Karnataka Times
Trending Stories, Viral News, Gossips & Everything in Kannada

FID: ಬರ ಪರಿಹಾರ ಹಣ ಬಿಡುಗಡೆ, ಹಣ ಪಡೆಯಲು ಈ ದಾಖಲೆ ಕಡ್ಡಾಯ!

advertisement

ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಭಾರಿ ಹೆಚ್ಚು ಮಳೆ ಬಾರದೇ ರೈತರ ಕೃಷಿಗೂ ಅಡ್ಡಿಯಾಗಿದೆ. ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿದ್ದು ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ಕೂಡ ಎದುರಾಗಿದೆ. ತೀವ್ರ ಬರಗಾಲ ಆವರಿಸಿದ ಹಿನ್ನೆಲೆ ರೈತರಿಗೆ ಕೃಷಿಯಲ್ಲಿ ಯಾವುದೇ ಲಾಭ ಕಾಣದೇ ನಷ್ಟ ಉಂಟಾಗಿದೆ. ‌ಇದಕ್ಕಾಗಿ ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ಬರ ಪರಿಹಾರ (Drought Relief) ಹಣ ಬಿಡುಗಡೆ ಮಾಡುವ ಬಗ್ಗೆ ಗುಡ್ ನ್ಯೂಸ್ ನೀಡಿದೆ

ಬರ ಪೀಡಿತ ಪ್ರದೇಶ ಘೋಷಣೆ

ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಸರಕಾರ ಈಗಾಗಲೇ ಘೋಷಣೆ ಮಾಡಿದೆ. ಕೇಂದ್ರದ ಅನುದಾನಕ್ಕಾಗಿ ಕಾಯದೇ ರಾಜ್ಯ ಸರಕಾರದಿಂದಲೇ ರೈತರ ಖಾತೆಗೆ ಎರಡು ಸಾವಿರ ರೂಪಾಯಿಯನ್ನು ಜಮೆ ಮಾಡುತ್ತಿದೆ. ವಿವಿಧ ಮೂಲಗಳ ಪ್ರಕಾರ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಸುಮಾರು 1,97,729 ರೈತರಿಗೆ 37 ಕೋಟಿ 59 ಲಕ್ಷ ರೂ.ಗಳ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನುಳಿದ ರೈತರಿಗೆ ಈ ಹಣ ಇನ್ನೂ ಕೂಡ ಜಮೆಯಾಗಿಲ್ಲ‌‌. ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಿದ್ದು ಯಾಕಾಗಿ ಹಣ ಜಮೆ ಯಾಗಿಲ್ಲ ಎಂಬ ಕಾರಣವನ್ನು ನೀಡಿದೆ.

Image Source: Visual Stock

ಈ ಕೆಲಸ ಕಡ್ಡಾಯ ಮಾಡಬೇಕು

ಬರ ಪರಿಹಾರದ (Drought Relief) ಹಣವು ರೈತರ ಖಾತೆಗೆ ಜಮೆಯಾಗಬೇಕಿದ್ರೆ ಅರ್ಹ ರೈತರು ಎಫ್ ಐ ಡಿ ಸಂಖ್ಯೆ (FID Number)ಯನ್ನು ಹೊಂದಿದ್ದರೆ ಮಾತ್ರ ಹಣ ಜಮೆಯಾಗಲಿದೆ. ಹೌದು ಎಲ್ಲಾ ರೈತರು ಜಮೀನುಗಳ ವಿವರಗಳನ್ನು ತಮ್ಮ ಎಫ್‌ಐಡಿನಲ್ಲಿ ಸೇರಿಸಲು ಸರಕಾರ ಸೂಚಿಸಿದೆ.

advertisement

ಎಫ್ ಐಡಿ (FID) ಯಲ್ಲಿ ಈ ಮಾಹಿತಿ ಇರಬೇಕು

ಎಫ್‍ಐಡಿಯಲ್ಲಿ ನಿಮ್ಮ ಜಮೀನಿನ ದಾಖಲೆಗಳು ಇರಬೇಕು. ಇದರಲ್ಲಿ ಜಮೀನಿನ ಸರ್ವೇ ನಂಬರ್ ವಿವರಗಳನ್ನು ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ದಾಖಲಿಸಿದರೆ ಮಾತ್ರ ನಿಮ್ಮ‌ಖಾತೆಗೆ ಹಣ ಜಮೆಯಾಗಲಿದೆ.

Image Source: Krishi Suddi

ಎಫ್‌ಐಡಿ (FID) ಯನ್ನು ಮಾಡಿಸಲು ಈ ದಾಖಲೆಗಳು ಕಡ್ಡಾಯವಾಗಿದೆ.

  • ಆಧಾರ್‌ ಕಾರ್ಡ್‌
  • ಬ್ಯಾಂಕ್‌ ಖಾತೆ
  • ರೇಷನ್ ಕಾರ್ಡ್
  • ಪಹಣಿ ಪ್ರತಿಗಳು
  • ಮೊಬೈಲ್‌ ಸಂಖ್ಯೆ,
  • ಜಾತಿ ಪ್ರಮಾಣ ಪತ್ರ ಇತ್ಯಾದಿ

ಇಲ್ಲಿ ನೋಂದಣಿ ಮಾಡಿ

ರೈತರು ಎಫ್‌ಐಡಿಯನ್ನು ಮಾಡಿಸಿಕೊಂಡಿಲ್ಲ‌ದಿದ್ದರೆ ಕಡ್ಡಾಯವಾಗಿ ಈ ಕೆಲಸ ಮಾಡಿ. ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ ಇಲಾಖೆ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ನೋಂದಣಿ ಮಾಡಬಹುದಾಗಿದೆ.

advertisement

Leave A Reply

Your email address will not be published.