Karnataka Times
Trending Stories, Viral News, Gossips & Everything in Kannada

Virat Kohli: T20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗಿಲ್ಲ ಸ್ಥಾನ, ಬದಲಿಗೆ ಈ ಆಟಗಾರನ ಎಂಟ್ರಿ

advertisement

ಇಂದು ಕ್ರಿಕೇಟ್ ಪ್ರೀಯರು ಹೆಚ್ಚು ಮಂದಿ ಇದ್ದಾರೆ. ಭಾರತೀಯರ ನೆಚ್ಚಿನ‌ ಆಟ ಕ್ರಿಕೇಟ್ ಎಂದೇ ಹೇಳಬಹುದು. ಮೊನ್ನೆಯಷ್ಟೆ ವಿಶ್ವಕಪ್ ಮ್ಯಾಚ್ ಸೊತರೂ ಭಾರತ ದ ಆಟಗಾರರ ಶ್ರಮಕ್ಕೆ ಇಡೀ ದೇಶವೇ ಬೆಂಬಲ ಸೂಚಿಸಿದೆ. ಮುಂದೆ ಯಾದರೂ ಭಾರತ ಗೆಲ್ಲುತ್ತೆ ಎಂಬ ಭರವಸೆಯೊಂದಿಗೆ ಕ್ರಿಕೇಟ್ ಪ್ರೀಯರು ಇದ್ದಾರೆ. ಅದರಲ್ಲೂ ಆಟಗಾರರು ಎಂದಾಗ ಪ್ರತಿಯೊಬ್ಬರಿಗೂ ತಮ್ಮಿಷ್ಟದ ಪ್ಲೇಯರ್ ಇದ್ದೆ ಇರುತ್ತಾರೆ. ಪ್ಲೇಯರ್ಸ್ ನಲ್ಲಿ‌ ವಿರಾಟ್ ‌ಕೊಯ್ಲಿಗೆ ಅಭಿಮಾನಿಗಳು ಹೆಚ್ಚು. ಆದರೆ ಇದೀಗ ಹರಿದಾಡ್ತಾ ಇರುವ ಸುದ್ದಿ ಎಂದರೆ T20 ವಿಶ್ವಕಪ್‌ಗೆ ಕೊಹ್ಲಿ (Virat Kohli) ಗೆ‌ ಇಲ್ಲ ಅವಕಾಶ ಎಂಬುದು, ಹಾಗಿದ್ರೆ ಈ ಬಗ್ಗೆ ಮಾಹಿತಿ ತಿಳಿಯಬೇಕಾದ್ರೆ ಈ‌ ಲೇಖನ ಓದಿ.

ಟಿ20 ವರ್ಲ್ಡ್‌​ಕಪ್

ವಿಶ್ವಕಪ್​ ಈಗಾಗಲೇ ಮುಗಿದಿದೆ. ಮುಂದಿನ‌ ಹಂತದ ಆಟಕ್ಕಾಗಿ ಇಂಡಿಯಾದ ಆಟಗಾರರು ಈಗಾಗಲೇ ಸಿದ್ಧತೆ ಯನ್ನು ಮಾಡಿಕೊಂಡಿದ್ದಾರೆ. ಈಗ ಟೀಂ ಇಂಡಿಯಾದ ನೆಕ್ಸ್ಟ್​​ ಟಾರ್ಗೆಟ್ ಟಿ20 ವರ್ಲ್ಡ್‌​ಕಪ್. ಆದರೆ ಈ ಮೆಗಾ ಟೂರ್ನಿಯಲ್ಲಿ ಯಾರೆಲ್ಲ ಆಟಗಾರರು ಇದ್ದಾರೆ? ಯಾರಿಲ್ಲ ಎಂಬ ಕುತೂಹಲ ಇರಬಹುದು. ಆದರೆ ಈ ಆಟದಲ್ಲಿ ವಿರಾಟ್ ಕೊಹ್ಲಿ ಆಡಲ್ಲ ಎನ್ನಲಾಗಿದೆ.

ಯಾಕೆ ಕೊಯ್ಲಿ ಇಲ್ಲ?

advertisement

ಒಂದೆಡೆ BCCI ವಿರಾಟ್ ಕೊಹ್ಲಿಯನ್ನು T20 ತಂಡದಿಂದ ಹೊರಗಿಡಲು ನೋಡ್ತಿದೆ ಅನ್ನೋ ಮಾಹಿತಿ ಕೇಳಿಬರುತ್ತಿದ್ದು, ಇನ್ನೊಂದೆಡೆ ಕೊಹ್ಲಿಗೆ ಟಿ20 ಆಡೋ ಆಸಕ್ತಿ‌ ಇಲ್ಲ ಎಂಬ ಮಾತುಗಳು ಕೇಳಿಬರ್ತಾ ಇದೆ. ಇನ್ನೂ ಮಾಜಿ ಕ್ರಿಕೆಟ್ ಆಟಗಾರರೇ ಟಿ20 ತಂಡದಲ್ಲಿ ಮುಂದುವರಿಯಬೇಕು ಹಾಗೂ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ಇರಲೇ ಬೇಕು ಎಂದು ಅಭಿಮಾನಿಗಳು ‌ಹೇಳುತ್ತಿದ್ದಾರೆ.

ಕೊಹ್ಲಿ ಬದಲಿಗೆ ಈ ಆಟಗಾರನ ಸಿದ್ಧತೆ

ಹೌದು T20ನಲ್ಲಿ‌ ಕೊಯ್ಲಿ ಬದಲಿಗೆ ಇಶಾನ್​ ಕಿಶನ್‌ (Ishan Kishan) ಗೆ ಅವಕಾಶ ನೀಡಲು BCCI ಚಿಂತಿಸ್ತಿದೆ. ಇದೀಗ ಈ ವಿಚಾರ ಕ್ರಿಕೇಟ್ ಪ್ರೀಯರನ್ನು ತಲ್ಲಣ ಗೊಳಿಸಿದೆ. ಉತ್ತಮ ಆಟಗಾರನನ್ನೆ ತಂಡದಿಂದ ಹೊರಗಿಡಲು ಹೊರಟಿರೋ BCCIಗೆ ಜನ ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಬಿಸಿಸಿಐ ಆಯ್ಕೆದಾರರು‌ ಮುಂದಿನ ಕೆಲವೇ ದಿನಗಳಲ್ಲಿ ವಿರಾಟ್‌ ಕೊಹ್ಲಿ ಅವರ ಜೊತೆ ಚರ್ಚಿಸಿ ಟಿ20 ಭವಿಷ್ಯದ ಕುರಿತು ಮಾತನಾಡಬಹುದು.ಒಟ್ಟಿನಲ್ಲಿ ಈ ವಿಚಾರ ಕೇಳಿ ವಿರಾಟ್ ಕೊಯ್ಲಿ ಅಭಿಮಾನಿಗಳಂತು ಬೇಸರಗೊಂಡಿದ್ದಾರೆ.

advertisement

Leave A Reply

Your email address will not be published.