Karnataka Times
Trending Stories, Viral News, Gossips & Everything in Kannada

Ration Card: ಡಿ.30 ರೊಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದು, ಸರ್ಕಾರದ ಹೊಸ ಆದೇಶ

advertisement

ಇಂದು ರೇಷನ್ ಕಾರ್ಡ್ (Ration Card) ‌ಅನ್ನೋದು ಬಹು ಮುಖ್ಯವಾದ ದಾಖಲೆಯಾಗಿದ್ದು ಎಲ್ಲಾ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಬಹಳ‌ ಮುಖ್ಯವಾಗಿದೆ. ಅದರಲ್ಲೂ ಕಾಂಗ್ರೆಸ್ ‌ಸರಕಾರದ ಗ್ಯಾರಂಟಿ ಯೋಜನೆ (Guarantee Scheme) ಎಲ್ಲ‌ ಭಾಗ್ಯಗಳಿಗೂ ಈ ರೇಷನ್ ಕಾರ್ಡ್ ‌ಅಗತ್ಯ.‌ ಅದರೆ ಇಂದು ಹೆಚ್ಚಿನ‌ ಜನರು‌ ಈ ರೇಷನ್ ಕಾರ್ಡ್ ಅನ್ನು ದುರುಪಯೋಗ ‌ಮಾಡುತ್ತಿದ್ದಾರೆ. ಕಾರ್ಡ್ ನ್ನು ಕೇವಲ ಸರಕಾರಿ ಸೌಲಭ್ಯ ಪಡೆಯಲು ಬಳಸುತ್ತಿದ್ದು ಆಹಾರ ಧಾನ್ಯಗಳನ್ನು ಬಳಸುತ್ತಿಲ್ಲ, ಆದರೆ‌ ಇದೀಗ ಆಹಾರ ಇಲಾಖೆಯು ಸೂಚನೆಯನ್ನು ನೀಡಿದ್ದು ರೇಷನ್ ಕಾರ್ಡ್ ಇಕೆವೈಸಿ (e-KYC) ಮಾಡಲು ಕೊನೆಯ‌ ದಿನಾಂಕ ವನ್ನು ನಿಗದಿ ಮಾಡಿದೆ.

e-KYC ಕಡ್ಡಾಯ:

 

 

ಪ್ರತಿಯೊಂದು ಸರ್ಕಾರದ ಯೋಜನೆ ಗಳಿಗೆ ರೇಷನ್ ‌ಕಾರ್ಡ್ (Ration Card) ಕಡ್ಡಾಯ ವಾಗಿದ್ದು, ಸರ್ಕಾರ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡದೇ ಇದ್ದಲ್ಲಿ ಸರಕಾರದ ಯಾವುದೇ ಸೌಲಭ್ಯ ನಿಮಗೆ ಸಿಗುವುದಿಲ್ಲ. ಅಷ್ಟೆ ಅಲ್ಲದೆ ಇದರಿಂದ ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ (Fake Ration Card) ಯಾವುದು ಎಂಬುದನ್ನು ತಿಳಿಯಲು‌ ಈ ಕೆಲಸ ಕಡ್ಡಾಯ ವಾಗಿದೆ.

ಕೊನೆಯ ದಿನಾಂಕ ನಿಗದಿ:

 

advertisement

 

ಇದೀಗ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಲು ಆಹಾರ ಇಲಾಖೆ (Food Department) ಯು ಕೊನೆಯ ದಿನಾಂಕ ವನ್ನು ನಿಗದಿ ಮಾಡಿದೆ. ಇದಕ್ಕಾಗಿ ಡಿಸೆಂಬರ್ 30 ಕೊನೆಯ ದಿನಾಂಕ ವಾಗಿದ್ದು ಲಿಂಕ್ ಮಾಡಿಸದೇ‌ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾ (Cancellation) ಗುವ ಸಾಧ್ಯತೆಯಿದೆ. ಒಂದು ವೇಳೆ ಇ-ಕೆವೈಸಿ ಆಗಿಲ್ಲವೆಂದು ತಿಳಿದು ಬಂದರೆ ಆನ್‌ಲೈನ್‌ (Online) ಮುಖಾಂತರ ಅಪ್ಡೇಟ್‌ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ನಿಮ್ಮ ರೇಷನ್‌ ಕಾರ್ಡ್‌ ಅಂಗಡಿಗೆ ಹೋಗಲೇಬೇಕು. ಅಲ್ಲಿ ನಿಮ್ಮ ಹೆಬ್ಬೆಟ್ಟಿನ ಗುರುತು ಪಡೆದು ಇ-ಕೆವೈಸಿಯನ್ನು ಮಾಡಿಸಬಹುದಾಗಿದೆ.

ಹೀಗೆ ಮಾಡಿ:

  • ಮೊದಲು ಪಡಿತರ ದಾರರು ಆಹಾರ ಇಲಖೆಯ ವೆಬ್ ಗೆ ಹೋಗಿ ಲಾಗ್ ಇನ್ ಮಾಡಬೇಕು.
  • ಅದರ ನಂತರ, ಕೆವೈಸಿ (KYC) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನೀಡಿ, ನಿಮ್ಮ ಆಧಾರ್, ಪ್ಯಾನ್ ಮತ್ತು ಇತರ ಅಗತ್ಯ ದಾಖಲೆಗಳ ಮಾಹಿತಿಯನ್ನು‌ ಸಲ್ಲಿಸಿ ಮಾಹಿತಿಯನ್ನು ನೀಡಿದ ನಂತರ ಗ್ರಾಹಕರಿಗೆ ತನ್ನ ಮೊಬೈಲ್ ಗೆ ಸಂದೇಶ ಬರುತ್ತದೆ.

ಕಾರ್ಡ್‌ ರದ್ದು:

ಇನ್ನು ರೇಷನ್‌ ಕಾರ್ಡ್‌ ಗೆ ಆಧಾರ್ ‌ಲಿಂಕ್ (Aadhaar Link) ಮಾಡದೇ ಇದ್ದಲ್ಲಿ ಕಾರ್ಡ್ ರದ್ದಾಗುವುದು ಅಲ್ಲದೆ ಕಾರ್ಡ್ ಹೊಂದಿದವರು ಕೆಲವು ಕಾರಣಗಳಿಂದ 6 ತಿಂಗಳುಗಳ ಕಾಲ ರೇಷನ್‌ ಪಡೆಯದೇ ಇದ್ದರೆ ಅಂಥವರ ಕಾರ್ಡ್‌ ಅನ್ನು ರದ್ದು ಮಾಡಲು ಆಹಾರ ಇಲಾಖೆಯು ತಿರ್ಮಾನಿಸಿದೆ, ಹಾಗಾಗಿ ಡಿಸೆಂಬರ್ 30 ರೊಳಗೆ ಈ ಕೆಲಸವನ್ನು ಮೊದಲು ಮಾಡಬೇಕಾಗಿದೆ.

advertisement

Leave A Reply

Your email address will not be published.