Karnataka Times
Trending Stories, Viral News, Gossips & Everything in Kannada

RBI: ಗೃಹಸಾಲ ಮತ್ತು ವಾಹನ ಸಾಲದ ಇಎಂಐ ಕಟ್ಟುವವರಿಗೆ ಸಿಹಿಸುದ್ದಿ ಕೊಟ್ಟ ಆರ್‌ ಬಿಐ.

advertisement

ಕಳೆದ ಕೆಲವು ತಿಂಗಳುಗಳಿಂದ ರೆಪೊ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಇರಲಿಲ್ಲ. ಈ ಕಾರಣದಿಂದಾಗಿ RBI ನ ಹಣಕಾಸು ನೀತಿ ಸಮಿತಿ ಸತತ ಐದನೇ ತಿಂಗಳಿನಲ್ಲಿಯೂ ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾ (Reserve Bank of India) ಹೇಳಿದೆ.

ಆರ್‌ ಬಿಐ ಗವರ್ನರ್‌ (RBI Governor) ಶಕ್ತಿಕಾಂತ್‌ ದಾಸ್‌ (Shaktikanta Das) ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್‌ 6ರಂದು ಆರಂಭಗೊಂಡಿದ್ದ ಮೂರು ದಿನಗಳ ಕಾಲದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ, ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರಿಂದ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಮಧ್ಯಮ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದು, ಹಣದುಬ್ಬರವನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್‌ ಬಿಐ ಗವರ್ನರ್‌ (RBI Governor) ಶಕ್ತಿಕಾಂತ್‌ ದಾಸ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 

 

advertisement

ಶೇ.6.5ರ ರೆಪೋ ದರ (Repo Rate) ದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಒಮ್ಮತದ ನಿರ್ಧಾರ ತೆಗೆದುಕೊಂಡಿರುವುದಾಗಿ ದಾಸ್‌ ಅವರು ತಿಳಿಸಿದ್ದಾರೆ, ಹಣದುಬ್ಬರದ ಕುರಿತು ನಿಗಾ ಇರಿಸಿದ್ದು, ತುರ್ತು ಸಂದರ್ಭದಲ್ಲಿ ವಿಶೇಷ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಕ್ತಿಕಾಂತ್‌ ದಾಸ್‌ (RBI Governor Shaktikanta Das) ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ. ಕಳೆದ ವರ್ಷದಿಂದ ಹಣದುಬ್ಬರ ಕಡಿಮೆಯಾಗುತ್ತಿದ್ದು, ಇನ್ನೂ ಹಲವು ದೇಶಗಳಲ್ಲಿ ಹಣದುಬ್ಬರ ಏರುಗತಿಯಲ್ಲಿಯೇ ಇದೆ ಎಂದು ಆರ್‌ ಬಿಐ ಹೇಳಿದೆ, ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) 2022ರ ಮೇನಿಂದ ರೆಪೋ ದರವನ್ನು 250 ಬೇಸಿಸ್‌ ಪಾಯಿಂಟ್ಸ್‌ ಗಳಷ್ಟು ಮಾತ್ರ ಹೆಚ್ಚಳ ಮಾಡಿತ್ತು.

ಇದೀಗ ಹಣದುಬ್ಬರ ನಿಯಂತ್ರಣದಲ್ಲಿರುವ ನಿಟ್ಟಿನಲ್ಲಿ ಸತತ ಐದನೇ ಬಾರಿ ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ ಬಿಐ ನಿರ್ಧರಿಸಿದೆ. ಇದರಿಂದಾಗಿ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

advertisement

Leave A Reply

Your email address will not be published.