Karnataka Times
Trending Stories, Viral News, Gossips & Everything in Kannada

Kawasaki Bike: ಈ ಹೊಸ ಬೈಕ್ ಫೀಚರ್ಸ್ ಕಂಡ್ರೆ ಕೊಳ್ಳೊ ಮನಸ್ಸಾಗೊದು ಗ್ಯಾರೆಂಟಿ, ಬೆಂಕಿ ಲುಕ್!

advertisement

ಇತ್ತೀಚೆಗೆ ಸಾರ್ವಜನಿಕ ವಾಹನಕ್ಕಿಂತ ವೈಯಕ್ತಿಕ ವಾಹನಗಳಿಗೆ ಅಧಿಕ ಪ್ರಾಮುಖ್ಯತೆ ಪಡೆಯುತ್ತಿದೆ. ಅದರಲ್ಲೂ ಬೈಕ್ ಕ್ರೇಜ್ ಇರುವವರಂತೂ ಒಂದು ಬೈಕ್ ಇದ್ದರೂ ಕಲೆಕ್ಷನ್ ಮಾಡಿ ಎರಡು ಮೂರು ಬೈಕ್ ಕೊಳ್ಳುತ್ತಾರೆ. ಒಂದೊಳ್ಳೆ ಬೈಕ್ ಖರೀದಿ ಮಾಡಬೇಕು ಎಂದು ಕಾಯುತ್ತಿದ್ದವರು ಮತ್ತು ನ್ಯೂಮಾಡೆಲ್ ಬೈಕ್ ಅನ್ನು ಹುಡುಕುತ್ತಿದ್ದವರಿಗೆ ಇದೀಗ ಶುಭ ಸುದ್ದಿಯೊಂದು ಸಿಕ್ಕಿದೆ. ಕವಾಸಕಿ (Kawasaki) ಕಂಪೆನಿಯ ಬೈಕ್ ಒಂದು ಸದ್ಯ ಬಹಳ ಸದ್ದು ಮಾಡುತ್ತಿದ್ದು ಈ ಬೈಕ್ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ನಾವಿಂದು ನಿಮಗೆ ನೀಡಲಿದ್ದೇವೆ.

ಈ ಬೈಕ್‌ ನ ಹೆಸರೇನು?

 

 

ಭಾರತ ಮಾರುಕಟ್ಟೆಯಲ್ಲಿ ಪ್ರಚಲಿತ ಕಂಪೆನಿಯ ಬೈಕ್ ನಲ್ಲಿ ಕವಾಸಕಿ ಬೈಕ್ (Kawasaki Bike) ಕೂಡ ಸೇರಿದೆ. ಕವಾಸಕಿ ಕಂಪನಿಯು W175 ಸ್ಟ್ರೀಟ್ ಬೈಕ್ ಅನ್ನು ಪರಿಚಯಿಸಿದ್ದು ಇದು ರೆಟ್ರೊ ಸ್ಟೈಲ್ (Retro Style) ಮಾಡೆಲ್ ಆಗಿದೆ. ಕವಾಸಕಿ ಕಂಪೆನಿಯ ಇತರ ಬೈಕ್ ಗಿಂತ ಇದರಲ್ಲಿ ಹೆಚ್ಚಿನ ಆಯ್ಕೆ ಬಣ್ಣ ಇತರ ಫೀಚರ್ಸ್ ಗ್ರಾಹಕರ ಮನ ಸೆಳೆಯಲಿದೆ. ಹಾಗಾಗಿ ಈ ಬೈಕ್ ನ ಬೇಡಿಕೆ ಕೂಡ ಅಧಿಕವಾಗಿ ಇರಲಿದೆ ಎಂಬುದರಲ್ಲಿ ಅನುಮಾನ ಇಲ್ಲ.

