Karnataka Times
Trending Stories, Viral News, Gossips & Everything in Kannada

Profitable Crop: ಅಡಿಕೆ ಅಲ್ಲ ಈ ಬೆಳೆಯಲ್ಲಿ ಒಂದೂವರೆ ಎಕರೆಗೆ 25 ಲಕ್ಷ ಗಳಿಸಿದ ರೈತ

advertisement

ಇಂದು ಭಾರತಾದ್ಯಂತ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು ಹೆಚ್ಚಿನ ರೈತರು ಕೃಷಿಯಿಂದ ಬರುವ ಆದಾಯ ಮೂಲಕವೇ ಬದುಕು ಸಾಗಿಸುತ್ತಿದ್ದಾರೆ.‌ ಇಂದು ಹೆಚ್ಚಿನ ರೈತರು ತೆಂಗು,ಕಂಗು, ತರಕಾರಿ,ಹಣ್ಣು ಇತ್ಯಾದಿ ಕೃಷಿಗಳಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಅದರಲ್ಲೂ ಇಲ್ಲೊಬ್ಬ ರೈತರು ಶುಂಠಿ ಬೆಳೆ (Ginger Crop) ಯನ್ನು ಬೆಳೆಯುವ ಮೂಲಕ ಹೆಚ್ಚು ಲಾಭ ಗಳಿಸುತ್ತಿದ್ದಾರೆ.

ಶುಂಠಿ ಬೆಳೆ:

ಶುಂಠಿ ನಮ್ಮ ದಿನನಿತ್ಯದಲ್ಲಿ ಇಂದು ಹೆಚ್ಚಾಗಿ ಬಳಕೆ ಮಾಡುತ್ತೇವೆ.‌ ಅದರಲ್ಲೂ ಭಾರತೀಯರು ಸಂಬಾರು ಪದಾರ್ಥಗಳಿಗೆ ಶುಂಠಿ ಯನ್ನು ಹೆಚ್ಚು ಬಳಕೆ ಮಾಡುವ ಮೂಲಕ ಈ ಮಸಾಲೆ ಪದಾರ್ಥ, ಜೀರ್ಣ ಪ್ರಕ್ರಿಯೆಯಲ್ಲಿ ಶುಂಠಿಯದ್ದು ಮೂಲಪಾತ್ರವಾಗಿದೆ. ಹೀಗಾಗಿ ಶುಂಠಿಯನ್ನು ಸಸ್ಯಹಾರ ಹಾಗೂ ಮಾಂಸಹಾರ ಎರಡು ಪದಾರ್ಥ ಗಳಿಗೂ ಬಳಸಲಾಗುತ್ತದೆ.

ಶುಂಠಿ ಉತ್ಪಾದನೆ ಹೆಚ್ಚಳ:

 

Image Source: Kisan of India

 

ಇಲ್ಲಿ ರೈತರೊಬ್ಬರು ಶುಂಠಿ (Ginger) ಜೊತೆಗೆ ಇತರ ಪರ್ಯಾಯ ಬೆಳೆಯಾದ ಕಾಳು ಮೆಣಸು, ಗೆಣಸು ಇತ್ಯಾದಿ ಬೆಳೆಸಿ ಲಾಭ ಗಳಿಸುತ್ತಿದ್ದಾರೆ. ಶುಂಠಿ ಉತ್ಪಾದನೆಯು ಶೇ. 45 ರಷ್ಟನ್ನು ಭಾರತದಲ್ಲಿ ಬೆಳೆಸ ಲಾಗುತ್ತಿದ್ದು ಭಾರತದಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಇಲ್ಲಿಯು ಹೆಚ್ಚಾಗಿ ಬೆಳೆಸಲಾಗುತ್ತದೆ.

advertisement

ಹೆಚ್ಚಿನ ಆದಾಯ ಪಡೆಯಬಹುದು:

