Karnataka Times
Trending Stories, Viral News, Gossips & Everything in Kannada

Profitable Crop: ಈ ಬೆಳೆ ಬೆಳೆದು ಎಕರೆಗೆ 12 ಲಕ್ಷ ಗಳಿಸಿದ ರೈತ! ಇಲ್ಲಿದೆ ವಿಧಾನ

advertisement

ಶುಂಠಿಯನ್ನು ಇಂದು ದೈನಿಕ ಆಹಾರ, ಔಷಧವಾಗಿ ಅತೀ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ದೇಶೀಯ ಮಟ್ಟದಲ್ಲಿ ಮಾತ್ರವಲ್ಲದೇ ವಿದೇಶಿಯ ಮಟ್ಟದವರೆಗೂ ಶುಂಠಿ ಬೆಳೆಗೆ ಅಧಿಕ ಬೇಡಿಕೆ ಇದ್ದೇ ಇದೆ. ವಿಶ್ವದ ಒಟ್ಟು ಶುಂಠಿ (Ginger) ಉತ್ಪಾದನೆಯಲ್ಲಿ 50% ನಷ್ಟು ಶುಂಠಿಯನ್ನು ಭಾರತ ಉತ್ಪಾದನೆ ಮಾಡುತ್ತಿದೆ. ಸೌದಿ ಅರೆಬಿಯಾ, ಇಂಗ್ಲೆಂಡ್ ಇತರ ದೇಶಕ್ಕೆ ಭಾರತದಿಂದ ರಫ್ತು ಮಾಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಈ ಶುಂಠಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ. ಹಾಗಾಗಿ ನೀವು ಈ ಕೃಷಿ ಮಾಡಿ ವರ್ಷಕ್ಕೆ ಲಕ್ಷ ರೂಪಾಯಿ ಆದಾಯ ಪಡೆಯಬಹುದು.

ಯಾವ ರೀತಿ ಮಣ್ಣು ಬೇಕು:

ಮರಳು ಮಿಶ್ರಿತ ಗೋಡು ಮಣ್ಣು,ಜೇಡಿ ಗೋಡು ಮಣ್ಣು, ಜಂಬಿಟ್ಟಿಗೆ ಗೋಡು ಮಣ್ಣಿನಲ್ಲಿ ಶುಂಠಿ ಬೆಳೆ (Ginger Crop) ತೆಗೆಯಬಹುದು. ಸಮುದ್ರ ಮಟ್ಟದಿಂದ 1500 km ಎತ್ತರದಲ್ಲೂ ಬೆಳೆಯಬಹುದು. ಮಳೆಯಾದಾರಿತ ಮತ್ತು ನೀರಿನ ಸಹಾಯದಿಂದ ಈ ಕೃಷಿ (Ginger Cultivation) ಮಾಡಬಹುದು. ಮಾರಂ, ಕುರಪ್ಪನ್ ಪಾಡಿ, ಹಿಮಾಚಲ್ ಪ್ರದೇಶ್, ವೈನಾಡ್, ನಾಡಿಯಾ ಎಂಬ ದೇಶಿಯ ತಳಿಗಳಿಗೆ ಹೆಚ್ಚು ಬೇಡಿಕೆ ಇದೆ.

 

Image Source: Agri Farming

 

ಯಾವೆಲ್ಲ ತಳಿ ಇದೆ?

advertisement

ಸುಪ್ರಭಾ, ವರದಾ, ಸುರುಚಿ, ಸುರಭಿ, ಹಿಮಗಿರಿ, ಮಹಿಮಾ, ರೇಜತಾ ಎಂಬ ಅನೇಕ ತಳಿಗಳು ಪ್ರಸ್ತುತ ಜನಪ್ರಿಯವಾಗಿದೆ. ನೀವು ಒಂದು ತಳಿಯ ಶುಂಠಿ ಬೆಳೆಯುವುದಕ್ಕಿಂತಲೂ ಎರಡು ಅಥವಾ ಮೂರು ತಳಿ ಬೆಳೆದರೆ ನಿಮ ಮಣ್ಣಿನ ಫಲವತ್ತತೆಗೆ ಯಾವುದು ಉತ್ತಮ. ರಿಗೋಡಿ, ಹಿಮಾಚಲನ್, ಮಾರನ್ ತಳಿ ಜೊತೆಯಾಗಿ ನಾಟಿ ಮಾಡಿ ಅಂತರ ಕಾಯಬೇಕು. ಬಿತ್ತನೆ ಉದ್ದೇಶಕ್ಕೆ ಕೂಡ ಶುಂಠಿಗೆ ಅಧಿಕ ಬೇಡಿಕೆ ಇದೆ.

