Karnataka Times
Trending Stories, Viral News, Gossips & Everything in Kannada

Election: ಎಲೆಕ್ಷನ್ ಸಮಯದಲ್ಲಿ ಕಾರು ಹಾಗೂ ಬೈಕ್ ನಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು! ಹೊಸ ರೂಲ್ಸ್ ಜಾರಿಗೆ

advertisement

ಲೋಕಸಭೆ ಚುನಾವಣೆ (Lokasabha Election) ಇನ್ನೇನು ಸಮೀಪದಲ್ಲೇ ಇದೆ, ಹಾಗಾಗಿ ಚುನಾವಣೆ ಪೂರ್ವ ಸಿದ್ಧತೆ ಕೂಡ ನಡೆಯುತ್ತಿದೆ. ಚುನಾವಣೆಗೆ ಮುನ್ನ ಕೋಡ್ ಆಫ್ ಎಥಿಕ್ಸ್ (Code Of Ethics) ಅಂದರೆ ನೀತಿ ಸಂಹಿತೆಯನ್ನು ಜಾರಿಗೆ ತರಲಾಗುತ್ತಿದ್ದು ಸಾರ್ವಜನಿಕ ಸಭೆ ಸಮಾರಂಭ ಸೇರಲು, ಪಾರ್ಟಿ ಮಾಡಲು, ಪಕ್ಷದ ಬಗ್ಗೆ ಪರ ವಿರುದ್ಧ ಪ್ರಚಾರ ಮಾಡಲು ಹಾಗೂ ನಗದು ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಿಯಮ ಇದ್ದೇ ಇರಲಿದೆ.

ಚುನಾವಣೆ (Election) ನೀತಿ ಸಂಹಿತೆ:

ಇತ್ತೀಚೆಗಷ್ಟೇ ಸರಕಾರಿ ಬಸ್ ನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಹಾಗೂ ನಗದನ್ನು ಸಾಗಾಟ ಮಾಡಬಾರದು ಒಂದು ವೇಳೆ ಮಾಡಿದರೆ ಕೂಡ ಅಂತಹ ಸಂಗ್ರಹಿತ ಹಣಕ್ಕೆ ಸರಿಯಾದ ಸಾಕ್ಷಿ ಪುರಾವೆ ಇರಬೇಕು ಎಂಬ ನಿಯಮ ಹಾಕಲಾಗಿತ್ತು. ಇದೀಗ ಚುನಾವಣೆ (Election) ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಎಷ್ಟು ಮೊತ್ತ ಕೊಂಡೊಯ್ಯ ಬಹುದು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ.

ಎಷ್ಟು ಮೊತ್ತ ಕಾನೂನಿನಲ್ಲಿ ಮಾನ್ಯ:

ಚುನಾವಣೆ ನೀತಿ ಸಂಹಿತೆ ಇರುವ ಕಾರಣ 50 ಸಾವಿರಕ್ಕಿಂತ ಅಧಿಕ ಮೊತ್ತ ಕೊಂಡೊಯ್ಯಬಾರದು ಒಂದು ವೇಳೆ ಕೊಂಡೊಯ್ದರು ಅದಕ್ಕೆ ಸರಿಯಾದ ದಾಖಲಾತಿ ಮಾಹಿತಿಗಳು ಹೊಂದಿರಬೇಕು. ನೀವು 50,000 ಕ್ಕೆ ಅಧಿಕ ನಗದು ಕೊಂಡೊಯ್ದರೆ ಆಗ ಸ್ಕ್ವಾಡ್ ನವರು ಈ ಮೊತ್ತವನ್ನು ವಶಪಡಿಸಿಕೊಳ್ಳಲಿದ್ದಾರೆ, ಆಗ ನೀವು ಚುನಾವಣೆ (Election) ಗೆ ಹಾಗೂ ಈ ಮೊತ್ತಕ್ಕೆ ಯಾವುದೆ ಸಂಬಂಧ ಇಲ್ಲ ಎಂದು ಸಾಬೀತಾದ ಬಳಿಕವೇ ನಿಮ್ಮ ಹಣ ನಿಮಗೆ ನಿಮಗೆ ವಾಪಾಸ್ಸು ಸಿಗಲಿದೆ.

advertisement

ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು:

 

Image Source: The Financial Express

 

ನೀವು 50,000 ರೂಪಾಯಿ ಯಿಂದ 10 ಲಕ್ಷ ರೂಪಾಯಿ ವರೆಗೆ ನೀವು ಸಾಗಾಟ ಮಾಡುವ ಅಗತ್ಯ ಇದ್ದರೆ ಆಗ ನೀವು ಆದಾಯ ತೆರಿಗೆ ಇಲಾಖೆಗೆ ಪೂರ್ವ ನಿಯೋಜಿತ ಮಾಹಿತಿಯನ್ನು ನೀಡಬೇಕು. ಆದಾಯ ತೆರಿಗೆ ಇಲಾಖೆಗೆ (Income Tax Department) ಈ ಮಾಹಿತಿಯನ್ನು ನೀವು ಉಲ್ಲೇಖಿಸಿದರೆ ಆ ಹಣದ ಮೂಲ ಮಾಹಿತಿ ಸಹ ತಪ್ಪದೇ ನೀಡಲೇ ಬೇಕು. ಹಣ ಎಲ್ಲಿಂದ ಬಂತು ಯಾವುದಕ್ಕಾಗಿ ವಿನಿಯೋಗ ಆಗುತ್ತದೆ ಎಂಬ ಖಚಿತ ಮಾಹಿತಿ ಜೊತೆಗೆ ಬ್ಯಾಂಕ್ ಪಾಸ್ ಬುಕ್ (Bank Pass Book) ನಲ್ಲಿಯೂ ಎಂಟ್ರಿ ಹೊಂದಿದ್ದರೆ ಉತ್ತಮ.

ಜಿಲ್ಲಾಧಿಕಾರಿಗಳಿಗೂ ಸೂಚನೆ:

ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣಿಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ‌. 50,000 ಕ್ಕಿಂತ ಅಧಿಕ ಮೊತ್ತ ಹೊಂದಿದ್ದರೆ ಅದನ್ನು ಸ್ಕ್ವಾಡ್ ನವರು ವಶಪಡಿಸಿಕೊಳ್ಳಬೇಕು. ಚುನಾವಣೆ ಭ್ರಷ್ಟಾಚಾರ ನಡೆಯಬಾರದು ಎಂಬ ಕಾರಣಕ್ಕೆ ಅನೇಕ ನೀತಿ ಸಂಹಿತೆ ಇರುವುದನ್ನು ನಾವು ಕಾಣಬಹುದು.

advertisement

Leave A Reply

Your email address will not be published.