Karnataka Times
Trending Stories, Viral News, Gossips & Everything in Kannada

HF Deluxe Electric Bike: ಓಲಾ, ಆಕ್ಟಿವಾಗಿಂತ ಕಡಿಮೆ ಬೆಲೆಗೆ ಸಿಗಲಿದೆ ಹೀರೋ ಎಲೆಕ್ಟ್ರಿಕ್ ಬೈಕ್, 240Km ರೇಂಜ್!

advertisement

ಇಂದು‌ ಯುವಕರಿಗೆ ಬೈಕ್ ಮೇಲೆ ಕ್ರೇಜ್ ಹೆಚ್ಚು, ಅದರಲ್ಲು ಹೊಸ ಮಾಡೆಲ್ ಬೈಕ್ ಮಾರುಕಟ್ಟೆ ಗೆ ಬಂತು ಎಂದಾಗ ಅದನ್ನು ಖರೀದಿ ಮಾಡಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಇಂದು ಹೆಚ್ಚು ಚಾಲ್ತಿಯಲ್ಲಿರುವುದು ಎಲೆಕ್ಟ್ರಿಕ್ ವಾಹನಗಳು. ಇತ್ತೀಚಿನ ದಿನದಲ್ಲಿ‌ ಇದರ ಬೇಡಿಕೆ ಕೂಡ ಹೆಚ್ಚಾಗಿದೆ. ಈಗಾಗಲೇ ಪೆಟ್ರೋಲ್ (Petrol) ಡಿಸೇಲ್ (Diesel) ಬೆಲೆ  ಹೆಚ್ಚಾಗಿದ್ದು ಈ ಎಲೆಕ್ಟ್ರಿಕ್ ವಾಹನದತ್ತ ಜನ ಮುಖ ಮಾಡಿದ್ದಾರೆ.

ಗಣನೀಯ ಏರಿಕೆ:

ಮುಂದಿನ‌ ದಿನದಲ್ಲಿ‌ ಇ.ವಿ. ವಾಹನಗಳು ಮತ್ತಷ್ಟು ಏರಿಕೆಯಾಗಲಿದ್ದು , ಸುಗಮ, ತ್ವರಿತ, ಸುರಕ್ಷಿತ ಮತ್ತು ಮಾಲಿನ್ಯ ರಹಿತ ಸಂಚಾರವನ್ನು ಒದಗಿಸುವ ವಾಹನಗಳಾಗಿವೆ. ಈಗಾಗಲೇ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಅಧಿಕ ವಾಹನಗಳ ಬಳಕೆಯಿಂದ ವಾಯು ಮಾಲಿನ್ಯವು ಅಧಿಕವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ (Central Govt) ಮತ್ತು ರಾಜ್ಯ ಸರ್ಕಾರವು (State Govt) ಎಲೆಕ್ಟ್ರಿಕ್ ವಾಹನಗಳ ಗರಿಷ್ಠ ಬಳಕೆಯನ್ನು ಉತ್ತೇಜಿಸುವ ಕಾರ್ಯವನ್ನು‌ಸಹ ಮಾಡಿದೆ.ಇದೀಗ ಹೀರೋಸ್ (Hero) ಕಂಪನಿಯ‌ ಹೊಸ ಎಲೆಕ್ಟ್ರಿಕ್ ಬೈಕ್ (Electric Bike) ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು ಬೈಕ್ ಪ್ರೀಯರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದೆ.

ನೂತನ Electric Bike:

 

 

advertisement

ಪ್ರತಿಷ್ಟಿತ ಕಂಪನಿಯಾದ ಹೀರೋ ಇತ್ತೀಚೆಗೆ HF Deluxe Electric Bike ಎಂಬ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು ಇದರ ವೈಶಿಷ್ಟ್ಯ ಕೂಡ ವಿಭಿನ್ನ ವಾಗಿದೆ. ರೈಡ್ ಮಾಡಲು ಉತ್ತಮ ಅನುಭವ ನೀಡುವ ಈ ಎಲೆಕ್ಟ್ರಿಕ್ ಬೈಕ್ ಕೈಗೆಟುಕುವ ಬೆಲೆಯಲ್ಲಿ ಲಭ್ಯ.

ಹೇಗಿದೆ ಪೀಚರ್ಸ್:

  • ಇದು ನೋಡಲು ಕೂಡ ಬಹಳ ಆಕರ್ಷಿತ ವಾಗಿದ್ದು ಒಂದೇ ಚಾರ್ಜ್‌ನಲ್ಲಿ 240 ಕಿಲೋಮೀಟರ್‌ಗಳ ವ್ಯಾಪ್ತಿಯ ವರೆಗೆ ಚಲಿಸುತ್ತದೆ.
  • HF ಡಿಲಕ್ಸ್ ನೂತನ ವೈಶಿಷ್ಟ್ಯ ಹೊಂದಿದ್ದು ಇತರ ಬೈಕ್ ಗಳಿಗೆ ಪ್ರತಿಸ್ಪರ್ಧಿ ಯಾಗಿದೆ. ಇದರ ಮೊದಲನೇ ಮಾದರಿಯು 4 Kwh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ.
  • ಕೇವಲ ನಾಲ್ಕೈದು ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ಅವಕಾಶ ‌ಇದೆ.
  • ಡಿಜಿಟಲ್ ಸ್ಪೀಡೋಮೀಟರ್ ಮತ್ತು ಒನ್-ಟಚ್ , ಡಿಜಿಟಲ್ ಸೂಚಕ ಬ್ಯಾಕ್‌ಲೈಟ್‌ಗಳನ್ನು ಹೊಂದಿದೆ.
  • ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಎರಡನೇ ಮಾದರಿಯು 6 Kwh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 180 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ
  • ಮೂರನೇ ಮಾದರಿಯು 8 Kwh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದ್ದು 240 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

ಬೆಲೆ ಎಷ್ಟು?

HF Deluxe Electric Bike ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು ಮಧ್ಯಮ ವರ್ಗದ ಜನರು ಕೂಡ ಇದನ್ನು ಖರೀದಿ ಮಾಡಬಹುದಾಗಿದೆ. ಈ ಬೈಕ್‌ನ ಬೆಲೆಯು ಸುಮಾರು 75,000 ರೂ.ಗಳಾಗಿದ್ದು ಹೆಚ್ಚು ಕಾಲ ಬಾಳಿಕೆ ಬರುವಂತಹ ಗುಣಮಟ್ಟದ ವೈಶಿಷ್ಟ್ಯ ವನ್ನು ಹೊಂದಿದೆ, ಈ ಹೊಸ ವರ್ಷಕ್ಕೆ ಬೈಕ್ ಖರೀದಿ ಮಾಡಬೇಕು ಅನ್ನೋರಿಗೆ ಸೂಕ್ತ ಆಯ್ಕೆ ಯಾಗಿದೆ.

advertisement

Leave A Reply

Your email address will not be published.