Karnataka Times
Trending Stories, Viral News, Gossips & Everything in Kannada

Toll Tax: ದೇಶದಲ್ಲಿ ಈ 5 ವಾಹನಗಳಿಗೆ ಮಾತ್ರ ಯಾವುದೇ ರೀತಿಯ ಟೋಲ್ ಟ್ಯಾಕ್ಸ್ ಇರಲ್ಲ!

advertisement

ಪ್ರವಾಸ ಅಥವಾ ನಿತ್ಯ ಕೆಲಸ ಕಾರ್ಯಕ್ಕೊ ಪ್ರತೀ ನಿತ್ಯ ನೀವು ಪ್ರಯಾಣಿಸುವಾಗ ರಾಷ್ಟ್ರೀಯ ಹೆದ್ದಾರಿ ದಾಟಿದರೆ ಟೋಲ್ ನಿಯಮದ ಪ್ರಕಾರ ಟೋಲ್ ನೀಡಲೇ ಬೇಕು. ಕೆಲವರು ಇದಕ್ಕೆ ಪಾಸ್ ಮಾಡಿಸಿರುತ್ತಾರೆ ಇನ್ನು ಕೆಲವರು ಮೊದಲೇ ಆನ್ಲೈನ್ ಪೇಮೆಂಟ್ ಮಾಡಿಟ್ಟುಕೊಂಡು ಇರುತ್ತಾರೆ. ಆದರೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿಯನ್ನು ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಭಾರತದಲ್ಲಿ ಈ 5ವಾಹನಗಳಿಗೆ ಟೋಲ್ ಪಾಂಯ್ಟ್ ನಲ್ಲಿ ಶುಲ್ಕ ವಿಧಿಸಲಾಗದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೋಲ್ ಸಂಗ್ರಹಕ್ಕೆ ಕಾರಣ ಏನು?

ಟೋಲ್ ಸಂಗ್ರಹಕ್ಕೆ ಮುಖ್ಯ ಕಾರಣ ರಸ್ತೆ ನಿರ್ಮಾಣ ಮಾಡುವಾಗ ತಗಲಿದ ವೆಚ್ಚವನ್ನು ಭರಿಸುವುದು. ಅದಕ್ಕಾಗಿ ಕೆಲ ವಾಹನ ಹೊರತುಪಡಿಸಿ ಕಾರು, ಟ್ರಕ್, ವ್ಯಾನ್, ಬಸ್ ವಾಹನ ಹೊಂದಿರುವವರು ಟೋಲ್ ಫ್ಲಾಜಾ (Toll Plaza) ದಿಂದ ತೆರಳುವಾಗ ಕಡ್ಡಾಯವಾಗಿ ಟೋಲ್ ಕಟ್ಟಲೇ ಬೇಕೆಂಬ ನಿಯಮ ಇದೆ. ಅದೇ ರೀತಿ ಇಂದಿಗೂ ಕೂಡ ಹಣ ಕಟ್ಟುತ್ತಲೇ ಬರಲಾಗುತ್ತಿದೆ. ಇದು ಸರಕಾರಕ್ಕೆ ಆದಾಯ ತಂದು ಕೊಡುವ ಆರ್ಥಿಕ ಮೂಲವಾಗಿದ್ದು ಸರಕಾರ ಕೂಡ ಆಗಾಗ ತನ್ನ ನಿಯಮ ಬದಲಿಸುತ್ತಲಿರುವುದು.

ಇದು ಹಳೆ ಕಾಲದಿಂದಲೂ ಪ್ರಚಲಿತದಲ್ಲಿದ್ದು ಮೊದಲು ನಗದು ರೂಪದಲ್ಲಿ ಹಣ ಸಂಗ್ರಹ ಮಾಡಲಾಗುತ್ತಿತ್ತು ಆದರೆ ಕಾಲ ಕ್ರಮೇಣ ನಗದುರೂಪದಿಂದ ಡಿಜಿಟಲ್ ಪಾವತಿ ಮೂಲಕ ಪಾವತಿಸಲಾಗುವುದು. ಆದರೆ ಈಗ ವಾಹನ ದಟ್ಟಣೆ ಗಮನದಲ್ಲಿರಿಸಿಕೊಂಡು ಫಾಸ್ಟ್ಯಾಗ್ (Fastag) ಪರಿಚಯಿಸಲಾಗಿದೆ. ಹೀಗಾಗಿ ಈಗ ವ್ಯವಸ್ಥೆ ಮತ್ತಷ್ಟು ಸರಳೀಕರಿಸಲಾಗಿದೆ. ಅದೇ ರೀತಿ ಭಾರತದಲ್ಲಿ 5 ವಾಹನಗಳಿಗೆ ಟೋಲ್ ವಿನಾಯಿತಿ ಇದೆ.

