Karnataka Times
Trending Stories, Viral News, Gossips & Everything in Kannada

Toyota SUV: ಟೊಯೊಟಾದ ಈ ಎಸ್ ಯುವಿಗೆ ಭಾರಿ ಡಿಮ್ಯಾಂಡ್, 5-6 ತಿಂಗಳ ವೆಟಿಂಗ್ ಇದ್ರೂ ಬುಕ್ ಮಾಡ್ತಿದ್ದಾರೆ ಜನ.

advertisement

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ವಾಹನ ತಯಾರಕ ಕಂಪೆನಿಗಳು ಆಕರ್ಷಕ ವಿನ್ಯಾಸ ಹಾಗೂವಿಶೇಷ ತೆಗಳನ್ನು ಹೊಂದಿರುವ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟೊಯೊಟಾ (Toyota) ದ ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder) ಎಸ್‌ಯುವಿಯನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಹಾಗಾದ್ರೆ ಅರ್ಬನ್ ಕ್ರೂಸರ್ ಹೈರಿಡರ್ ವಿಶೇಷತೆಗಳು ಹಾಗೂ ಬೆಲೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಈ ಎಸ್ ಯುವಿ ಡೆಲಿವರಿಯಾಗಲು ತಗಲುವ ಅವಧಿ ಎಷ್ಟು?

ಟೊಯೊಟಾ ಇಂಡಿಯಾ (Toyota India) ದ ಎಸ್‌ಯುವಿಯಲ್ಲಿ ಒಂದಾಗಿರುವ ಅರ್ಬನ್ ಕ್ರೂಸರ್ ಹೈರಿಡರ್ ಹೈಬ್ರಿಡ್ ರೂಪಾಂತರಗಳನ್ನು ವೆಬ್ಸೈಟ್ ನಲ್ಲಿ ಬುಕ್ ಮಾಡಬಹುದಾಗಿದೆ. ಆದರೆ ಒಮ್ಮೆ ಬುಕ್ ಮಾಡಿದರೆ ಗ್ರಾಹಕರ ಕೈ ಸೇರಲು 5 – 6 ತಿಂಗಳ ಕಾಯಬೇಕಾಗುತ್ತದೆ. ಅದಲ್ಲದೇ, ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ (Toyota Urban Cruiser Hyryder) ನಾನ್ ಹೈಬ್ರಿಡ್ (ನಿಯೋ ಡ್ರೈವ್) ವೇರಿಯೆಂಟ್ ಅನ್ನು ಗ್ರಾಹಕರು ಈ ದಿನ ಆರ್ಡರ್ ಮಾಡಿದರೆ 10 – 11 ತಿಂಗಳವೆರೆಗೆ ಕಾಯಬೇಕು. ಅದಲ್ಲದೇ ಸಿಎನ್‌ಜಿ (CNG) ರೂಪಾಂತರಗಳನ್ನು ಬುಕ್ ಮಾಡಿದರೆ ಸ್ವಲ್ಪ ತಡವಾಗಿಯೇ ಗ್ರಾಹಕರ ಕೈ ಸೇರುವುದರಿಂದ ಸರಿಸುಮಾರು 14 – 15 ತಿಂಗಳು ಕಾಲ ಗ್ರಾಹಕರು ಕಾಯಬೇಕು.

Toyota Urban Cruiser Hyryder Engine:

 

 

advertisement

ಟೊಯೊಟಾದ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿಯ ವಿಶೇಷತೆಗಳ ಬಗ್ಗೆ ಹೇಳುವುದಾದರೆ, 1.5 – ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5 – ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳನ್ನು ಕಾಣಬಹುದು. 5 – ಸ್ವೀಡ್ ಮ್ಯಾನುವಲ್, 6 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಗಳು ಲಭ್ಯವಿದೆ. ಗ್ರಾಹಕರಿಗೆ ಕಂಫರ್ಟ್ ಫೀಲ್ ನೀಡಲು ಐದು ಆಸನ ಆಯ್ಕೆಯನ್ನು ಹೊಂದಿದೆ. ಈ ಕಾರಿನಲ್ಲಿ 2WD (ಟೂ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಕಾರು 19.39 – 27.97 ಕೆಎಂಪಿಲ್ ಮೈಲೇಜ್ ಹೊಂದಿದ್ದು ಗ್ರಾಹಕರಿಗೆ ಇಷ್ಟವಾಗುವಂತೆ ಇದೆ.

Toyota Urban Cruiser Hyryder Specs:

 

 

  • ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿಯಲ್ಲಿ 9 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌.
  • ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ, ಆಂಬಿಯೆಂಟ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌, ಹೆಡ್ಸ್ – ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
  • ಅದಲ್ಲದೇ ಇದರಲ್ಲಿ 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಆಲ್-ವೀಲ್ ಡಿಸ್ಕ್ ಬ್ರೇಕ್‌ ಮತ್ತು 360 – ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Toyota Urban Cruiser Hyryder Price:

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ (Toyota Urban Cruiser Hyryder) ಎಸ್‌ಯುವಿಯೂ ಇ, ಎಸ್, ಸಿ, ವಿ ಸೇರಿದಂತೆ ವಿವಿಧ ರೂಪಾಂತರಗಳಲ್ಲಿ ಕೆಫೆ ವೈಟ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಮಿಡ್ನೈಟ್ ಬ್ಲ್ಯಾಕ್, 7 ಮೊನೊಟೊನ್, 4 ಡುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಈ ಎಸ್ ಯುವಿಯ 10.86 ಲಕ್ಷದಿಂದ 20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

advertisement

Leave A Reply

Your email address will not be published.