Karnataka Times
Trending Stories, Viral News, Gossips & Everything in Kannada

Challan: ಸಾರಿಗೆ ನಿಯಮ ಪಾಲಿಸದೆ ಚಲನ್ ಕಟ್ಟದಿದ್ದವರ ವಿರುದ್ಧ ಹೊಸ ಕ್ರಮ ಜಾರಿ!

advertisement

ಕಾರು ಇಂದು ಸಾಮಾನ್ಯ ವಾಹನಗಳ ಸಾಲಿನಲ್ಲಿ ಸೇರಿದೆ ಹಾಗಾಗಿ ಒಂದೊಂದು ಮನೆಯಲ್ಲಿಯೂ ಎರಡು ಮೂರು ಕಾರು ಬರುವ ಕಾಲಘಟ್ಟದಲ್ಲಿ ನಾವಿಂದು ಇದ್ದೇವೆ. ಅದೇ ರೀತಿ ಕಾರಿನ ಸಂಖ್ಯೆ ಬಳಕೆ ಅಧಿಕವಾಗುತ್ತಿದ್ದಂತೆ ವಾಹನ ದಟ್ಟಣೆ ಸಹ ನಿರ್ಮಾಣ ಆಗುತ್ತಿರುತ್ತದೆ. ಹಾಗಾಗಿ ನಿಯಮ ಪಾಲನೆ ಸಹ ಕಡ್ಡಾಯ ಮಾಡಲಾಗಿದ್ದು ನಿಯಮ ಉಲ್ಲಂಘನೆ ಮಾಡಿದರೆ ದಂಡ, ಶಿಕ್ಷೆ ವಿಧಿಸಲಾಗುವುದು.

ನೀವು ಕೂಡ ಕಾರು ಚಾಲನೆ ಮಾಡುವವರಾಗಿದ್ದರೆ ಅಥವಾ ಯಾವುದೇ ವಾಹನ ಚಾಲಕರಾಗಿದ್ದರೆ ನಾವಿಂದು ತಿಳಿಸಲಿರುವ ಈ ಒಂದು ಸುದ್ದಿ ನಿಮಗೆ ಸಾಕಷ್ಟು ಉಪಯುಕ್ತ ಆಗಲಿದೆ. ವಾಹನ ಓಡಾಟಕ್ಕೆ ಕೆಲ ನಿಯಮ ಇದ್ದು ಅದು ಉಲ್ಲಂಘನೆ ಆದರೆ ಆಗ ದಂಡವಿಧಿಸಲಾಗುವುದು ಅದಕ್ಕಾಗಿ ಚಲನ್ (Challan) ಅನ್ನು ಸಹ ನೀಡಲಾಗುತ್ತದೆ. ಅದನ್ನು ಸರಿಯಾದ ಸಮಯಕ್ಕೆ ನೀವು ಪಾವತಿ ಮಾಡದಿದ್ದರೆ ಮೂರು ತಿಂಗಳ ನಂತರ ನಿಮ್ಮ ವಾಹನವನ್ನು ಪೋರ್ಟಲ್ ನಲ್ಲಿ ವ್ಯವಹಾರ (ಓಡಾಟ) ಮಾಡಬಾರದ ವರ್ಗಕ್ಕೆ ಸೇರಿಸಲಾಗುತ್ತದೆ.

ಸಮಸ್ಯೆ ಆಗಲಿದೆ:

 

