Karnataka Times
Trending Stories, Viral News, Gossips & Everything in Kannada

Realme C67 5G: 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಬೇಕಾದರೆ ಇದು ಉತ್ತಮ ಆಯ್ಕೆ, ಬೆಂಕಿ ಲುಕ್ ಹಾಗೂ ಫೀಚರ್ಸ್.

advertisement

ಸ್ಮಾರ್ಟ್ ಫೋನ್ ಪ್ರಿಯರಿಗೆ ಇಷ್ಟವಾಗುವಂತಹ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಸೌಂಡ್ ಮಾಡುತ್ತಿವೆ. ಇದೀಗ ಮತ್ತೊಂದು Realme C67 5G ಫೋನ್ ರಿಲೀಸ್ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಹಾಗಾದ್ರೆ ಈ ಹೊಸ ರಿಯಲ್ ಮಿ C67 5G ಸ್ಮಾರ್ಟ್ ಫೋನ್ ಬೆಲೆ ಹಾಗೂ ವಿಶೇಷತೆಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

Realme C67 5G ಬಯಾವಾಗ ಬಿಡುಗಡೆ?

ರಿಯಲ್ ಮಿ C67 5G (Realme C67 5G) ಸ್ಮಾರ್ಟ್ ಫೋನ್ ಅನ್ನು ಇದೇ ಡಿಸೆಂಬರ್ 14 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರ ಬೆಲೆಯೂ 15 ಸಾವಿರಕ್ಕಿಂತ ಕಡಿಮೆ ಇರಲಿದ್ದು ಅಗ್ಗದ ಬೆಲೆಯಲ್ಲಿ ಗ್ರಾಹಕರ ಕೈ ಸೇರಲಿದೆ. ಈಗಾಗಲೇ ರಿಯಲ್ ಮಿ ಕಂಪನಿಯು ತನ್ನ ಅಧಿಕೃತ ಖಾತೆ X ನಲ್ಲಿ ಟೀಸರ್ ಪೋಸ್ಟರ್ ಅನ್ನು ಹಾಗೂ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದೆ.

Realme C67 5G Features:

 

advertisement

 

  • Realme ಇನ್ನೂ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಬಗ್ಗೆ ಯಾವುದೇ ಮಾಹಿತಿಯ ತಿಳಿಸಿಲ್ಲವಾದರೂ ಕೂಡ ಕೆಲವು ವಿವರಗಳು ರಿವೀಲ್ ಆಗಿದೆ. Realme Narzo 60x ಗೆ ಹೋಲುವ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ರೌಂಡ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ.
  • ಈ ಫೋನಿನ ಮೇಲಿನ ಎಡಭಾಗದಲ್ಲಿ ಇರಿಸಲಾಗಿದೆ. ಟೀಸರ್ ನಲ್ಲಿ Dual Camera ಸೆಟಪ್ ಅನ್ನು ಕಾಣಬಹುದು. ಗ್ರೇಡಿಯಂಟ್ ವಿನ್ಯಾಸದೊಂದಿಗೆ ಹಸಿರು ರೂಪಾಂತರವನ್ನು ಹೊಂದಿರಲಿದೆ ಎನ್ನಲಾಗಿದೆ
  • ಇನ್ನು ಈ ರಿಯಲ್ ಮಿ C67 ಸ್ಮಾರ್ಟ್ ಫೋನ್ 6.72-ಇಂಚಿನ FHD+ IPS ಡಿಸ್ಪ್ಲೇ 680 nits ಮತ್ತು 120Hz ರಿಫ್ರೆಶ್ ದರದೊಂದಿಗೆ ಲಭ್ಯವಿರಲಿದೆ. ಇದು 200g ಗಿಂತ ಕಡಿಮೆ ತೂಕವನ್ನು ಹೊಂದಿರಲಿದ್ದು, 6nm ಡೈಮೆನ್ಸಿಟಿ 6100+ SoC ಇರಲಿದೆ.
  • ಹಾಗೂ ಆಂಡ್ರಾಯ್ಡ್ 13 ಅನ್ನು ಆಧರಿಸಿದ Realme UI4.0 ರನ್ ಆಗುತ್ತದೆ ಎನ್ನುವ ಮಾಹಿತಿಯು ಲಭ್ಯವಾಗಿದೆ. ಈ ಸ್ಮಾರ್ಟ್ ಫೋನ್ 5,000 mAh ಬ್ಯಾಟರಿಯನ್ನು ಹೊಂದಿದ್ದು, ಇದು 33W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
  • Realme C67 ನಲ್ಲಿ ಡ್ಯುಯಲ್ ಕ್ಯಾಮೆರಾ ಸಂವೇದಕವಿದ್ದು 50 MP ಮುಖ್ಯ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ, ಸೆಲ್ಫಿಗಾಗಿ 8 MP ಕ್ಯಾಮೆರಾವನ್ನು ಹೊಂದಿರಲಿದೆ.

Realme C67 5G Price:

 

 

ಮಾರುಕಟ್ಟೆಗೆ ಲಗ್ಗೆ ಇಡುವ ಈ ಸ್ಮಾರ್ಟ್‌ಫೋನ್ ಬೆಲೆ 11,000 ಮತ್ತು 15,000 ರೂ. ಗಳ ನಡುವೆ ಇರಬಹುದು ಎಂದು ಹೇಳಲಾಗಿದೆ. Realme C67 5G ನ ವಿನ್ಯಾಸವು ರಿಯಲ್ ಮಿ ನಾರ್ಜೊ 60X ರೀತಿ ಇರುವ ಕಾರಣದಿಂದಾಗಿ ಇದರ ಬೆಲೆಯು ಅಷ್ಟೇ ಇರಬಹುದು ಎಂದು ಅಂದಾಜಿಸಲಾಗಿದ್ದು, ಹೀಗಾಗಿ ಅಗ್ಗದ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಖರೀದಿದಾರರಿಗೆ ದೊರೆಯಲಿದೆ ಎನ್ನಬಹುದು.

advertisement

Leave A Reply

Your email address will not be published.