Karnataka Times
Trending Stories, Viral News, Gossips & Everything in Kannada

Aadhaar Enrolment: ಆಧಾರ್ ನೋಂದಣಿಗೆ ಬೆರಳಚ್ಚು ಸಮಸ್ಯೆ ಇರುವವರಿಗೆ ಬಿಗ್ ಅಪ್ಡೇಟ್, ಹೊಸ ವ್ಯವಸ್ಥೆ ಜಾರಿಗೆ.

advertisement

ಆಧಾರ್ ಕಾರ್ಡ್ (Aadhaar Card) ಇಂದು ಭಾರತದಲ್ಲಿ ವೈಯಕ್ತಿಕ ಪುರಾವೆಗಳ ಸಾಲಿನಲ್ಲಿ ಬಹಳ ಮುಖ್ಯ ಸ್ಥಾನ ಪಡೆಯುತ್ತಿದೆ. ಇದು ಭಾರತದಲ್ಲಿ ಜಾರಿಗೆ ಬಂದಾಗ ದಿನಗಟ್ಟಲೆ ಕ್ಯೂನಲ್ಲಿ ನಿಂತು ಕಷ್ಟ ಪಟ್ಟು ಆಧಾರ್ ಕಾರ್ಡ್ ಮಾಡಿಸಿದ್ದವರು ಇದ್ದಾರೆ. ಆದರೆ ಈಗ ಪ್ರಕ್ರಿಯೆ ಬಹಳ ಮಟ್ಟಿಗೆ ಸುಧಾರಣೆ ಕಂಡಿದೆ ಎಂದು ಹೇಳಬಹುದು. ಈಗ ಅಂಚೆ ಇಲಾಖೆ ಸೇರಿದಂತೆ ವಿವಿಧ ಸೈಬರ್ ಸೆಂಟರ್ (Cyber Center) ನಲ್ಲಿ ಆಧಾರ್ ನೋಂದಣಿ (Aadhaar Enrolment) ಮತ್ತು ತಿದ್ದುಪಡಿ ಮಾಡಲಾಗುತ್ತದೆ.

ಕೇಂದ್ರದಿಂದ ಸ್ಪಷ್ಟನೆ:

ಎಷ್ಟೋ ಸಮಯ ಆಧಾರ್ (Aadhaar) ಪಡೆಯಲು ಅಪ್ಡೇಟ್ ಮಾಡಲು ವ್ಯಕ್ತಿಯ ಬೆರಳಿನ ಸಮಸ್ಯೆ ಇದ್ದರೆ ಅಥವಾ ಬೆರಳಚ್ಚು ಸ್ಕ್ಯಾನ್ (Fingerprint Scan) ಆಗದೇ ಇದ್ದರೆ ಆಗ ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್ ನೋಂದಣಿ (Aadhaar Enrolment) ಮಾಡಿಸಬಹುದು ಎಂಬ ಬಗ್ಗೆ ಇತ್ತೀಚೆಗೆ ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹಾಗಾಗಿ ಅಂಗವೈಕಲ್ಯ ಇದ್ದವರಿಗೆ ಮತ್ತು ಬೆರಳಿನ ಸಮಸ್ಯೆ ಇದ್ದವರಿಗೆ ಈ ಕ್ರಮದಿಂದ ಸಾಕಷ್ಟು ಅನುಕೂಲವಾಗಲಿದೆ.

ಯಾಕೆ ಈ ನಿರ್ಣಯ:

advertisement

ಕೇರಳದ ಮಹಿಳೆಯೊಬ್ಬರು ಆಧಾರ್ ನೋಂದಣಿ (Aadhaar Enrolment) ಮಾಡಿಸಲು ತೆರಳಿದ್ದಾರೆ ಆದರೆ ಆಕೆಗೆ ಬೆರಳು ಇಲ್ಲದ ಕಾರಣ ನೋಂದಣಿ ಮಾಡಲು ಸಮಸ್ಯೆ ಆಗಿದೆ. ಹಾಗಾಗಿ ಎಲೆಕ್ಟ್ರಾನಿಕ್ (Electronic) ಮತ್ತು ಐಟಿ (IT) ಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಈ ಸಮಸ್ಯೆಗೆ ಪರಿಹಾರಾರ್ಥವಾಗಿ ಈ ವಿಧಾನ ಅನುಸರಿಸಲು ಸೂಚಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

 

 

ಈ ಬಗ್ಗೆ ಮಾಹಿತಿ ನೀಡಿದ್ದ ಅವರು ಬೆರಳಚ್ಚು ಲಭ್ಯವಿಲ್ಲದ ಸಂದರ್ಭದಲ್ಲಿ ಕಣ್ಣಿನ ಸ್ಕ್ಯಾನ್ ಮೂಲಕ ಆಧಾರ್ ನೋಂದಣಿ ಮಾಡಿಸಬಹುದು. ಅದೇ ರೀತಿ ಕಣ್ಣಿನ ಸಮಸ್ಯೆ ಹೊಂದಿದ್ದವರಿಗೆ ಬೆರಳಚ್ಚು ಪಡೆಯುವ ಮೂಲಕ ನೋಂದಣಿ ಮಾಡಿಸಬಹುದು ಎಂದು ಕೇಂದ್ರ ಸರಕಾರದ ಮೂಲಕ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ತಂಡವು ಅದೇ ದಿನ ಕೇರಳದ ಮಹೀಳೆ ಮನೆಗೆ ಭೇಟಿ ನೀಡಿ ಆಕೆಯ ಆಧಾರ್ ಸಂಖ್ಯೆ (Aadhaar Number) ಪಡೆದು ನೋಂದಣಿ ಮಾಡಿಸಿದ್ದಾರೆ.

ಉಪಯೋಗ ವಿಧಾನ:

ಈ ವಿಧಾನದಿಂದ ಬೆರಳಿನ ಮಸುಕಿ ಇದ್ದವರಿಗೆ ಹಾಗೂ ಸಮಸ್ಯೆ ಇದ್ದವರಿಗೆ, ಅಂಗವಿಕಲರಿಗೆ ಸಾಕಷ್ಟು ನೆರವಾಗಲಿದೆ. ಬಯೋಮೆಟ್ರಿಕ್ ಸಮಸ್ಯೆ (Biometric Problem) ಇದ್ದವರಿಗೆ ಕಣ್ಣಿನ ಸ್ಕ್ಯಾನ್ (Eye Scan) ಮಾಡಿ ಆಧಾರ್ ಕಾರ್ಡ್ ಅನ್ನು ವಿತರಣೆ ಮಾಡಲಾಗುವುದು. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಎಲ್ಲ ಆಧಾರ್ ಸೇವೆಗಳಿಗೆ ಅಧಿಕೃತ ಮಾಹಿತಿ ನೀಡಲಾಗಿದ್ದು ಇನ್ನು ಮುಂದೆ ಇಂತಹ ವ್ಯವಸ್ಥೆ ಚಾಲ್ತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗರ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ.

advertisement

Leave A Reply

Your email address will not be published.