Karnataka Times
Trending Stories, Viral News, Gossips & Everything in Kannada

8th Pay Commission: 8ನೇ ವೇತನ ಆಯೋಗ ರಚನೆಗೆ ಸಿದ್ಧತೆ, ಸರಕಾರಿ ನೌಕರರಿಗೆ ಬೊಂಬಾಟ್ ಸುದ್ದಿ!

advertisement

ಕೇಂದ್ರ ಸರಕಾರದ ಸರಕಾರಿ ನೌಕರರಿಗೆ (Govt Employees) ಹೊಸ ವೇತನ ಆಯೋಗದ ಪ್ರಕಾರ ವೇತನ ಹಾಗೂ ಭಡ್ತಿ ಇತ್ಯಾದಿ ವಿಚಾರಗಳು ಈ ಹಿಂದಿನಿಂದಲೂ ಬಹಳ ಚರ್ಚೆಯಲ್ಲಿದ್ದ ವಿಚಾರವಾಗಿದೆ. ಇತ್ತೀಚೆಗಷ್ಟೇ ಏಳನೇ ವೇತನ ಆಯೋಗ (7th Pay Commission) ಜಾರಿಯಾಗಿದ್ದು ಈ ಬಗ್ಗೆ ಕೆಲ ಮಾಹಿತಿ ನೀಡಿತ್ತು ಅದರಲ್ಲಿ ಕೆಲ ಅಂಶಗಳು ಶೀಘ್ರ ಜಾರಿಗೆ ಬರುವುದಾಗಿ ಸಹ ಕೇಂದ್ರ ಸರಕಾರ ತಿಳಿಸಿತ್ತು. ಏಳನೇ ವೇತನ ಆಯೋಗದ ಬಳಿಕ ಮುಂದಿನ ವರ್ಷವೇ 8ನೇ ವೇತನ ಆಯೋಗ (8th Pay Commission) ಜಾರಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿದ್ಧತೆ ಆರಂಭ:

ಇಷ್ಟು ಸಮಯದ ವರೆಗೆ ಏಳನೇ ವೇತನ ಆಯೋಗ ಚರ್ಚೆಯಲ್ಲಿದ್ದು ಬಳಿಕ 8ನೇ ವೇತನ ಆಯೋಗ ಬರಲಾರದೆಂದೇ ಹೇಳಲಾಗಿತ್ತು ಆದರೆ ಇತ್ತೀಚಿನ ಕೆಲ ಬದಲಾವಣೆ ಈ ವ್ಯವಸ್ಥೆ ರೂಪವನ್ನೇ ಬದಲಾಯಿಸುತ್ತಿದೆ. 8 ನೇ ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆ ಆರಂಭ ಆಗಿದೆ ಎಂದು ಹೇಳಲಾಗುತ್ತಿದೆ. ಮುಂದಿನ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸರಕಾರ ಸ್ಪಷ್ಟನೆಯನ್ನು ಈಗಲೇ ನೀಡಬೇಕು ಎಂದು ಸರಕಾರಿ ನೌಕರರು ಈಗಾಗಲೇ ಎರಡು ಸಲ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸಿದ್ಧತೆ ಸಹ ನಡೆಯುತ್ತಿದೆ ಎಂದು ಕೆಲ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.

ಯಾರಿಗೆ ಅನುಕೂಲವಾಗಲಿದೆ:

 

 

advertisement

2024 ರಲ್ಲಿ ಲೋಕಸಭೆ ಚುನಾವಣರ ಬಳಿಕ ಆಡಳಿತಕ್ಕೆ ಬರುವ ಪಕ್ಷದಿಂದ ಈ ಒಂದು ಎಂಟನೇ ವೇತನ ಆಯೋಗ ರಚನೆ ಆಗಲಿದೆ ಎಂದು ಕೆಲ ಮಾಧ್ಯಮ ಮೂಲಗಳು ಈ ಬಗ್ಗೆ ಮಾಹಿತಿ ನೀಡಿವೆ. ಈ ಒಂದು 8ನೇ ವೇತನ ಆಯೋಗ ಜಾರಿಗೆ ಬಂದರೆ ಕೇಂದ್ರ ಸರಕಾರಿ ನೌಕರರ ಕನಿಷ್ಟ ವೇತನದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಕನಿಷ್ಟ ವೇತನ ದೊಡ್ಡ ಮಟ್ಟದ ಮೊತ್ತವಾಗಿ ಏರಿಕೆ ಆಗುವ ಕಾರಣ ಬಹಳ ಜನರಿಗೆ ಇದು ಅನುಕೂಲ ಆಗಲಿದೆ. ಅಷ್ಟು ಮಾತ್ರವಲ್ಲದೇ ವೇತನ ಪರಿಷ್ಕರಣೆಗೆ ಕೂಡ ನೂತನ ಕ್ರಮ ಬರುವ ಸಾಧ್ಯತೆ ಇದೆ.

ವೇತನ ಅಧಿಕ:

ಏಳನೇ ವೇತನ ಆಯೋಗ (7th Pay Commission) ಕ್ಕಿಂತಲೂ ಎಂಟನೇ ವೇತನ ಆಯೋಗದಲ್ಲಿ ವೇತನ ಅಧಿಕವಾಗಿ ಏರಲಿದೆ. ಅಂದರೆ ಮೂಲ ವೇತನಕ್ಕಿಂತಲೂ 44.4% ನಷ್ಟು ವೇತನ ಹೆಚ್ಚಳ ಆಗುವ ಸಾಧ್ಯತೆ ಇದೆ. ಹಾಗಾಗಿ ಉದ್ಯೋಗಿಗಳಿಗೆ ಆರ್ಥಿಕ ಉತ್ತೇಜನ ನೀಡುವ ಕಾರಣ ಈ ವಿಚಾರ ಬಹಳ ಖುಷಿ ನೀಡಲಿದೆ.

ತಜ್ಞರ ವರದಿಯಲ್ಲಿ ಇರೋದೇನು?

ಈ ಬಗ್ಗೆ ತಜ್ಞ ತಂಡದವರು ಸಹ ವರದಿ ಮಾಡಿದ್ದು ಇನ್ನು ಒಂದುವರೆ ವರ್ಷದ ಒಳಗೆ ಈ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ‌. ಏಳನೆ ವೇತನ ಆಯೋಗಕ್ಕಿಂತಲೂ ಅನೇಕ ಬದಲಾವಣೆ ಎಂಟನೇ ವೇತನ ಆಯೋಗ (8th Pay Commission) ದಲ್ಲಿ ಆಗಲಿದೆ. ಈ ವ್ಯವಸ್ಥೆ ಜಾರಿಯಾದರೆ ಸರಕಾರಿ ನೌಕರರ ವೇತನದಲ್ಲಿ ಬಹಳ ಹೆಚ್ಚು ಪ್ರಮಾಣ ಪಡೆಯಲಿದ್ದಾರೆ. ಮುಂದಿನ ವರ್ಷವೇ ನೂತನ ಆಯೋಗ ರಚಿಸಿ 8ನೇ ವೇತನವನ್ನು ಮೋದಿ (PM Modi) ಅವರು ಘೋಷಣೆ ಮಾಡ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

advertisement

Leave A Reply

Your email address will not be published.