ಹೇಗೆ ಕೃಷಿ ಮಾಡುವುದು?

 

Image Source: Rozana Spokesman

 

ಈ ಕೃಷಿ (Ginger Cultivation) ಮಾಡುವ ಮುನ್ನ ಭೂಮಿಯನ್ನು ಒಂದು ಅಡಿ ಅಗೆದು ಬಳಿಕ ಮಣ್ಣನ್ನು ಹರಡಬೇಕು. 30-35% ಟೆಂಪರೇಚರ್ ಇರಬೇಕು. ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಎರಡನ್ನು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ನಾಟಿ ಮಾಡುವಾಗ ಒಂದು ಹೆಕ್ಟರ್ ಗೆ 25ರಿಂದ 40ಟನ್ ನಷ್ಟು ಕೊಟ್ಟಿಗೆ ಗೊಬ್ಬರ ನೀಡಬೇಕು. ರೆಡ್ ಪೊಟ್ಯಾಶ್ ಹೀಗೆ ಅನೇಕ ತರನಾದ ಗೊಬ್ಬರ ಶುಂಠಿ ಬೆಳೆಗೆ ಬಹಳ ಸೂಕ್ತವಾಗಿದೆ. ಫ್ರುಮಿಕ್ ಆ್ಯಸಿಡ್, ಬೇವಿನ ಹಿಂಡಿ ಎಲ್ಲವನ್ನು ಸಸಿಗೆ ನೀಡಬೇಕು.

ನೀರಾವರಿ ನೀಡುವಾಗ ಸ್ಪಿಂಕ್ಲರ್ ನೀರು ಅಧಿಕ ಬಳಕೆ ಆಗಲಿದೆ. ಬೇರು ಕಾಂಡ ಆರಂಭಿಕ ಹಂತ, ಬೆಳವಣಿಗೆ ಹಂತದಲ್ಲಿ ಸೂಕ್ತ ಕಾಲಕ್ಕೆ ತಕ್ಕಂತೆ ನೀರಿನ ಪೋಷಣೆ ಮಾಡಬೇಕು.ಕಾಂಡ ಕೊರೆಯುವ ಹುಳಗಳು ಅಧಿಕ ಇರುವಂತದ್ದಾಗಿದ್ದು ಅವುಗಳ ಬಗ್ಗೆ ಮೊದಲೇ ಕಾಳಜಿ ವಹಿಸಬೇಕು. ಎಲೆ ತಿನ್ನುವ ಸೂಕ್ಷ್ಮ ಹುಳುಗಳು, ಗಡ್ಡೆಕೊಳೆರೋಗ ಇವುಗಳು ಶುಂಠಿಯನ್ನು ಅತಿ ಹೆಚ್ಚು ರೋಗ ಹಾನಿಗೆ ತುತ್ತಾಗುವಂತೆ ಮಾಡಲಿದ್ದು ಅವುಗಳಿಗೆ ಕಾಲಕ್ಕೆ ತಕ್ಕಂತೆ ಪೋಷಣೆ ನೀಡಬೇಕು.

ಬಿತ್ತನೆ ಮಾಡಿದ್ದ 210-240 ದಿನಗಳ ಒಳಗೆ ಕಟಾವು ಮಾಡಬಹುದು. ನಮ್ಮ ದೇಶದಲ್ಲಿ 180ದಿನದ ಬಳಿಕ ಶುಂಠಿ ಕಟಾವು ಮಾಡಲಾಗುತ್ತದೆ. 10 ತಿಂಗಳ ಬಳಿಕ ಶುಂಠಿ ಕಟಾವು ಮಾಡುವುದು ಉತ್ತಮ ಎನ್ನಬಹುದು. ಒಂದು ಗಿಡದಲ್ಲಿ 1-2kg ತನಕ ಶುಂಠಿ ಬಂದಿದ್ದು ಇದೆ. ಒಂದು ಎಕರೆ ಮೇಲೆ 30 ಲಕ್ಷಕ್ಕೂ ಅಧಿಕ ಆದಾಯ ಗಳಿಸಬಹುದು.

advertisement

Leave A Reply

Your email address will not be published.