Karnataka Times
Trending Stories, Viral News, Gossips & Everything in Kannada

Google Pay: ಗೂಗಲ್ ಪೇ ಬಳಸುವವರಿಗೆ ಸಿಹಿಸುದ್ದಿ, ಸಿಗಲಿದೆ 1 ಲಕ್ಷದವರೆಗೆ ಸಾಲ ಸೌಲಭ್ಯ!

advertisement

ಮೊದಲೆಲ್ಲ ಸಾಲ ಬೇಕೆಂದರೆ ಬ್ಯಾಂಕ್ ಗಳಿಗೆ ಹಲವಾರು ಕಾಗದ ಪತ್ರಗಳ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿಸಿ ಕರೆದಾಗೆಲ್ಲ ಹೋಗಿ ಬರಬೇಕಿತ್ತು ಆದರೆ ಈಗ ಹಾಗಿಲ್ಲ. ಗೂಗಲ್ ಇಂಡಿಯಾ (Google India) ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಲು ಗೂಗಲ್ ಪೇ ಅಪ್ಲಿಕೇಶನ್ ಮೂಲಕವೆ ಸಾಲ (Google Pay Loan) ನೀಡುವ ಸೌಲಭ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಸಾಲಗಳು ಬೇಕಾಗುತ್ತವೆ ಆಗೆಲ್ಲ ಈ ಯೋಜನೆಗಳು ಸಹಾಯ ಮಾಡುತ್ತದೆ ಎಂದು ಗೂಗಲ್ ಇಂಡಿಯಾ (Google India) ಹೇಳಿದೆ. ಹೀಗಾಗಿ ಗೂಗಲ್ ಪೇ ನಿಂದ ವ್ಯಾಪಾರಿಗಳಿಗೆ 15,000 ರೂ.ವರೆಗಿನ ಸಣ್ಣ ಸಾಲಗಳನ್ನು ನೀಡಲಾಗುತ್ತಿದೆ. ಈ ಸಾಲಕ್ಕೆ , ಮರುಪಾವತಿ ಮಾಡಬೇಕಾದ ಕನಿಷ್ಠ ಮೊತ್ತವು 111 ರೂ. ಆಗಿರುತ್ತದೆ. ಅಲ್ಲದೇ ಅತಿ ಅವಶ್ಯ ಇದ್ದಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇದನ್ನು 7 ದಿನಗಳಿಂದ 12 ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದಾಗಿದೆ .

ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲು ಗೂಗಲ್ ಪೇ DMI Finance ಜೊತೆಗೆ ಪಾಲುದಾರಿಕೆ ಹೊಂದಿದೆ. ಇಷ್ಟೇ ಅಲ್ಲ, Google Pay ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ (Credit Line) ಅನ್ನು ಸಕ್ರಿಯಗೊಳಿಸುವ ಸೌಲಭ್ಯವನ್ನು ಕೂಡ ಪ್ರಾರಂಭಿಸಿದೆ. ಇದನ್ನು ಬಳಸಿಕೊಂಡು, ವ್ಯಾಪಾರಿಗಳು ಎಲ್ಲಾ ಆನ್ಲೈನ್ ಮತ್ತು ಆಫ್ಲೈನ್ ವ್ಯಾಪಾರಿಗಳಿಂದ ಸರಕುಗಳನ್ನು ಖರೀದಿಸಬಹುದಾಗಿದೆ.

Google Pay ನಿಂದ Loan ಪಡೆಯುವುದು ಹೇಗೆ?

advertisement

ಗೂಗಲ್ ಪೇ ನಿಂದ ವ್ಯಾಪಾರಕ್ಕಾಗಿ ಸಾಲ (Loan) ಪಡೆಯಬೇಕಾದರೆ ಮೊದಲು ಗೂಗಲ್ ಪೇ ಫಾರ್ ಬ್ಯುಸಿನೆಸ್ (Google Pay for Business) ಅಪ್ಲಿಕೇಶನ್ನಲ್ಲಿ ಖಾತೆಯನ್ನು ಹೊಂದಿರಬೇಕು. ಹಾಗಿದ್ದರೆ ಮಾತ್ರ 8 ಹಂತಗಳಲ್ಲಿ ನೀವು ಗೂಗಲ್ ಪೇ ಮೂಲಕ ವ್ಯಾಪಾರಕ್ಕಾಗಿ ಸಣ್ಣ ಸಾಲವನ್ನು ಹೇಗೆ ಪಡೆಯಬಹುದಾಗಿದೆ.

