Karnataka Times
Trending Stories, Viral News, Gossips & Everything in Kannada

BCCI Net Worth: BCCI ನ ಒಟ್ಟು ಆದಾಯ ಬಹಿರಂಗ, ಆಸ್ಟ್ರೇಲಿಯಾಕ್ಕಿಂತ 28 ಪಟ್ಟು ಹೆಚ್ಚು!

advertisement

ಕ್ರಿಕೆಟ್ ಬಹು ಜನರ ಬಹಳ ಪ್ರೀಯವಾದ ಆಟವಾಗಿದ್ದು ಬಹಳಷ್ಟು ಅಭಿಮಾನಿಗಳು ಈ ಆಟಕ್ಕೆ ಇದ್ದಾರೆ. ಒಂದು ಕ್ರಿಕೇಟ್ ತಂಡ ಅಂತ ಬಂದಾಗ ಮುಂದಿನ ಮ್ಯಾಚ್ ನಲ್ಲಿ ಯಾರೆಲ್ಲ ಆಡಬೇಕು,ಯಾರೆಗೆಲ್ಲ ಅವಕಾಶ ಇದೆ ಎಂಬುದನ್ನು ನಿರ್ಧರಿಸುವುದೆ ಬಿಸಿಸಿಐ, ಈ ಮೂಲಕ ಒಂದು ತಂಡ ನಿರ್ಧಾರ ವಾಗುತ್ತದೆ, ಬಿಸಿಸಿಐ (BCCI) ಭಾರತ ಕ್ರಿಕೆಟ್​ಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳುತ್ತದೆ.

ಭಾರತದ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಆಡುವ ಬಗ್ಗೆ ಹೊಸ ನೀತಿ ಜಾರಿಗೊಳಿಸುವುದು, ಅದೇ ರೀತಿ ಏಷ್ಯನ್ ಗೇಮ್ಸ್​ನಲ್ಲಿ ಟೀಂ ಇಂಡಿಯಾ (Team India) ಆಡುವ ಬಗ್ಗೆ ಮಹತ್ವದ ನಿರ್ಧಾರ , ಮುಂದಿನ ಕ್ರೀಡೆಗೆ ಆಟಗಾರರ ತಯಾರಿ ಇತ್ಯಾದಿ ಕಾರ್ಯ ಚಟುವಟಿಕೆ ಮಾಡುತ್ತದೆ.‌ ಆದರೆ ವಿಶ್ವ ಕ್ರಿಕೆಟ್​ನಲ್ಲಿ ಶ್ರೀಮಂತ ಕ್ರಿಕೆಟ್ ಮಂಡಳಿ ಯಾವುದು?ಭಾರತ ತಂಡದ ಬಳಿ ಎಷ್ಟು ಆದಾಯ ಇದೆ ಎಂಬ ಕುತೂಹಲ ಇದ್ದರೆ ಈ‌ ಲೇಖನ ಓದಿ.

ಆದಾಯ ಎಷ್ಟು?

 

 

ಈಗ ತಿಳಿದಿರುವ ಮಾಹಿತಿ ಪ್ರಕಾರ BCCI ನಿವ್ವಳ ಆದಾಯ (BCCI Net Worth) ಸುಮಾರು 2.25 ಶತಕೋಟಿ US Dollar ಎಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ. ಅಂದರೆ ಸುಮಾರು 18,700 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.

advertisement

ಈ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆ BCCI ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಶ್ರೀಮಂತಿಕೆಯಲ್ಲಿ IPL ನದ್ದು ಬಹುದೊಡ್ಡ ಪಾತ್ರವಿದೆ ಎನ್ನಬಹುದು.

Australia ತಂಡದ ಆದಾಯ ಎಷ್ಟು?

BCCI ಯ ಆದಾಯವನ್ನು ಹೆಚ್ಚಿಸುವಲ್ಲಿ IPL ನ ಮಹತ್ವದ ಪಾತ್ರ ಇದ್ದು, ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ (Australia) ತಂಡವು ಶ್ರೀಮಂತ ಕ್ರಿಕೆಟ್​ ಮಂಡಳಿಯಲ್ಲಿ ಎರಡನೇ ಸ್ಥಾನ ಪಡೆದು ಕೊಂಡಿದ್ದು ಆಸ್ಟ್ರೇಲಿಯಾ ತಂಡವನ್ನೂ ಇಂಡಿಯಾ ಮೀರಿಸಿದೆ, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಆದಾಯ 658 ಕೋಟಿ ರೂ. ಆಗಿದ್ದು ಆಸೀಸ್‌ಗಿಂತ ಇಂಡಿಯಾದ ಆದಾಯ 28 ಪಟ್ಟು ಜಾಸ್ತಿ ಇದೆ.

BCCI ನ ಮೂಲ ಯಾವುದು?

ಬಿಸಿಸಿಐ ಗೆ ಇತ್ತೀಚಿನ ದಿನದಲ್ಲಿ ಹಣದ ಮೂಲಗಳು ಕೂಡ ಹೆಚ್ಚಾಗಿವೆ. ಹೌದು ವಿವಿಧ ಜಾಹೀರಾತು, ಕಿಟ್ ಪ್ರಾಯೋಜಕತ್ವ ಆಂದೋಲನ, ಅಂತಾರಾಷ್ಟ್ರೀಯ ಮೂಲಗಳು ಸೇರಿದಂತೆ ಹಲವು ಮೂಲಗಳಿಂದ ಹಣ ಹರಿದು ಬರುತ್ತಿದ್ದು ಆರ್ಥಿಕ ಅಭಿವೃದ್ಧಿ ಉತ್ತೇಜನ ಗೊಳ್ಳುತ್ತಿದೆ. ಇತ್ತೀಚೆಗೆ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿಕೊಂಡಿದ್ದು ಇದರಿಂದಲೂ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ ಎನ್ನಲಾಗಿದೆ.

advertisement

Leave A Reply

Your email address will not be published.