Karnataka Times
Trending Stories, Viral News, Gossips & Everything in Kannada

IPL 2024: ಐಪಿಎಲ್ 2024ರಲ್ಲಿ ಐಸಿಸಿಯ ಈ ನಿಯಮವನ್ನು ತೆಗೆದುಹಾಕಲಾಗಿದೆ! ಯಾವುದು ಗೊತ್ತಾ?

advertisement

ಈ ಬಾರಿ 17ನೆಯ ಐಪಿಎಲ್ ಸೀಸನ್ ನಡೆಯುತ್ತಿದ್ದು ಇದರಲ್ಲಿ ಇರುವಂತಹ ಅನೇಕ ತಂಡಗಳಲ್ಲಿನ ಕ್ಯಾಪ್ಟನ್ ಸ್ಥಾನಕ್ಕೆ ಹೊಸ ಕ್ಯಾಪ್ಟನ್ ಆಯ್ಕೆಯಾಗಿದೆ. ಈ ಬಾರಿ ಐಪಿಎಲ್‌ಗೂ ಮುನ್ನ ಮಂಡಳಿ ಕೆಲವು ಹೊಸ ನಿಯಮಗಳನ್ನು ತಂದಿದೆ. ಈ ಬಾರಿ ಐಪಿಎಲ್ 2024 (IPL 2024)ರ ಮೊದಲು 3 ನಿಯಮಗಳನ್ನು ಬದಲಾಯಿಸಲಾಗಿದೆ ಮತ್ತು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ(ICC) ತಂದ ನಿಯಮಗಳನ್ನು ಐಪಿಎಲ್ (IPL) ಇಂದ ತೆಗೆದು ಹಾಕಿದ್ದಾರೆ. ಇನ್ನು ಅವರು ಬದಲಾಯಿಸಿ ತೆಗೆದುಕೊಂಡು ಬಂದಂತಹ ಹೊಸ ನಿಯಮಗಳು ಯಾವುದು ಎಂದು ತಿಳಿದುಕೊಳ್ಳೋಣ.

IPL 2024 Rules: 

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಹೊಸ ನಿಯಮವನ್ನು ತಂದಿತ್ತು ಆ ನಿಯಮವಾದರು ಯಾವುದು ಎಂದರೆ, ಪ್ರತಿ ಪಂದ್ಯದ ಎರಡನೇ ಓವರ್ ಸಮಯದಲ್ಲಿ ಓವರ್‌ಗಳ ನಡುವೆ 60 ಸೆಕೆಂಡುಗಳಲ್ಲಿ ಪಂದ್ಯ ಪ್ರಾರಂಭವಾಗಬೇಕು. ಇದು ಸಂಭವಿಸದಿದ್ದರೆ ಅದು ನಿಯಮಗಳನ್ನು ಅನುಸರಿಸದಿರುವ ಸಂಕೇತವಾಗಿದೆ ಅಥವಾ ಇದು ಸಂಭವಿಸದಿದ್ದರೆ ನಿಯಮ ಪಾಲಿಸದ ತಂಡಕ್ಕೆ 5 ರನ್‌ಗಳ ದಂಡ ವಿಧಿಸಲಾಗುತ್ತದೆ. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಐಪಿಎಲ್‌ನಿಂದ ಈ ನಿಯಮವನ್ನು ತೆಗೆದುಹಾಕಿದ್ದಾರೆ.

advertisement

Image Source: News18

ಇನ್ನು ಎರಡನೆಯದಾಗಿ ದೇಶೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯಲು ಬಿಸಿಸಿಐ (BCCI) ಬೌಲರ್‌ಗೆ ಅವಕಾಶವನ್ನು ನೀಡಿತ್ತು. ಅದಾದ ನಂತರ ಈಗ BCCI ಐಪಿಎಲ್‌ನಲ್ಲೂ ಸಹ ಈ ನಿಯಮವನ್ನು ಜಾರಿಗೆ ತಂದಿದೆ. ಈಗ ಐಪಿಎಲ್‌ನಲ್ಲಿ ಆಡುವಂತಹ ವೇಗದ ಬೌಲರ್‌ಗಳು ಒಂದೇ ಓವರ್‌ನಲ್ಲಿ 2 ಬೌನ್ಸರ್‌ಗಳನ್ನು ಬೌಲ್ ಮಾಡಬಹುದಾಗಿದೆ. ಇದರಿಂದ ಬೌಲರ್‌ಗಳು ಕೊಂಚ ನಿರಾಳರಾಗಿದ್ದಾರೆ.

Image Source: India Today

ಈ ಬದಲಾವಣೆಗಳ ಜೊತೆಗೆ ಮತ್ತೊಂದು ಬದಲಾವಣೆ ಎಂದರೆ , ಪಂದ್ಯದಲ್ಲಿ ಸ್ಟಂಪಿಂಗ್‌ಗೆ ಮನವಿ ಮಾಡುವಾಗ ಐಸಿಸಿಯು ICC ಕ್ಯಾಚ್ ಔಟ್ ನಿಯಮವನ್ನು ಜಾರಿಗೆ ತಂದಿತ್ತು . ಈಗ ಬಿಸಿಸಿಐ ಆ ನಿಯಮವನ್ನು ತೆಗೆದುಹಾಕಿದೆ. ಆದರೆ ಐಪಿಎಲ್‌ನಲ್ಲಿ ಸ್ಟಂಪಿಂಗ್‌ಗೆ ಮನವಿ ಬಂದರೆ ಥರ್ಡ್ 3rd ಅಂಪೈರ್ ಮೊದಲು ಕ್ಯಾಚ್ ಔಟ್ ಅನ್ನು ಪರಿಶೀಲಿಸುತ್ತಾರೆ. ಇನ್ನು ಕಳೆದ ಸೀಸನ್ ಅಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ರೂಲ್ ಅನ್ನು ಬಿಸಿಸಿಐ ಈ ಸೀಸನ್ ನಲ್ಲಿಯೂ ಸಹ ಅಳವಡಿಸಿದೆ. ಇನ್ನು ಈ ಬದಲಾವಣೆಗಳು ನಂತರವೂ IPL 2024 ರಲ್ಲಿ, ತಂಡವು ಎಂದಿನಂತೆ ಒಂದು ಇನ್ನಿಂಗ್ಸ್‌ನಲ್ಲಿ 2 ವಿಮರ್ಶೆಗಳನ್ನು (Review) ಪಡೆಯುತ್ತದೆ.

advertisement

Leave A Reply

Your email address will not be published.