 

 

  • ಮೊದಲಿಗೆ ನಿಮ್ಮ Google Pay for Business ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಇದರ ನಂತರ ಲೋನ್ಸ್ ವಿಭಾಗಕ್ಕೆ ಹೋಗಿ ಮತ್ತು ಆಫರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನಿಮಗೆ ಬೇಕಾದ ಸಾಲದ ಮೊತ್ತವನ್ನು ಆಯ್ಕೆ ಮಾಡಿ ಮತ್ತು ಗೆಟ್ ಸ್ಟಾರ್ಟ್ ಅನ್ನು ಕ್ಲಿಕ್ ಮಾಡಬೇಕು. ನೀವು ಕ್ಲಿಕ್ ಮಾಡಿದ ತಕ್ಷಣ, ನಿಮ್ಮನ್ನು ಸಾಲ ನೀಡುವ ಪಾಲುದಾರರ ವೆಬ್ಸೈಟ್ಗೆ  ರಿ ಡೈರೆಕ್ಟ್ ಮಾಡಲಾಗುತ್ತದೆ.
  • ಇದರ ನಂತರ ನಿಮ್ಮ Google Account ಲಾಗಿನ್ ಮಾಡಿ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ಅಲ್ಲದೆ, ಸಾಲದ ಮೊತ್ತ ಮತ್ತು ಯಾವ ಅವಧಿಗೆ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.
  • ಇದರ ನಂತರ ನೀವು ನಿಮ್ಮ  ಫೈನಲ್ ಲೋನ್ ಆಫರ್ (Final Loan Offer) ಅನ್ನು  ಪರಿಶೀಲಿಸಿ, ಲೋನ್ ಒಪ್ಪಂದಕ್ಕೆ ಇ-ಸೈನ್ ಮಾಡಬೇಕು.
  • ಇಷ್ಟೆಲ್ಲಾ ಆದ ನಂತರ ಕೆಲವು KYC ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
  • EMI ಪಾವತಿಗಾಗಿ Setup eMandate ಅಥವಾ Setup NACHಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
  • ಮುಂದಿನ ಹಂತದಲ್ಲಿ ನೀವು ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿದರೆ ಸಾಲ ಪಡೆಯಬಹುದು.
  • ನಿಮ್ಮ ಅಪ್ಲಿಕೇಷನ್  My Loan ವಿಭಾಗದಲ್ಲಿ ನಿಮ್ಮ ಸಾಲವನ್ನು ನೀವು ಟ್ರ್ಯಾಕ್ ಮಾಡಬಹುದಾಗಿದೆ.

ಈಗಾಗಲೇ ಕಳೆದ 12 ತಿಂಗಳಲ್ಲಿ UPI ಮೂಲಕ 167 ಲಕ್ಷ ಕೋಟಿ ರೂಪಾಯಿವರೆಗಿನ ಸಾಲ ನೀಡಲಾಗಿದೆ. ಇಲ್ಲಿಯವರೆಗೆ, ಗೂಗಲ್ ಪೇ ನೀಡುವ ಅರ್ಧದಷ್ಟು ಸಾಲವನ್ನು ಮಾಸಿಕ ಆದಾಯ 30 ಸಾವಿರಕ್ಕಿಂತ ಕಡಿಮೆ ಇರುವವರಿಗೆ ನೀಡಲಾಗಿದೆ ಎಂದು ಗೂಗಲ್ ಪೇ ವೈಸ್ ಪ್ರೆಸಿಡೆಂಟ್ ಅಂಬರೀಶ್ ಕೆಂಗೇ (Ambarish Kenghe) ಹೇಳಿದ್ದಾರೆ.

ಗೂಗಲ್ ಪೇ ಸಾಲ (Loan) ಮಾತ್ರವಲ್ಲದೆ ಗೂಗಲ್ ಇಂಡಿಯಾ ಭಾರತದಲ್ಲಿ ಸಣ್ಣ ವ್ಯಾಪಾರಿಗಳಿಗಾಗಿ ಇನ್ನೂ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದೆ. AI ಸಹಾಯದಿಂದ ಗೂಗಲ್ ಮರ್ಚೆಂಟ್ ಸೆಂಟರ್ ನೆಕ್ಸ್ಟ್ ತನ್ನ ವೆಬ್‌ಸೈಟ್‌ನಿಂದ ವ್ಯಾಪಾರಿಯ ಪ್ರಾಡಕ್ಟ್  ಫೀಡ್ (Product Feed) ಅನ್ನು ಪತ್ತೆ ಹಚ್ಚುವ ಮೂಲಕ ಸ್ವಯಂಚಾಲಿತವಾಗಿ ಜನಪ್ರಿಯಗೊಳಿಸುತ್ತದೆ ಎಂದು ಗೂಗಲ್ ಇಂಡಿಯಾ ಹೇಳಿದೆ. ತಮ್ಮ ಫೀಡ್‌ನಲ್ಲಿ ಏನನ್ನು ಸೇರಿಸಬೇಕು ಏನನ್ನು ಕೈ ಬಿಡಬೇಕು ಎನ್ನುವ ಸಂಪೂರ್ಣ ನಿಯಂತ್ರಣ ವ್ಯಾಪಾರಿ ಬಳಿ ಇರುತ್ತದೆ. ಅದರ ಸಹಾಯದಿಂದ ಅವರು ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಸಿ ಕೊಳ್ಳಬಹುದು ಎಂದು ಗೂಗಲ್ ಇಂಡಿಯಾ ವರದಿ ಮಾಡಿದೆ.

advertisement

Leave A Reply

Your email address will not be published.