Karnataka Times
Trending Stories, Viral News, Gossips & Everything in Kannada

Aadhar Card: ವೋಟರ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್, ಕೇಂದ್ರ ಸರ್ಕಾರದ ಮಹತ್ವದ ಸೂಚನೆ.

advertisement

ಇಂದು ಆಧಾರ್ ಕಾರ್ಡ್ (Aadhar Card) ಅನ್ನೋದು ಬಹು ಮುಖ್ಯವಾದ ದಾಖಲೆಯಾಗಿದ್ದು ಸರಕಾರದ ಯಾವುದೇ ಸೌಲಭ್ಯ ಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನೋದು ಬಹಳ ಮುಖ್ಯ. ಇಂದು ಆಧಾರ್ ಕಾರ್ಡ್ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಸಹ ಮುಖ್ಯವಾಗಿದ್ದು ಇದನ್ನು ರೇಷನ್ ಕಾರ್ಡ್ (Ration card), ಪ್ಯಾನ್ ಕಾರ್ಡ್ (Pan Card), ಬ್ಯಾಂಕ್ ಖಾತೆ (Bank Account), ಮೊಬೈಲ್ ಸಂಖ್ಯೆ ‌ಇತ್ಯಾದಿಗಳಿಗೆ ಲಿಂಕ್ ಮಾಡುವುದು ಸಹ ಕಡ್ಡಾಯ ಆಗಿದೆ. ಆದರೆ ಇದೀಗ ಚರ್ಚೆ ಯಾಗ್ತಾ ಇರುವ ಸುದ್ದಿ‌ ಎಂದ್ರೆ ಮತದಾರರ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ವಿಚಾರ. ಇದೀಗ ಈ ಬಗ್ಗೆ ಕೇಂದ್ರ ಸರಕಾರವು ಮಹತ್ವದ ಮಾಹಿತಿ ಯೊಂದು ನೀಡಿದೆ.

ಇನ್ನು ಪ್ರಾರಂಭ ವಾಗಿಲ್ಲ

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಇನ್ನೂ ಪ್ರಾರಂಭವಾಗಿಲ್ಲ ಎಂದು ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೌದು ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯ ಜೋಡಣೆ ಕಾರ್ಯ ಇನ್ನೂ ಶುರುವಾಗಿಲ್ಲ ಎಂದು ಈ ವಿಚಾರದ ಕುರಿತು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್ ಮೇಘವಾಲ್‌ (Arjun Ram Meghwal) ಅವರು ಸ್ಪಷ್ಟಪಡಿಸಿದ್ದಾರೆ.

ಉಪಯೋಗ ಏನು?

advertisement

ಆಧಾರ್‌ ಮತ್ತು ಮತದಾರರ ಚೀಟಿ ಜೋಡಣೆಯಾದರೆ ಹಲವು ರೀತಿಯ ಉಪಯೋಗ ಇದ್ದು ಮುಖ್ಯವಾಗಿ ನಕಲಿ ಆಧಾರ್ ಕಾರ್ಡ್ , ನಕಲಿ ಮತದಾನದ ಮೋಸದ ಜಾಲ ಮಾಡಿದ್ದರೆ ಇದರಿಂದ ತಡೆಗಟ್ಟಬಹುದಾಗಿದೆ. ಮತಗಟ್ಟೆ ಅಧಿಕಾರಿಗಳು ಮತದಾರರ ಆಧಾರ್‌ ಗುರುತಿನ ಚೀಟಿ ಪಡೆದು ದಾಖಲು ಮಾಡಿ ಲಿಂಕ್ ಮಾಡಿಕೊಳ್ಳುತ್ತಾರೆ.

ವಿಸ್ತರಣೆ ಮಾಡಲಾಗಿದೆ

ಮತದಾರರ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವುದನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ಭಾರತದ ಚುನಾವಣಾ ಆಯೋಗವು ಮಾಹಿತಿ ನೀಡಿದ್ದು, ಫಾರ್ಮ್ 6 ಬಿ ಮೂಲಕ ಸಲ್ಲಿಸುವ ಅವಧಿಯನ್ನು ಕೂಡ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.

ಲಿಂಕ್ ಮಾಡುವುದು ಕಡ್ಡಾಯ

ಇಂದು ಆಧಾರ್ ಕಾರ್ಡ್ ಎಲ್ಲ ದಾಖಲೆಗಳಿಗೂ ಮುಖ್ಯವಾಗಿದ್ದು ಪ್ಯಾನ್ ಕಾರ್ಡ್ ಜೊತೆ ‌ಲಿಂಕ್ ಮಾಡಲು ಕೊನೆಯ ದಿನಾಂಕ ‌ವನ್ನು ನಿಗದಿ ಮಾಡಲಾಗಿತ್ತು‌.ಈಗಾಗಲೇ ಲಿಂಕ್ ಮಾಡದ ಜನರಿಗೆ ದಂಡ ಕೂಡ ವಿಧಿಸಲಾಗಿದೆ. ಆದೇ ರೀತಿ ಬ್ಯಾಂಕ್ ಖಾತೆ ಆಧಾರ್ ಜೊತೆ ಆಧಾರ್ ಲಿಂಕ್ ಮಾಡದವರ ಖಾತೆಯು ನಿಷ್ಕ್ರಿಯ ಗೊಂಡಿದೆ.

advertisement

Leave A Reply

Your email address will not be published.