Bank Account: ಕೂಡಲೇ ಈ ಕೆಲಸ ಮಾಡಿದರೆ ನಿಮ್ಮ ಹಣ ಸೇಫ್, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗುತ್ತೆ!
ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ (Bank Account) ಅನ್ನು ಹ್ಯಾಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಯನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳುದಿರುವುದು ಖಾತೆಯಲ್ಲಿರುವ ಹಣದ ದೃಷ್ಟಿಯಿಂದ ಬಹಳ ಒಳ್ಳೆಯದು. ಅಷ್ಟೇ ಅಲ್ಲದೇ ಒಟಿಪಿಯಿಲ್ಲದೇ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಅಷ್ಟೋ ಇಷ್ಟೋ ಹಣವು ಖಾಲಿಯಾಗಬಹುದು. ಹಾಗಾದ್ರೆ ನಿಮ್ಮ ಅಕೌಂಟ್ ಅನ್ನು ಸೇಫ್ ಆಗಿಡಲು ಏನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಿ.
ಬ್ಯಾಂಕ್ ಅಕೌಂಟ್ ಸೇಫ್ ಆಗಿಡಲು ಹೀಗೆ ಮಾಡಿ?
ಬ್ಯಾಂಕ್ ಅಕೌಂಟ್ ಅನ್ನು ಸುರಕ್ಷಿತವಾಗಿಡಲು ಆಧಾರ್ ಕಾರ್ಡ್ (Aadhar Card) ಅನ್ನು ಲಾಕ್ ಮಾಡಬೇಕು. ಇಲ್ಲವಾದರೆ ಓಟಿಪಿಯಿಲ್ಲದೇ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವು ಖಾಲಿಯಾಗಬಹುದು. ಹೌದು, ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಯ ಹಣವನ್ನು ವಂಚಕರು ಕದಿಯಬಹುದು. ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಹಣ ಕಡಿತಗೊಂಡರೆ, ಆ ಬಗ್ಗೆ ಯಾವುದೇ ಮೆಸೇಜ್ ಕೂಡ ಬರುವುದಿಲ್ಲ. ಹೀಗಾಗಿ ಆಧಾರ್ ಕಾರ್ಡ್ಗೆ ಸಂಬಂಧಿಸಿದ ಇಂತಹ ವಂಚನೆಗಳನ್ನು ತಪ್ಪಿಸಲು ನೀವು mAadhaar ಅಪ್ಲಿಕೇಶನ್ ಅಥವಾ UIDAI ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ ಆಧಾರ್ನ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಸೇಫ್ ಆದಂತೆ.
SMS ಮೂಲಕ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವುದು ಹೇಗೆ?
- SMS ಮೂಲಕ ಆಧಾರ್ ಅನ್ನು ಲಾಕ್ ಮಾಡಬೇಕಾದರೆ 4 ಅಥವಾ 8 ಅಂಕಿಗಳ ಆಧಾರ್ ಸಂಖ್ಯೆಯನ್ನು ಬರೆದು ಆ ಫೋನ್ನಿಂದ 1947 ಗೆ ಈ ಮೆಸೇಜ್ ಮಾಡಬೇಕು.
- ಆ ಬಳಿಕ ಲಾಕ್ ಮಾಡುವ ವಿನಂತಿಗಾಗಿ, ನೀವು LOCKUID ಕೊನೆಯ, 4 ಅಥವಾ 8 ಅಂಕಿಗಳ ಆಧಾರ್ ಸಂಖ್ಯೆ ಮತ್ತು Y ಅಂಕಿಯ OTP ಅನ್ನು ನಮೂದಿಸಬೇಕು
- ನಂತರದಲ್ಲಿ ನಿಮ್ಮ ಮೊಬೈಲ್ ನಿಂದ ಈ 1947 ಸಂಖ್ಯೆಗೆ ಮರಳಿ ಸಂದೇಶ ಕಳುಹಿಸಬೇಕು
- ಈ ವೇಳೆ ನಿಮ್ಮ ಫೋನ್ನಲ್ಲಿ ದೃಢೀಕರಣ ಮೆಸೇಜ್ ಬರುತ್ತದೆ. ಈ ಮೆಸೇಜ್ ಬಂದರೆ ಆಧಾರ್ ಕಾರ್ಡ್ ಲಾಕ್ ಆಗಿದೆ ಎನ್ನುವುದನ್ನು ಸೂಚಿಸುತ್ತದೆ.
ಇಲ್ಲವಾದರೆ ಹೀಗೆ ಮಾಡಿ ಆಧಾರ್ ಕಾರ್ಡ್ ಲಾಕ್ ಮಾಡಿ: - ವರ್ಚುವಲ್ ಐಡಿ ಸಂಖ್ಯೆಯ ಕೊನೆಯ 6 ಅಥವಾ 10 ಅಂಕಿಗಳೊಂದಿಗೆ OTP ವಿನಂತಿಯನ್ನು ಕಳುಹಿಸಬೇಕು. ತದನಂತರದಲ್ಲೂ ಫೋನ್ನಿಂದ GETOTPLAST 6 ಅಥವಾ 10 ಅಂಕಿಯ ವರ್ಚುವಲ್ ಐಡಿ ಸಂಖ್ಯೆಯನ್ನು ನಮೂದಿಸಬೇಕು.
- ಕೊನೆಗೆ ಅನ್ಲಾಕ್ ಮಾಡಲು ವಿನಂತಿಯನ್ನು ಕಳುಹಿಸಬೇಕು. ಇಲ್ಲಿ UNLOCKUIDLAST 6 ಅಥವಾ 10 ಅಂಕಿಗಳ ವರ್ಚುವಲ್ ಐಡಿ ಹಾಗೂ 6 ಅಂಕೆಗಳ OTP ಅನ್ನು ಕಳುಹಿಸಬೇಕು. ಕೊನೆಗೆ ಮೊಬೈಲ್ ಸಂಖ್ಯೆಗೆ ದೃಢೀಕರಣ ಮೆಸೇಜ್ ಬರುತ್ತದೆ. ಹೀಗೆ ಮಾಡಿ ನಿಮ್ಮ ಆಧಾರ್ ಕಾರ್ಡ್ ಅನ್ನು ಸೇಫ್ ಆಗಿಡಬಹುದಾಗಿದೆ.