Karnataka Times
Trending Stories, Viral News, Gossips & Everything in Kannada

PM Modi: ಮದುವೆ ಮಾಡಿಕೊಳ್ಳುವವರಿಗೆ ಹೊಸದಾದ ಯೋಜನೆ ಜಾರಿಗೆ ತಂದ ಪ್ರಧಾನಿ ಮೋದಿ.

advertisement

ಮೇಕ್ ಇನ್ ಇಂಡಿಯಾ (Make In India) ದಂತೆಯೇ ವೆಡ್ ಇನ್ ಇಂಡಿಯಾ (Wed in India) ದ ಮೂಲಕ ಭಾರತದ ಹೂಡಿಕೆ ಬೇರೆ ದೇಶಗಳಿಗೆ ಹೋಗುವ ಬದಲು ಭಾರತದಲ್ಲೇ ಅದನ್ನು ಉಳಿಸಿಕೊಂಡು ಭಾರತದ ಡೆಸ್ಟಿನೇಷನ್ ವೆಡ್ಡಿಂಗ್ (Destination Wedding) ಜಾಗಗಳು ಬೆಳೆಯಲಿ ಎಂದು ಪ್ರಧಾನಿ ಮೋದಿ (PM Modi) ಆಶಿಸಿದ್ದಾರೆ.

ಇತ್ತೀಚಿಗೆ ನಡೆದ ಮೋದಿಯವರ ಮನ್ ಕಿ ಬಾತ್ (Man ki Baat) ನಲ್ಲಿ ಇದೇ ವಿಷಯ ಪ್ರಸ್ತಾಪಿಸಿದ್ದ ಮೋದಿ, ಡೆಹರಾಡೂನ್ (Dehradun) ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಮತ್ತೆ ಇದೇ ಮಾತನ್ನು ಹೇಳುವುದರ ಮೂಲಕ ಅವರು ಈ ವಿಷಯವಾಗಿ ಬಹಳ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

5000 ಭಾರತದ ಮದುವೆಗಳು ವಿದೇಶಗಳಲ್ಲಿ:

ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ 5000 ಮದುವೆಗಳು ಭಾರತ ಬಿಟ್ಟು ಹೊರದೇಶದಲ್ಲಿ ನಡೆಯುತ್ತಿವೆ. ಇದರಲ್ಲಿ ಗಂಡು ಹೆಣ್ಣು ಇಬ್ಬರೂ ಭಾರತದವರೇ ಆಗಿರುವ ಮದುವೆಗಳೇ ಜಾಸ್ತಿ. ಅಂದರೆ ಒಂದು ಮದುವೆಗೆ ತಾಗುವ ಎಲ್ಲಾ ಖರ್ಚು ಭಾರತದ್ದೆ ಆಗಿದ್ದು ಬೇರೆ ದೇಶಗಳಲ್ಲಿ ಹೂಡಿಕೆಯಾಗುತ್ತಿದೆ.

 

 

advertisement

ಮೋದಿಯವರ ಅಭಿಪ್ರಾಯದಂತೆ ಮದುವೆ ಸ್ವರ್ಗದಲ್ಲೇ ನಿರ್ಧಾರ ಆಗಿರುತ್ತದೆ. ಭಾರತದ ಉತ್ತರಾಖಂಡ (Uttarakhand) ದ ಸ್ವರ್ಗದಂತಹ ಭೂಮಿಯನ್ನು ಬಿಟ್ಟು ಬೇರೆ ದೇಶಗಳಲ್ಲಿ ಏನಕ್ಕೆ ಮದುವೆ ಮಾಡಿಕೊಂಡು ಬರಬೇಕು. ಉತ್ತರಾಖಂಡವನ್ನು ದೇವ ಭೂಮಿ ಎಂದೇ ಕರೆಯುತ್ತಾರೆ ಇಂಥ ಪವಿತ್ರ ಜಾಗದಲ್ಲಿ ಮದುವೆ ನಡೆದರೆ ಅದು ಇನ್ನೂ ಸುಂದರವಾಗಿರುತ್ತದೆ.