advertisement

ಯಾವುದು ಈ ವಾಹನಗಳು

  • ಮಿಲಿಟರಿವಾಹನಗಳು- ಅಂದರೆ ಸೇನಾ ಸಿಬಂದಿ, ಯೋಧರು ಸಂಚಾರ ಮಾಡುವಾಗ ಟೋಲ್ ಅನ್ನು ವಿಧಿಸಲಾಗುವುದಿಲ್ಲ.
  • ಸರಕಾರಿ ಅಧಿಕಾರಿಗಳ ಅಥವಾ ಸೆಲೆಬ್ರಿಟಿ ವಾಹನಗಳು.
  • ವಿಐಪಿ ವಾಹನಗಳು- ಅಂದರೆ ರಾಜಕಾರಣಿಗಳು ಮತ್ತು ಸರಕಾರದಿಂದ ನೇಮಕವಾದ ಪ್ರತಿನಿಧಿಗಳ ವಾಹನಕ್ಕೆ ಟೋಲ್ ವಿಧಿಸಲಾಗುವುದಿಲ್ಲ. ಇದಕ್ಕಾಗಿ VIP ಪಾಸ್ ಕೂಡ ನೀಡಲಾಗುವುದು.
  • ತುರ್ತುವಾಹನ (ಆ್ಯಂಬುಲೆನ್ಸ್, ಫಯರ್ ಇಂಜಿನ್) ಇಂತಹ ವಾಹನಗಳು ತುರ್ತುಪರಿಸ್ಥಿತಿಗೆ ತೆರಳುವ ಕಾರಣ ಅವುಗಳಿಗೆ ಕೂಡ ಟೋಲ್ ವಿಧಿಸಲಾಗುವುದಿಲ್ಲ.
  • ದ್ವಿಚಕ್ರವಾಹನಗಳಿಗೆ ಯಾವುದೇ ಟೋಲ್ ವಿಧಿಸಲಾಗುವುದಿಲ್ಲ. ಹಾಗಾಗಿ ಟೋಲ್ ಕಟ್ಟದೆನೇ ದೇಶಾದ್ಯಂತ ಸಂಚಾರ ಮಾಡಬಹುದು.

ಈ ನಿಯಮ ಕೂಡ ಇದೆ

ಟೋಲ್ ಕಟ್ಟುವ ಜಾಗದಲ್ಲಿ 100 ಮೀಟರ್ ಗಿಂತ ಅಧಿಕ ದೂರದಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತರೆ ಟೋಲ್ ಕಟ್ಟದೆಯೇ ಹೋಗಬಹುದು. ಯಾಕೆಂದರೆ ಕ್ಲಪ್ತ ಶೀಘ್ರ ಸೇವೆ ಟೋಲ್ ಪ್ಲಾಜಾ ದವರು ನೀಡಬೇಕು ಇಲ್ಲವಾದರೆ ಟೋಲ್ ತೆರಿಗೆಯಿಂದ ವಿನಾಯಿತಿ ನೀಡ್ತೇವೆ ಎಂಬಂತೆ ನಿಯಮ ಇದೆ. ಅಲ್ಲಿ 10 ಸೆಕೆಂಡ್ ಗಿಂತ ಹೆಚ್ಚು ಸಮಯ ವಾಹನವನ್ನು ಕಾಯುಸುವಂತಿಲ್ಲ ಹಾಗಾಗಿ ಇಂತಹ ಸಂದರ್ಭಗಳಲ್ಲಿ ವಾಹನದಾರರಿಗೆ ಟೋಲ್ ತೆರಿಗೆ ವಿನಾಯಿತಿ ಇದೆ.

advertisement

Leave A Reply

Your email address will not be published.