ಬೆಲೆ ಎಷ್ಟು?

advertisement

ಕವಾಸಕಿ ಕಂಪೆನಿಯ Kawasaki W175  Street ನ ಬೆಲೆ 1.35ಲಕ್ಷ ರೂಪಾಯಿ ಯಾಗಿದೆ.ಇದನ್ನು ಮೊದಲಬಾರಿಗೆ ಗೋವಾದ ವಗಾಟರ್ ನ ಇಂಡಿಯ ಬೈಕ್ ವೀಕ್ 2023ರ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಮಾರುಕಟ್ಟೆಗೆ ಡಿಸೆಂಬರ್ ನಲ್ಲೇ ಎಲ್ಲ ಬೈಕ್ ಶೋ ರೂಂ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಬೈಕ್ ಕೊಳ್ಳುವವರಿಗೆ ದಿ ಬೆಸ್ಟ್ ಆಯ್ಕೆಯಲ್ಲಿ ಈ ಬೈಕ್ ಕೂಡ ಒಂದು ಆಯ್ಕೆಯಾಗಿ ಸಿಗಲಿದೆ.

ವೈಶಿಷ್ಟ್ಯ ಹೇಗಿದೆ?

 

 

ಈ ಬೈಕ್ ಹೇಗಿರಬಹುದು. ಫೀಚರ್ಸ್ ಯಾವ ರೀತಿ ಇರಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದದ್ದೇ ಆಗಿದ್ದು ಈ ಬಗ್ಗೆ ವಿವರಣೆ ಇಲ್ಲಿದೆ.

  • 12 ಲೀಟರ್ ಸಾಮರ್ಥ್ಯದ Fuel Tank ಅನ್ನು ಹೊಂದಿದೆ.
  • ಗ್ರಾಫಿಕ್ಸ್ ವಿನ್ಯಾಸದೊಂದಿಗೆ ಹಲವಾರು ವಿಭಿನ್ನವಾದ ಕಲರ್ ಚಾಯ್ಸ್ ಇಲ್ಲಿ ಸಿಗಲಿದೆ. ಅದರಲ್ಲೂ ಸ್ಟ್ರೀಟ್ ಕ್ಯಾಂಡಿ ಎಮರಾಲ್ಡ್ ಗ್ರೀನ್ (Street Candy Emerald Green) ಮತ್ತು ಮೆಟಾಲಿನ್ ಮೂಂಡಸ್ಟ್ ಗ್ರೇ (Metallic Moondust Grey) ನಂತಹ ಹೊಸ ಆಯ್ಕೆ ಸಿಗಲಿದೆ. ಬೈಕ್ ನ ಇಂಜಿನ್ ಟ್ಯಾಂಕ್ ಮೇಲೆ ಅತ್ಯಾಕರ್ಷಕ ಗ್ರಾಫಿಕ್ಸ್ ಇಂಜಿನ್ ಇದೆ.
  • 177CC ಇಂಜಿನ್ ಸಾಮರ್ಥ್ಯ ಹೊಂದಿದೆ.
  • 5 Speed ಗೇರ್ ಬಾಕ್ಸ್ ಹೊಂದಿದೆ.
  • Tube Less ಟೈಯರ್ ಅನ್ನು ಹೊಂದಿದೆ.
  • ಗ್ರೌಂಡ್ ಕ್ಲಿಯರೆನ್ಸ್ ಸೀಟ್ 152mm, ನ ಎತ್ತರ 786.5mm.
  • ಸೆಮಿ ಡಿಜಿಟಲ್ ಇನ್ಸ್ಟ್ರು ಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
  • 17 ಇಂಚಿನ ಅಲಾಯ್ ಚಕ್ರಗಳು ಮಿಶ್ರ ಲೋಹದಿಂದ ಲುಕ್ ಜೊತೆ ನಿಮ್ಮ ಸುಖಕರ ಓಡಾಟಕ್ಕೆ ಸಹಕಾರಿ ಆಗಲಿದೆ.
  • ಏರ್ ಕೋಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ನಿಂದ ಬೈಕ್ ಸಾಮರ್ಥ್ಯ ಹೆಚ್ಚಲಿದೆ.
  • ಮಲ್ಟಿ ರಿಫ್ಲೆಕ್ಟರ್ ಹ್ಯಾಂಡ್ ಲ್ಯಾಂಪ್ ಹೊಂದಿದೆ.
  • ಬೈಕ್ ನ ಮುಂಭಾಗದಲ್ಲಿ 245mm ಡಿಸ್ಟ್ ಬ್ರೇಕ್ ಹೊಂದಿದೆ.

advertisement

Leave A Reply

Your email address will not be published.