Karnataka Times
Trending Stories, Viral News, Gossips & Everything in Kannada

Driving License: ಜೂನ್ 1 ರಿಂದ ಡ್ರೈವಿಂಗ್ ಲೈಸನ್ಸ್ ನಲ್ಲಿ ಮಹತ್ವದ ಬದಲಾವಣೆ

advertisement

ಪ್ರತಿಯೊಂದು ವಾಹನಗಳಿಗೂ ಪರವಾನಿಗೆ ಎನ್ನುವುದು ತುಂಬಾ ಮುಖ್ಯ. ವಾಹನ ಪರವಾನಿಗೆ ಇಲ್ಲದೆ ವಾಹ‌ನ ಚಲಾಯಿಸಿದರೆ ನೀವು ಚಲಾಯಿಸಿದ್ದ ಸಮಯಕ್ಕೆ ಪೊಲೀಸ್ ಕೈಲಿ ಸಿಕ್ಕಿ ಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ಫೈನ್ ಅನ್ನು ಕೂಡ ಕಟ್ಟಬೇಕಾಗುವ ಸಾಧ್ಯತೆ ಇರಲಿದೆ. ಅದೇ ರೀತಿ ಡೈವಿಂಗ್ ಲೈಸೆನ್ಸ್ (Driving License) ಪಡೆಯಬೇಕಾದರೂ ಕೆಲವೊಂದು ವಾಹನ ಓಡಿಸಲು ಬರುತ್ತಾ ಎಂಬ ಟೆಸ್ಟ್ ಆಗುತ್ತದೆ ಜೊತೆಗೆ ಪಾರ್ಕಿಂಗ್ ನಿಯಮದ ಕೆಲವೂ ಚಿಹ್ನೆಗಳನ್ನು ಗುರುತಿಸಲು ರಿಟರ್ನ್ ಟೆಸ್ಟ್ ಕೂಡ ಇರಲಿದೆ.

ಡಿಎಲ್ ಎಲ್ಲಿ ಸಿಗಲಿದೆ?

ವಾಹನದ ಪರವಾನಿಗೆ ಪಡೆಯಬೇಕಾದರೆ ಅದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇತ್ತೀಚೆಗೆ ಕೆಲವು ಏಜೆಂಟ್ ಮೂಲಕ ಕೂಡ ಅರ್ಜಿ ಹಾಕಬಹುದು. ವಾಹನ ಪರವಾನಿಗೆ (Driving License) ಯನ್ನು ನೀವು ಸರಕಾರದ ಸಾರಿಗೆ ಪ್ರಾದೇಶಿಕ ಕಚೇರಿ (RTO) ಕಚೇರಿ ಮೂಲಕ ಪಡೆಯಬಹುದು. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿ ಇರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು ಆದರೆ ಇನ್ನು ಮುಂದೆ ಈ ನಿಯಮ ಸಂಪೂರ್ಣ ಬದಲಾವಣೆ ಆಗಲಿದೆ.

ಯಾವ ಅಂಶ‌ ಬದಲಾಗಲಿದೆ?

 

Image Source: The Indian Express

 

advertisement

ನೀವು ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ಪಡೆಯಲು RTO ಕಚೇರಿಗೆ ತೆರಳಬೇಕಿಲ್ಲ ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಡ್ರೈವ್ ಮಾಡಿ ಸರ್ಟಿಫಿಕೇಟ್ ಅನ್ನು ನೀವು ಪಡೆಯಬಹುದು. ಹಾಗಾಗಿ RTO ಕಚೇರಿಗೆ ಅಲೆದಾಟ ನಡೆಸುವ ಅಗತ್ಯ ಇರಲಾರದು. ಹಾಗಾದರೆ ಈ ನಿಯಮ ಯಾವಾಗ ಜಾರಿಗೆಬರಲಿದೆ ಯಾರೆಲ್ಲ ಈ ಒಂದು ವ್ಯವಸ್ಥೆ ಅಡಿಯಲ್ಲಿ ಖಾಸಗಿ ಚಾಲನ ಪರವಾನಿಗೆ ನೀಡಬಹುದು ಎಂಬ ಇತ್ಯಾದಿ ಮಾಹಿತಿಯನ್ನು ಸಂಪೂರ್ಣ ಓದಿ ತಿಳಿಯಿರಿ.

