Karnataka Times
Trending Stories, Viral News, Gossips & Everything in Kannada

Crop Relief Money: ಬೆಳೆ ಪರಿಹಾರದ ಹಣದ ಹೊಸ ಲಿಂಕ್ ಬಿಟ್ಟ ಸರ್ಕಾರ! ಇಂತಹವರಿಗೆ ಹಣ ಬರೋದಿಲ್ಲಾ ಚೆಕ್ ಮಾಡಿ

advertisement

ರೈತರು ಈ ದೇಶದ ಪ್ರಮುಖ ಭಾಗವಾಗಿದ್ದು ರೈತರ ಶ್ರೆಯೋಭಿವೃದ್ದಿ ಕೂಡ ಬಹಳ ಮುಖ್ಯವಾಗುತ್ತದೆ. ಆದರೆ ತಾವು ಬೆಳೆದ ಬೆಳೆಯಲ್ಲಿ ಫಸಲು ಇಲ್ಲ,ಇಳುವರಿ ಇಲ್ಲ‌ ಅಂದಾಗ ರೈತರಿಗೆ ಬಹಳಷ್ಟು ಬೇಸರವಾಗಲಿದೆ.ಈ ಭಾರಿ ಯಂತು ರೈತರು ಬಹಳಷ್ಟು ಕಷ್ಟದಲ್ಲಿದ್ದಾರೆ.ಈ ಭಾರಿಯ ಬಿಸಿಲಿನ ಪರಿಣಾಮ ಎಲ್ಲ ಕಡೆ ಆವರಿಸಿದ್ದು ನೀರಿನ ಸಮಸ್ಯೆ ಉಂಟಾಗಿ ಕೃಷಿಗೆ ಕೂಡ ಹಾನಿಯಾಗಿದೆ.

ಇದಕ್ಕಾಗಿ ರೈತರ ಸಮಸ್ಯೆ ಯನ್ನು ನಿವಾರಣೆ ಮಾಡಲು ಸರಕಾರ ಬೆಳೆಪರಿಹಾರದ ಹಣ (Crop Relief Money) ವನ್ನು ಜಮೆ ಮಾಡಿದೆ.ಆದರೆ ಬೆಳೆ ಪರಿಹಾರದ ಮೊತ್ತ ಕೆಲವು ರೈತರಿಗೆ ಬಿಡುಗಡೆ ಯಾಗಿದ್ದು ಕೆಲವು ರೈತರಿಗೆ ಹಣ ಬಿಡುಗಡೆಯಾಗಿಲ್ಲ.ಈ ಬಗ್ಗೆ ಮಾಹಿತಿ ಇಲ್ಲಿದೆ.

ಕಂದಾಯ ಇಲಾಖೆಯಿಂದ ಪಟ್ಟಿ ಬಿಡುಗಡೆ:

ಇದೀಗ ಕಂದಾಯ ಇಲಾಖೆಯ Parihara ಎನ್ನುವ ವೆಬ್ಸೈಟ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಬೆಳೆ ಪರಿಹಾರ ಹಣ ಜಮೆ ಆಗದ ಇರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ರೈತರು ಈ ಬಗ್ಗೆ ಮಾಹಿತಿ ತಿಳಿಯಬಹುದಾಗಿದೆ.

ಯಾಕೆ ಹಣ ಬಂದಿಲ್ಲ?

 

Image Source: News18

 

advertisement

ರೈತರು ಬರ ಪರಿಹಾರದ, ಬೆಳೆ ವಿಮೆ ಹಣ (Crop Insurance Money) ಜಮೆಯಾಗಬೇಕಾದರೆ ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ.ಈ ದಾಖಲೆ ಇಲ್ಲದೆ ಇದ್ದಲ್ಲಿ ಹಣ ಬರುವುದಿಲ್ಲ. ಅದೇ ರೀತಿ ಎಫ್.ಐ.ಡಿ ಯಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ವಿವಿಧ ಕೃಷಿಗೆ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ, ಇತ್ಯಾದಿ ಸೌಲಭ್ಯ ಸಿಗಲಿದ್ದು ನಿಮ್ಮ ಪಹಣಿ ಮಾಹಿತಿ ಇದರಲ್ಲಿ ಕಡ್ಡಾಯವಾಗಿ ಇರಬೇಕು. ಮತ್ತು ನಿಮ್ಮ ಆಧಾರ್ ಪಹಣಿ ಪತ್ರಗಳ ದಾಖಲೆ ಸರಿ ಇರಬೇಕು.

ಹಣ ಜಮೆಯಾಗದ ರೈತರ ಪಟ್ಟಿ ತಿಳಿದುಕೊಳ್ಳಿ:

ಮೊದಲಿಗೆ ನೀವು Parihara Payment Stopped Farmers list ಎಂದು ಸರ್ಚ್ ಮಾಡಿ. ಬಳಿಕ Parihara ಎನ್ನುವ Options ಆಯ್ದುಕೊಳ್ಳಿ. ಇದಾದ ಬಳಿಕ Village Wise List ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ Parihara Payment Report ಎನ್ನುವ ಆಯ್ಕೆ ಕಾಣಲಿದ್ದು ಇಲ್ಲಿ 2023-24, ವರ್ಷ ಆಯ್ಕೆ ಮಾಡಿ, ಮುಂಗಾರು, Calamity Type ಆಯ್ಕೆ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು,ಹೋಬಳಿ, ಆಯ್ಕೆ ಮಾಡಿಕೊಂಡು get Report ಕೊಟ್ಟರೆ Payment Failed ಮಾಹಿತಿ ತಿಳಿಯಲಿದೆ.

ಗ್ರಾಮ ಲೆಕ್ಕಾಧಿಕಾರಿ ಭೇಟಿ ಮಾಡಿ:

ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಜಮೀನಿನ ಪಹಣಿ ಇತ್ಯಾದಿ ದಾಖಲೆ ಪಡೆದು ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿ,ಹಣ ಜಮೆಯಾಗದ ಬಗ್ಗೆ ತಿಳಿದುಕೊಳ್ಳಿ. ಯಾವ ತ್ರಾಂತ್ರಿಕ ಸಮಸ್ಯೆಯಿಂದ ನಿಮಗೆ ಈ ಹಣ ಬಂದಿಲ್ಲ ಈ ಬಗ್ಗೆ ದಾಖಲೆ ಸರಿಪಡಿಸಿ.

ಅಧಿಕೃತ ವೆಬ್ಸೈಟ್ ಲಿಂಕ್ : parihara.karnataka.gov.in/PariharaPayment

advertisement

Leave A Reply

Your email address will not be published.