ಉತ್ತರಾಖಂಡ ಮುಂದಿನ Destination Wedding:

ಉತ್ತರಖಂಡದಲ್ಲಿ ಡೆಸ್ಟಿನೇಷನ್ ಮ್ಯಾರೇಜ್ (Destination Marriage) ಗಳು ಈಗ ಆರಂಭವಾದರೆ ಭಾರತದ ಯುವಕ ಯುವತಿಯರೇ ವಿದೇಶಗಳಿಗೆ ಹೋಗಿ ಮದುವೆಯಾಗುವ ಬದಲು ಉತ್ತರಾಖಂಡವನ್ನು ಆರಿಸಿಕೊಂಡರೆ ಆದಷ್ಟು ಬೇಗ ಉತ್ತರಾಖಂಡ ಡೆಸ್ಟಿನೇಷನ್ ಮದುವೆಗಳಲ್ಲಿ ಅಗ್ರಸ್ಥಾನಕ್ಕೆ ಏರುವುದರಲ್ಲಿ ಸಂದೇಹವೇ ಇಲ್ಲ. ಉತ್ತರಾಖಂಡದಲ್ಲಿ ಹಲವಾರು ಜಾಗಗಳು ಬಹಳ ಆಕರ್ಷಕವಾಗಿದ್ದು ಪ್ರಕೃತಿಯ ಮಡಿಲಲ್ಲಿ ಮದುವೆಗಳು ನಡೆಯಲು ಆರಂಭವಾದರೆ ಕೇವಲ ಭಾರತ ಅಷ್ಟೇ ಅಲ್ಲದೆ ಇತರ ದೇಶಗಳಿಂದಲೂ ಜನರು ಇಲ್ಲಿ ಬಂದು ಮದುವೆಗೆ ಯೋಚಿಸುತ್ತಾರೆ. ಹೀಗೆ ಆದಾಗ ಉತ್ತರಾಖಂಡ ಅಂತರಾಷ್ಟ್ರೀಯ ಡೆಸ್ಟಿನೇಷನ್ ಮ್ಯಾರೇಜ್ ತಾಣ ಆಗುವುದರಲ್ಲಿ ಸಂದೇಹವೇ ಇಲ್ಲ.

Destination Wedding – ಒಂದು ಸಾವಿರ ಕೋಟಿ ಬಿಸಿನೆಸ್

ಈಗ ಹೊರದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ (Destination Wedding) ನಡೆಯುತ್ತಿರುವುದರಿಂದ ಭಾರತದ ಎಷ್ಟು ಹೂಡಿಕೆ ಹೊರದೇಶಕೆ ಹೋಗುತ್ತಿದೆ ಎನ್ನುವ ನಿಖರ ಮಾಹಿತಿ ಅಥವಾ ಲೆಕ್ಕ ಇಲ್ಲದೆ ಇದ್ದರೂ ಒಂದು ಅಂದಾಜಿನ ಪ್ರಕಾರ 5,000 ಡೆಸ್ಟಿನೇಷನ್ ಮ್ಯಾರೇಜ್ ಗಳು ಪ್ರತಿ ವರ್ಷ ಹೊರದೇಶದಲ್ಲಿ ನಡೆದರೆ 75,000 ಕೋಟಿ ಯಿಂದ ರೂ.1,00,000 ಕೋಟಿಯ ತನಕದ ಹೂಡಿಕೆ ಭಾರತ ಬಿಟ್ಟು ಹೊರದೇಶಗಳಿಗೆ ಸಿಗುತ್ತಿದೆ, ಹೀಗೆ ಭಾರತದ ಉದ್ಯೋಗಪತಿಗಳು ಮತ್ತು ಆಗರ್ಭ ಶ್ರೀಮಂತರು ಡೆಸ್ಟಿನೇಷನ್ ಮದುವೆಗೆ ಭಾರತದ ಜಾಗಗಳನ್ನೇ ಆಯ್ಕೆ ಮಾಡಿಕೊಂಡಾಗ ಡೆಸ್ಟಿನೇಷನ್ ಮ್ಯಾರೇಜ್ ನ ತಾಣಗಳು ಹೆಚ್ಚಾಗಲಿದ್ದು ಅಲ್ಲಿಯ ಮೂಲಭೂತ ಸೌಕರ್ಯಗಳನ್ನು ಕೂಡ ಅಭಿವೃದ್ಧಿಪಡಿಸಬಹುದಾಗಿದೆ.

advertisement

Leave A Reply

Your email address will not be published.