ತರಬೇತಿ ಕೇಂದ್ರ ನಿರ್ಮಿಸಬೇಕೆ?

ನೀವು ಕೂಡ ಖಾಸಗಿ ತರಬೇತಿ ಕೇಂದ್ರ ನಿರ್ಮಾಣ ಮಾಡಿ ಲಾಭ ಪಡೆಯಬೇಕು ಎಂದು ಬಯಸಿದ್ದರೆ ಆಗ ನೀವು ಕನಿಷ್ಠ ಒಂದು ಎಕರೆ ಜಮೀನನ್ನಾದರೂ ಹೊಂದಿರಬೇಕು. ಅದರ ಜೊತೆಗೆ ತರಬೇತಿ ನೀಡುವವರು ಹೈಸ್ಕೂಲ್, Diploma ವಿದ್ಯಾಭ್ಯಾಸ ಹೊಂದಿರಬೇಕು. 5 ವರ್ಷಗಳ ಚಾಲನಾ ಅನುಭವ ಇರಬೇಕು. ಬಯೋಮೆಟ್ರಿಕ್ ಮಾಹಿತಿ ತಂತ್ರಜ್ಞಾನ ಅರಿತಿದ್ದು ಎಲ್ಲ ತರದವಾಹನಗಳಿಗೆ ಬೇಕಾದ ಸಾಮಾನ್ಯ ಮಾಹಿತಿಯಿಂದ ಓಡಿಸುವುದರ ತನಕ ಎಲ್ಲ ಅಂಶಗಳನ್ನು 6ವಾರದ ಒಳಗೆ ಕಲಿಸಬೇಕು. ಬಳಿಕ ಅವರ ಡ್ರೈವಿಂಗ್ ಲೈಸೆನ್ಸ್ ಅನ್ನು ಖಾಸಗಿ ಸಂಸ್ಥೆಗಳು ಸರಕಾರದ ಪರವಾನಿಗೆ ಪಡೆದ ನಂತರವೇ ನೀಡಬಹುದು.

ಯಾವಾಗ ಬರಲಿದೆ?

 

Image Source: Zee News

 

ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಿಗೆ ಪಡೆಯುವ ವ್ಯವಸ್ಥೆ ಜೂನ್ 1, 2024ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಿಗೆ 200, ಕಲಿಕಾ ಪರವಾನಿಗೆ ನವೀಕರಣ 200, ಅಂತಾರಾಷ್ಟ್ರೀಯ ಪರವಾನಿಗೆ 1000 ಹಾಗೂ ಶಾಶ್ವತ ಪರವಾನಿಗೆ 200 ರೂಪಾಯಿ ಇರಲಿದೆ. ನೀವು ಚಾಲನಾ ಪರವಾನಿಗೆ (Driving License) ಪಡೆಯಬೇಕಾದರೆ https://parivahan.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಿ ಅದರಲ್ಲಿ ಕೆಲ ಅಗತ್ಯ ದಾಖಲೆ ಫಿಲಪ್ ಮಾಡಿ RTO ಕಚೇರಿಗೆ ಸಲ್ಲಿಸಬಹುದು ಇಲ್ಲವೇ ಖಾಸಗಿ ಏಜೆಂಟ್ ಗೆ ಹಣ ನೀಡಿದರೆ ಎಲ್ಲ ಪ್ರಕ್ರಿಯೆ ಅವರೇ ನೋಡಿಕೊಳ್ಳುವರು.

advertisement

Leave A Reply

Your email address will not be published.