Karnataka Times
Trending Stories, Viral News, Gossips & Everything in Kannada

Post Office Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿರುವ ಹಣ ದುಪ್ಪಟ್ಟಾಗುತ್ತದೆ, ಕೂಡಲೇ ಆರಂಭಿಸಿ.

advertisement

ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಬಯಸಿದರೆ ಬೇರೆ ಬೇರೆ ಆಯ್ಕೆಗಳು ಇವೆ. ಮ್ಯೂಚುವಲ್ ಫಂಡ್ (Mutual Fund) ನಿಂದ ಹಿಡಿದು ಹೆಚ್ಚು ಸೇಫ್ ಆಗಿರುವ ಪೋಸ್ಟ್ ಆಫೀಸ್ (Post Office) ಹೂಡಿಕೆಯ ವರೆಗೆ ನೀವು ನಿಮಗೆ ಬೇಕಾದ ಹೂಡಿಕೆ ಯೋಜನೆಗಳನ್ನ ಆಯ್ದುಕೊಳ್ಳಬಹುದು. ಇದು ಜನಗಳಲ್ಲಿ ಸರ್ಕಾರಿ ಸ್ವಾಮ್ಯದ ಅಂಚೆ ಕಛೇರಿ ಗ್ರಾಹಕರಿಗೆ ಅನುಕೂಲವಾಗುವಂತಹ ಕೆಲವು ಉತ್ತಮ ಹೂಡಿಕೆ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಹೆಚ್ಚು ಲಾಭವನ್ನು ಕೂಡ ಗಳಿಸಬಹುದು. ಈ ಯೋಜನೆಯ ಹೆಸರೇ ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra Scheme).

What is Kisan Vikas Patra Scheme?

 

 

KVP ಹೂಡಿಕೆಯಲ್ಲಿ ನೀವು ಕೇವಲ 115 ತಿಂಗಳುಗಳಲ್ಲಿ ನಿಮ್ಮ ಹೂಡಿಕೆಯ ಹಣವನ್ನು ದುಪ್ಪಟ್ಟಾಗಿಸಿಕೊಳ್ಳಬಹುದು. ಈ ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra Scheme) ಯಲ್ಲಿ ಕನಿಷ್ಠ 100 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು ಆದರೆ 100, 1000, 2000 ಈ ರೀತಿ ಗುಣಕದಲ್ಲಿ ಹೂಡಿಕೆ ಮಾಡಬೇಕು. ಇನ್ನು ಹೂಡಿಕೆಗೆ ಯಾವುದೇ ರೀತಿಯ ಮಿತಿಯನ್ನು ಕೂಡ ಅಳವಡಿಸಲಾಗಿಲ್ಲ. ನೀವು ಎಷ್ಟು ಹಣವನ್ನು ಬೇಕಾದರೂ ನಿಮ್ಮ ಖಾತೆಯಲ್ಲಿ ಇರಿಸಬಹುದು.

KVP Interest Rate:

advertisement

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಬಡ್ಡಿದರ 7.5% ನೀವು ಕೇವಲ 115 ತಿಂಗಳುಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟಾಸಿಕೊಳ್ಳಬಹುದು. 20 ಲಕ್ಷ ರೂಪಾಯಿಗಳನ್ನು ಹೂಡಿಕೆ (Investment) ಮಾಡಿದರೆ 115 ತಿಂಗಳ ಬಳಿಕ 40 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.

ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra Scheme) ಯಲ್ಲಿ ಹೂಡಿಕೆ ಮಾಡಿದರೆ ಮತ್ತೊಂದು ಪ್ರಮುಖ ಪ್ರಯೋಜನ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಷೇರು ಮಾರುಕಟ್ಟೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲದೆ ಇರುವ ಕಾರಣ ನೀವು ಖಾತರಿ ಆದಾಯವನ್ನು ಪಡೆಯುತ್ತೀರಿ. ಸುರಕ್ಷಿತ ಹೂಡಿಕೆ ಆಗಿದ್ದು ಒಂದು ನಿಗದಿತ ಅವಧಿಯವರೆಗೆ ಹೂಡಿಕೆ ಮಾಡಿದ ನಂತರ ಸುರಕ್ಷಿತ ಸಾಲವನ್ನು ಕೂಡ ಪಡೆದುಕೊಳ್ಳುವ ಅವಕಾಶವಿದೆ.

ವಿಕಾಸ ಪತ್ರ ಖಾತೆ ತೆರೆಯಲು ಬೇಕಾಗಿರುವ ದಾಖಲೆಗಳು:

  • ಆಧಾರ್ ಕಾರ್ಡ್ (Aadhaar Card)
  • ಜನನ ಪ್ರಮಾಣ ಪತ್ರ (Birth Certificate)
  • ಪಾಸ್ ಪೋರ್ಟ್ ಅಳತೆಯ ಫೋಟೋ (Passport Size Photo)

ಇಷ್ಟು ಮೂಲಭೂತ ದಾಖಲೆಗಳನ್ನು ಹೊಂದಿರಬೇಕು. ನೀವು ಕೆವಿಪಿ ಅರ್ಜಿ ನಮೂನೆಯನ್ನು ಅಂಚೆ ಕಚೇರಿಯಲ್ಲಿ ತೆಗೆದುಕೊಂಡು ಖಾತೆಯನ್ನು ತೆರೆಯಬಹುದು. KYC ಖಾತೆಯನ್ನು KVP ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಹೀಗಾಗಿ ಅತ್ಯಂತ ಲಾಭದಾಯಕವಾಗಿರುವ ಅಂಚೆ ಕಚೇರಿ (Post Office) ಯ ಕಿಸಾನ್ ವಿಕಾಸ ಪತ್ರ ಯೋಜನೆಯ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಿ.

advertisement

Leave A Reply

Your email address will not be published.