ಇಲ್ಲೊಬ್ಬರು ರೈತರು ಒಂದುವರೆ ಎಕರೆಗೆ ಇಪ್ಪತೈದು ಲಕ್ಷ ಸಂಪಾದನೆ ಮಾಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಮೀನಿನಲ್ಲಿ ಸಾವಯವ ಕೃಷಿ ಮೂಲಕ‌ ಶುಂಠಿ ಬೆಳೆಯನ್ನು ಬೆಳೆದಿದ್ದು, 30ಲಕ್ಷ ರೂ. ಆದಾಯದ ಲಾಭ ‌ಪಡೆದಿದ್ದಾರೆ. ರೈತರು ಆರ್ಥಿಕವಾಗಿ ಅಭಿವೃದ್ಧಿ ಯಾಗಲು ಈ‌ ಶುಂಠಿ ಕೃಷಿ (Ginger Cultivation) ರೈತರಿಗೆ ಬಹಳಷ್ಟು ಸಹಕಾರಿ ಆಗಿದ್ದು, ಕಡಿಮೆ ವೆಚ್ಚ ದೊಂದಿಗೆ ಅಧಿಕ ಲಾಭ ಪಡೆದುಕೊಳ್ಳಲು ಶುಂಠಿ ಬೆಳೆ‌ ಸಹಕಾರ ಕೂಡ ಆಗಲಿದೆ.

ಹೇಗೆ ಬೆಳೆಯಬೇಕು?

ನೀರು ಹರಿದು ಹೋಗುವಂತಹ ಮರಳು ಮಿಶ್ರಿತ ಕೆಂಪು ಅಥವಾ ಜಂಬಿಟ್ಟಿಗೆ ಮಣ್ಣಿನಲ್ಲಿ ಶುಂಠಿ (Ginger) ಬೆಳೆಯಲು ಬಹಳಷ್ಟು ಸೂಕ್ತವಾಗಿದ್ದು ಇದರಲ್ಲಿ ಮಹಿಮಾ, ಮಾರನ್‌ ಮತ್ತು ಸ್ಥಳಿಯ ತಳಿಗಳನ್ನು ಕೂಡ ಇಲ್ಲಿ ಬೆಳೆಯಬಹುದಾಗಿದೆ. ಶುಂಟಿಯನ್ನು 30 ಸೆ.ಮೀ. ಅಂತರದಲ್ಲಿ 2 ಸಾಲುಗಳಲ್ಲಿ‌ ನಾಟಿ ಮಾಡಿ, ಮನೆಯಲ್ಲಿಯೇ ಸಾವಯವ ಗೊಬ್ಬರವನ್ನು ಅಳವಡಿಕೆ ‌ಮಾಡಿಕೊಳ್ಳಬೇಕು. ಇದಕ್ಕೆ ಬೇವಿನ ಹಿಂಡಿಯನ್ನು ಮಾಡಿ ಶುಂಠಿ ಬಿತ್ತನೆ ಮಾಡುವಾಗ ಹಾಕಿದರೆ ಕೊಳೆರೋಗ ಮತ್ತು ಬೇರುಗಂಟು ಹುಳು ಕಡಿಮೆಯಾಗಲಿದೆ.

ನೀರು ಎಷ್ಟು ಬೇಕು?

ನೀರು ನಿಲ್ಲುವ ಜಾಗದಲ್ಲಿ ಶುಂಠಿ (Ginger) ಬೆಳೆಯಬಾರದು. 6-7 pH ಹೊಂದಿರುವ ಮಣ್ಣನ್ನು ಶುಂಠಿ ಕೃಷಿಗೆ ಬಳಸಬೇಕು. ಶುಂಠಿ ಬೆಳೆ ಸಿದ್ಧವಾಗಲು 8 ರಿಂದ 9 ತಿಂಗಳು ಬೇಕಾಗಬಹುದು. ಶುಂಠಿಯನ್ನು ಬಿತ್ತನೆ ಮಾಡಿದ ಕೂಡಲೇ ನೀರು ಹಾಕಬೇಕು. ನಂತರ ಪ್ರತಿ 10 ದಿನಗಳ ಅಂತರದಲ್ಲಿ ನೀರು ಹಾಯಿಸಬೇಕು.

advertisement

Leave A Reply

Your email address will not be published.