Karnataka Times
Trending Stories, Viral News, Gossips & Everything in Kannada

Gruha Lakshmi-Anna Bhagya: ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಈ ತಿಂಗಳು‌ ಯಾವಾಗ ಜಮೆಯಾಗಲಿದೆ?

advertisement

ಇಂದು ಬಹಳಷ್ಟು ಸುದ್ದಿಯಲ್ಲಿರುವ ಯೋಜನೆ ಎಂದ್ರೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಈಗಾಗಲೇ ಮಹೀಳೆಯರನ್ನು ಆರ್ಥಿಕವಾಗಿ ಸದೃಢ ಮಾಡುವ ಉದ್ದೇಶ ದಿಂದ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ನೊಂದಣಿ ಮಾಡಿದ ಕೆಲವು ಮಹೀಳೆಯರಿಗೆ ಎಲ್ಲಾ ಕಂತಿನ ಹಣ ಜಮೆ ಯಾಗಿದ್ದು ಕೆಲವು ಮಹೀಳೆಯರಿಗೆ ಒಂದು ಕಂತಿನ ಹಣವು ಜಮೆಯಾಗಿಲ್ಲ ಈ ಬಗ್ಗೆ ಕೆಲವು ಮಹೀಳೆಯರು ಬೇಸರಗೊಂಡಿದ್ದು ಇದೀಗ ಈ ತಿಂಗಳ ಹಣ ಯಾವಾಗ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ತಿಂಗಳ ಹಣ ಜಮೆ:

ಈಗಾಗಲೇ ನೊಂದಣಿ ಮಾಡಿದ ಮಹೀಳೆಯರಿಗೆ ನವೆಂಬರ್ ತಿಂಗಳ ಹಣ ಜಮೆಯಾಗಿಲ್ಲ, ಈ ಬಗ್ಗೆ ಮಹೀಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾಹಿತಿ ನೀಡಿದ್ದು ಈ ತಿಂಗಳ 15ರ ನಂತರ ಮಹೀಳೆಯರ ಖಾತೆಗೆ ಹಣ ಜಮೆಮಾಡಲಾಗುತ್ತದೆ ಎಂದಿದ್ದಾರೆ. ಅದೇ ರೀತಿ ಒಂದು ಕಂತಿನ ಹಣ ಜಮೆ ಯಾಗದೇ ಇದ್ದರೆ ಐದು‌ ಕಂತಿನ‌ ಹಣ ಒಟ್ಟಿಗೆ ಜಮೆಯಾಗಲಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.

ಯಾಕೆ ಹಣ ಬಂದಿಲ್ಲ?

ಕೆಲವು ನೋಂದಾಯಿತ ಮಹೀಳೆಯರಿಗೆ ಹಣ ಬಾರದೇ ಇರೋದಕ್ಕೆ ಮುಖ್ಯ ಕಾರಣ ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.ಉಳಿದಂತೆ ತಾಂತ್ರಿಕ ಕಾರಣ ಆಗಿದ್ದು ಬ್ಯಾಂಕ್ ಖಾತೆ ಸಮಸ್ಯೆ (Bank Account Problem), ವಿಳಾಸ ಸಮಸ್ಯೆ (Address Problem), ಬ್ಯಾಂಕ್ ಖಾತೆ (Bank Account) ಆಧಾರ ಕಾರ್ಡ್ (Aadhaar card) ಲಿಂಕ್ ಪ್ಯಾನ್ ಕಾರ್ಡ್ (PAN Card) ಲಿಂಕ್ ಆಗದೇ ಇರೋದಕ್ಕೆ ಹಣ ಜಮೆಯಾಗಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಿ ಖಾತೆಗೆ ಸರಿಯಾದ ಸಮಯಕ್ಕೆ ಹಣ ಜಮಾ ಆಗುವಂತೆ ಮಾಡಲಾಗುವುದು ಎಂದಿದ್ದಾರೆ.

advertisement

 Anna Bhagya Money:

 

 

ಹಾಗೆಯೇ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಹೆಚ್ಚುವರಿ ಅಕ್ಕಿಯ ಸಮಸ್ಯೆ ಯಿಂದ ಕುಟುಂಬದ ಮುಖ್ಯಸ್ಥರ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಅಂದರೆ ರೂ‌ 170 ಜಮೆ ಮಾಡುತ್ತಿದೆ.ಇದರ ಹಣ ಕೂಡ ಈ ತಿಂಗಳ 15 ರಂದು ಜಮೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರು ಮಾಹಿತಿ ನೀಡಿದ್ದಾರೆ.

ಚೆಕ್ ಮಾಡಬಹುದಾಗಿದೆ:

ನಿಮಗೆ ಅನ್ನಭಾಗ್ಯದ ಹಣ ಬಂದಿದೆಯೇ ಎಂದು ಚೆಕ್ ಮಾಡಲು ಆಹಾರ ಇಲಾಖೆಯ https://ahara.kar.nic.in/status1/status ಈ ಲಿಂಕ್‌ ಮೂಲಕ‌ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಇಲ್ಲಿ‌ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆಯಬಹುದಾಗಿದೆ.

advertisement

Leave A Reply

Your email address will not be published.