 

advertisement

ನೀವು ಚಲನ್ (Challan) ಅನ್ನು ಪಾವತಿ ಮಾಡದಿದ್ದರೆ ನಿಮಗೆ ಸಾಕಷ್ಟು ಸಮಸ್ಯೆ ಆಗಲಿದೆ. ಅಂದರೆ ನಿಮ್ಮ ವಾಹನದ ಪೋರ್ಟಲ್ (Vehicle Portal) ಸಂಬಂಧಿಸಿದ ಎಲ್ಲ ತರನಾದ ಸಾರಿಗೆ ಇಲಾಖೆ ಸೇವೆ (Transport Department Service) ರದ್ದಾಗಲಿದೆ. ವಾಹನದ ಫಿಟ್ನೆಸ್ ತಪಾಸಣೆ, ಮಾಲಿನ್ಯ ತಪಾಸಣೆ, ವಾಹನ ವರ್ಗಾವಣೆ (Vehicle Transfer) ಮತ್ತು ವಿಳಾಸ ಬದಲಾವಣೆ ಇತ್ಯಾದಿಗಳನ್ನು ನೀವು ಮಾಡಬೇಕೆಂದು ಬಯಸಿದರೆ ಕಡ್ಡಾಯವಾಗಿ ಚಲನ್ ಅನ್ನು ಕಟ್ಟಲೇಬೇಕಿದೆ.

ಕಾರಣ ಏನು?

ಚಲನ್ ಕಟ್ಟದೇ ಇದ್ದವರ ವಿರುದ್ಧ ಇಂತಹ ಒಂದು ಕ್ರಮ ಕೈಗೊಳ್ಳಲು ಸಹ ಮುಖ್ಯ ಕಾರಣ ಇದೆ. ಈಗಾಗಲೇ ಚಲನ್ ಬಾಕಿ ಇಟ್ಟವರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು ಬಾಕಿ ಮೊತ್ತ ಜನ ಕಟ್ಟಲೇ ಬೇಕು ಎಂಬುದನ್ನು ಅವರಿಗೆ ಮನದಟ್ಟು ಮಾಡುವುದೆ ಇದರ ಉದ್ದೇಶವಾಗಿದೆ. ಈ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಧ್ಯಮದ ಮುಂದೆ ಮಾಹಿತಿ ನೀಡಿದ್ದು, ರಸ್ತೆ ನಿಯಮ (Road Rules) ಎಲ್ಲರೂ ಪಾಲಿಸಲೇ ಬೇಕು, ಸಮಯಕ್ಕೆ ಸರಿಯಾಗಿ ಚಲನ್ ಕಟ್ಟುವುದು ಅವರ ಕರ್ತವ್ಯ ಅದನ್ನು ವಾಹನ ಚಾಲಕರು ನಿಭಾಯಿಸದಿದ್ದರೆ ಇಂತಹ ಸಮಸ್ಯೆ ಮೂರು ತಿಂಗಳಲ್ಲೇ ಎದುರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕ್ರಮ ಜಾರಿ:

ಈಗಾಗಲೇ ಈ ಒಂದು ಕ್ರಮದ ಅನುಸಾರ ಆರು ಸಾವಿರಕ್ಕೂ ಅಧಿಕವಾಹನ ಚಾಲಕರ ವಿರುದ್ಧ ಕ್ರಮ ಕೈಗೊಂಡು ಅವರ ವಾಹನವನ್ನು ವ್ಯವಹಾರ ಮಾಡಬಾರದ ವರ್ಗಕ್ಕೆ ಸೇರಿಸಲಾಗಿದೆ‌. ಇವರೆಲ್ಲ ಹಳೆ ಬಾಕಿ ಚಲನ್ (Old Outstanding Challan) ಮೊತ್ತ ಪಾವತಿಸಿದ ಬಳಿಕವೇ ಸೇವೆ ಅವರಿಗೆ ಸಿಗಲಿದೆ. ಸಂಚಾರಿ ಪೊಲೀಸರು ಚಲನ್ ಪಾವತಿ ಮಾಡದವರ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದು ನೀವು ಕೂಡ ಚಲನ್ ಮೊತ್ತ ಬಾಕಿ ಉಳಿಸಿದ್ದರೆ ಶೀಘ್ರವೇ ಪಾವತಿಸಿ ಸಮಸ್ಯೆ ಆಹ್ವಾನ ನೀಡದಿರಿ.

advertisement

Leave A Reply

Your email address will not be published.