಡ್ ನ್ಯೂಸ್ ! ರಿಸರ್ವ್ ಬ್ಯಾಂಕ್ ಹೊಸ ರೂಲ್ಸ್

advertisement

What To Do If ATM Dispenses Mutilated Or Torn Notes?: ಸಾಮಾನ್ಯವಾಗಿ ಒಂದು ವೇಳೆ ನೀವು ಎಟಿಎಂನಿಂದ ಹಣವನ್ನು ತೆಗೆದರೆ ಅದರಲ್ಲಿ ಯಾವುದಾದರೂ ಹರಿದು ಹೋಗಿರುವ ನೋಟು ಬಂದರೆ ಏನು ಮಾಡಬೇಕು ಅನ್ನೋದಾಗಿ ನೀವು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳಬೇಕಾದ ಅಗತ್ಯ ಇಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮದಂತೆ ಹರಿದು ನೋಟುಗಳನ್ನು ಬ್ಯಾಂಕಿನಲ್ಲಿ ಹೋಗಿ ನೀವು ಬದಲಾಯಿಸಬಹುದು ಹಾಗೂ ಬ್ಯಾಂಕಿನವರು ಇದನ್ನ ಬದಲಾಯಿಸಿ ಕೊಡೋದಿಲ್ಲ ಅನ್ನೋ ಹಾಗಿಲ್ಲ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮಗಳನ್ನು ಕೂಡ ಜಾರಿಗೆ ತಂದಿದೆ.

ಹರಿದ ನೋಟುಗಳನ್ನು ಬದಲಾಯಿಸುವುದು ತುಂಬಾ ಸುಲಭ

ಒಂದು ವೇಳೆ ಎಟಿಎಂನಿಂದ ಹಣ ತೆಗೆಯುವಾಗ ಅಲ್ಲಿ ಹರಿದು ಹೋಗಿದ್ದರೆ ಆ ಸಂದರ್ಭದಲ್ಲಿ ಬ್ಯಾಂಕಿಗೆ ಹೋಗಿ ಅದನ್ನು ಬದಲಾಯಿಸುವುದು ತುಂಬಾನೇ ಸುಲಭ ಎಂಬುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(The Reserve Bank of India (RBI) )  ಹೇಳಿಕೊಂಡಿದೆ. ಹೆಚ್ಚು ಸಮಯ ಕೂಡ ತೆಗೆದುಕೊಳ್ಳುವುದಿಲ್ಲ ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಗಿದು ಹೋಗುತ್ತದೆ ಎಂಬುದಾಗಿ ಕೂಡ ಹೇಳಿದೆ.

ಇದಕ್ಕಾಗಿ ನೀವು ಎಟಿಎಂ ಹಣವನ್ನು ಪಡೆದ ನಂತರ ಕೂಡಲೇ ಬ್ಯಾಂಕಿಗೆ ಹೋಗಿ ಯಾವ ಎಟಿಎಂನಿಂದ ಪಡೆದುಕೊಂಡಿದ್ದೀರಿ ಯಾವಾಗ ಪಡೆದುಕೊಂಡಿದ್ದೀರಿ ದಿನಾಂಕ ಪ್ರತಿಯೊಂದು ವಿವರಗಳನ್ನು ಬ್ಯಾಂಕಿನಲ್ಲಿರುವಂತಹ ಅಪ್ಲಿಕೇಶನ್ ನಲ್ಲಿ ತುಂಬಿ ಅದರ ಜೊತೆಗೆ ನೀವು ಹಣವನ್ನು ತೆಗೆದಿರುವಂತಹ ಎಟಿಎಂ ಸ್ಲಿಪ್ಪನ್ನು ಕೂಡ ನೀಡಬೇಕಾಗಿರುತ್ತದೆ. ಇಲ್ಲವಾದಲ್ಲಿ ಮೊಬೈಲ್ ನಲ್ಲಿ ಬಂದಿರುವಂತಹ ಟ್ರಾನ್ಸಾಕ್ಷನ್ ಡೀಟೇಲ್ಸ್ ಅನ್ನು ಕೂಡ ನೀಡಬಹುದಾಗಿದೆ. ಈಗಾಗಲೇ ಈ ಬಗ್ಗೆ ಜಾಹಿರಾತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಜನರಲ್ಲಿ ಅರಿವನ್ನು ಮೂಡಿಸುವಂತಹ ಕೆಲಸ ನಡೆಯುತ್ತಿದೆ.

advertisement

ಎಲ್ಲಿ ಹಾಗೂ ಯಾವ ರೀತಿಯ ನೋಟುಗಳು ಎಕ್ಸ್ಚೇಂಜ್ ಆಗುತ್ತವೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿ ತಂದಿರುವಂತಹ ಸರ್ಕುಲರ್ ಪ್ರಕಾರ ಆರ್ ಬಿ ಐ ನ ಇಶ್ಯು ಆಫೀಸ್ ಹಾಗೂ ಪಬ್ಲಿಕ್ ಮತ್ತು ಪ್ರೈವೇಟ್ ಸೆಕ್ಟರ್ ನ ಎಲ್ಲಾ ಬ್ಯಾಂಕುಗಳಲ್ಲಿ ಇದನ್ನು ಬದಲಾಯಿಸಬಹುದಾಗಿದೆ. ಹತ್ತು ರೂಪಾಯಿಗಳಿಗಿಂತ ಹೆಚ್ಚಿನ ಮುಖಬೆಲೆ ಹೊಂದಿರುವಂತಹ ನೋಟುಗಳನ್ನು ಮಾತ್ರ ಬದಲಾಯಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಂದು ಬಾರಿಗೆ ಹೆಚ್ಚೆಂದರೆ 20 ನೋಟುಗಳನ್ನು ಅಂದರೆ ಐದು ಸಾವಿರ ರೂಪಾಯಿಗಳ ಒಟ್ಟು ಮೌಲ್ಯವನ್ನು ಮೀರಿದಂತೆ ಎಕ್ಸ್ಚೇಂಜ್ ಮಾಡಬಹುದಾಗಿದೆ.

Image Source: Firstpost

ಕೆಲವೊಂದು ಪರಿಸ್ಥಿತಿಗಳು ಅಂದ್ರೆ ನೋಟು ಸಂಪೂರ್ಣವಾಗಿ ಸುಟ್ಟು ಹೋಗಿರುವುದು ಅಥವಾ ತುಂಡು ತುಂಡಾಗಿರುವಂತಹ ನೋಟುಗಳನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ. ಒಂದು ವೇಳೆ ಯಾವುದೇ ಬ್ಯಾಂಕುಗಳು ಎಟಿಎಂನಿಂದ ತೆಗೆದಂತಹ ಹಣ ಹರಿದು ಹೋಗಿದ್ದರೆ ಅದನ್ನ ಎಕ್ಸ್ಚೇಂಜ್ ಮಾಡೋದಕ್ಕೆ ಒಪ್ಪದೆ ಹೋದಲ್ಲಿ ನೀವು ನೇರವಾಗಿ ರಿಸರ್ವ್ ಬ್ಯಾಂಕಿಗೆ ಕಂಪ್ಲೇಂಟ್ ನೀಡಬಹುದಾಗಿದೆ.

advertisement

Leave A Reply

Your email address will not be published.