Karnataka Times
Trending Stories, Viral News, Gossips & Everything in Kannada

Loan: ರೈತರ ಸಾಲ ಮನ್ನಾ ಬಗ್ಗೆ ಸಿಎಂ ಸಿದ್ದರಾಮಯ್ಯ ಬಿಗ್ ಅಪ್ಡೇಟ್! ಎಲೆಕ್ಷನ್ ಗೂ ಮುನ್ನವೇ ಸಿಹಿಸುದ್ದಿ

advertisement

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಬಂದಾಗಿನಿಂದ ಹಲವಾರು ರೀತಿಯಾದಂತಹ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಹಲವು ರೀತಿಯಾದಂತಹ ಸಮಸ್ಯೆಗಳಿಗೆ ಪರಿಹಾರವು ಸಹ ದೊರಕಿದೆ. ಹಲವಾರು ರೀತಿಯಾದಂತಹ ಸೌಲಭ್ಯಗಳನ್ನು ಕೂಡ ಸುಲಭ ರೀತಿಯಲ್ಲಿ ಎಲ್ಲರಿಗೂ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಇನ್ನು ಮತ್ತಷ್ಟು ರೀತಿಯಾದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡುವ ಸಲುವಾಗಿ ಇದೀಗ ರಾಜ್ಯದ ಕೃಷಿಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಸಿ ಎಂ ಸಿದ್ದರಾಮಯ್ಯ (CM Siddaramaiah).

ಹಾಗಾದರೆ ರಾಜ್ಯದ ಕೃಷಿಕರಿಗೆ ನೀಡಿರುವ ಸಿಹಿ ಸುದ್ದಿ ಏನು ಎಂಬುದನ್ನು ತಿಳಿದುಕೊಳ್ಳೋಣ:

ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಮುಂಗಾರು ಹಿಂಗಾರು ಮಳೆ ಬಾರದ ಕಾರಣ ಮತ್ತು ಊಹಿಸದ ಸಮಯದಲ್ಲಿ ಮಳೆ ಬಂದ ಕಾರಣ ರಾಜ್ಯದಲ್ಲಿ ರೈತರು ಬೆಳೆದ್ದಿದ್ದ ಬೆಳೆ ನಾಶವಾಗಿದೆ, ಇನ್ನು ಕೆಲವು ಕಡೆ ಸರಿಯಾದ ಇಳುವರಿ ಮತ್ತು ಸರಿಯಾದ ಫಸಲು ಸಿಕ್ಕಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ ಮತ್ತು ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಕೂಡ ಎದುರಾಗಿದೆ‌. ಅದರಿಂದ ರೈತರಿಗೆ ಸಿಗಬೇಕಾದಂತಹ ಬೆಳೆ ಪರಿಹಾರ (Crop Insurance)ವಾಗಿ ಇದೀಗ ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ (Loan Wavier) ಅಥವಾ ಕೃಷಿ ಸಾಲ ಮನ್ನಾ ಮಾಡಲು ಮುಂದಾಗಿದೆ.

advertisement

Image Source: NewsClick

ಕೃಷಿ ಸಾಲ (Agri Loan) ಮನ್ನಾದ ಹೈಲೈಟ್ಸ್:

ರಾಜ್ಯದ ಕೃಷಿಕರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರವು ರೈತರು ಪಡೆದಿರುವ ಸಾಲವನ್ನು ಅಂದರೆ ಅಲ್ಪಾವಧಿ, ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲದ ಮೇಲೆ ಇರುವಂತಹ ಬಡ್ಡಿಯ ಮೊತ್ತವನ್ನು ಮನ್ನಾ ಮಾಡಲು ಮುಂದಾಗಿದೆ. ಅಂದರೆ ರಾಜ್ಯದ ರೈತರು ಕೃಷಿಗೆ ಸಂಬಂಧಪಟ್ಟಂತ ಸಾಲ (Loan)ದ ಅಸಲನ್ನು ಪಾವತಿಸುವವರಿಗೆ ಬಡ್ಡಿಯನ್ನು ತೆರವುಗೊಳಿಸುವಂತೆ ಸರ್ಕಾರವು ಆದೇಶ ನೀಡಿದೆ. ಮತ್ತು ರೈತರು ಬ್ಯಾಂಕ್ ಮತ್ತು ಕೃಷಿಯೇತರ ಸಹಾಯಕ ಸಂಘ ಸಂಸ್ಥೆಗಳಲ್ಲಿ ಪಡೆದಿರುವ ಸಾಲದ ಅಸಲನ್ನು ಮರುಪಾವತಿ ಮಾಡುವವರಿಗೆ ಬಡ್ಡಿ ಮನ್ನ ಮಾಡುವಂತೆ ಸರ್ಕಾರವು ಸೂಚನೆ ನೀಡಿದೆ.

ಇದರಿಂದ ರಾಜ್ಯದ ರೈತರು ಮತ್ತಷ್ಟು ನಿರಾಳರಾಗಿದ್ದಾರೆ. ಈ ಯೋಜನೆ ಅಡಿಯಲ್ಲಿ ಈಗಾಗಲೇ ಹಲವು ರೈತರು ಅಸಲನ್ನು ಪಾವತಿಸಿ ಬಡ್ಡಿ ಮನ್ನಾ ಸೌಲಭ್ಯವನ್ನು ಪಡೆದಿದ್ದಾರೆ‌. ಈ ಯೋಜನೆಯ ಮೂಲಕ ರೈತರು ಮತ್ತೆ ಕೃಷಿ ಚಟುವಟಿಕೆ ಪ್ರಾರಂಭ ಮಾಡುವಂತೆ ಸಹಕರಿಸಲು ಸರ್ಕಾರ ಮುಂದಾಗಿದೆ. ಈ ಸೌಲಭ್ಯ ಪಡೆಯಲು ಸಾಲದ ಕುರಿತಾದಂತಹ ಮಾಹಿತಿಯನ್ನು ಅಂದರೆ ಬ್ಯಾಂಕ್ ನ ಸಾಲದ ಮೊತ್ತ, ಜಮೀನಿನ ಪಹಣಿ (Pahani), ಆಧಾರ್ ಕಾರ್ಡ್,ಪ್ರಮಾಣಿಕರಿಸಿದ ರೈತ ಸಂಬಂಧಿತ ದಾಖಲೆಗಳು, ರೈತರ ನೋಂದಣಿ ಸಂಖ್ಯೆ (FID) ಇದೆಲ್ಲವೂ ಕಡ್ಡಾಯವಾದಂತ ದಾಖಲೆಗಳಾಗಿದ್ದು, ಇವೆಲ್ಲವನ್ನೂ ಪರಿಶೀಲಿಸಿ ಅಸಲನ್ನು ಪಾವತಿಸುವವರಿಗೆ ಬಡ್ಡಿಯನ್ನು ತೆರವುಗೊಳಿಸುವಂತೆ ಸರ್ಕಾರವು ಆದೇಶ ನೀಡಿದೆ.

advertisement

Leave A Reply

Your email address will not be published.