Karnataka Times
Trending Stories, Viral News, Gossips & Everything in Kannada

Maruti Car: ಕೇವಲ 5 ಲಕ್ಷಕ್ಕೆ ಸಿಗಲಿದೆ ಏಳು ಸೀಟಿನ ಬಡವರ ಇನೋವಾ ಕಾರು, ಬೆಂಕಿ ಲುಕ್ ಹಾಗೂ 26Km ಮೈಲೇಜ್

advertisement

ಕಾರನ್ನು ಕೊಳ್ಳಬೇಕು ಎಂಬುದು ಬಹುತೇಕರ ಜೀವಮಾನದ ಒಂದು ಕನಸ್ಸಾಗಿರುತ್ತದೆ. ಆದರೆ ಹಣಕಾಸಿನ ಸಮಸ್ಯೆ ಈ ಯೋಜನೆಗೆ ಸಾಕಷ್ಟು ತೊಂದರೆಯುಂಟುಮಾಡಲಿದೆ. ಹಾಗಾಗಿ ಕಡಿಮೆ ಬಜೆಟ್ ನಲ್ಲಿ ಅತ್ಯಧಿಕ ವೈಶಿಷ್ಟ್ಯ ಉಳ್ಳ ಕಾರನ್ನು ಹುಡುಕುವವರಿಗೆ ನಾವಿಂದು ನೀಡುವ ಮಾಹಿತಿ (Maruti) ತುಂಬಾ ಉಪಯುಕ್ತ ಆಗಲಿದೆ. ಕಾರನ್ನು ಕೌಟುಂಬಿಕ ಕಾರಣಕ್ಕೆ ಖರೀದಿ ಮಾಡುವವರು ಅನೇಕರಿದ್ದಾರೆ ಅಂತವರಿಗೆ ಈಗ ಒಂದು ಅತ್ಯುತ್ತಮ ಆಯ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಬಹುದು.

ಯಾವುದು ಈ ಕಾರು?

ಭಾರತೀಯ ಮಾರುಕಟ್ಟೆಯಲ್ಲಿ ದೈತ್ಯ ವಾಹನ ತಯಾರಿಕ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾರುತಿ ಕಂಪೆನಿಯಿಂದಲೇ ಈ ಕಾರು ಪರಿಚಯಿಸಲಾಗಿದೆ. ಈ ಕಾರಿನ ಹೆಸರು ಮಾರುತಿ ಇಕೊ (Maruti Eeco), ವಾಣಿಜ್ಯ ಮತ್ತು ವೈಯಕ್ತಿಕ ಉದ್ದೇಶಕ್ಕಾಗಿ ಈ ಕಾರು ಅಧಿಕ ಬಳಕೆ ಆಗಲಿದೆ, ಈ ಒಂದು ಕಾರನ್ನು ಕಡಿಮೆ ಬಜೆಟ್ ನಲ್ಲಿ ನೀವು ಪಡೆಯಬಹುದು.

ವೈಶಿಷ್ಟ್ಯ ಹೇಗಿದೆ?

 

advertisement

 

  • 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ (Manual Gearbox) ಹೊಂದಿದೆ.
  • ಉತ್ತಮ ಮೈಲೇಜ್ ನಿಮಗೆ ನೀಡಲಿದೆ. 1.2ಲೀಟರ್ ನೈಸರ್ಗಿಕ ಪೆಟ್ರೋಲ್ ಇಂಜಿನ್ (Petrol Engine) ಸಾಮರ್ಥ್ಯ ಹೊಂದಿದೆ.
  • ಇದು 7 ಆಸನ ಹೊಂದಿರುವ ಕಾರ್ ಆಗಿದೆ.
  • ಪ್ರತೀ ಲೀಟರ್ ಪೆಟ್ರೋಲ್ ಗೆ 19.71km ಮೈಲೇಜ್ ನೀಡಲಿದೆ.
  • CNG ಪ್ರತಿ ಕೆಜಿಗೆ 26.78 km ಮೈಲೇಜ್ ನೀಡಲಿದೆ.
  • ಇದೇ ಕಾರನ್ನು ವಸ್ತುಗಳ ಡೆಲಿವರಿ ಮಾಡುವ ವಿತರಣಾ ವ್ಯಾನ್ ಶಾಲೆ ಮಕ್ಕಳ ವ್ಯಾನ್ (Van) ಮತ್ತು ಟ್ಯಾಕ್ಸಿ (Taxi) ರೀತಿ ಹಾಗೂ ಆ್ಯಂಬುಲೆನ್ಸ್ ಆಗಿ ಬಳಕೆ ಮಾಡಬಹುದು.
  • ಈ ಕಾರಿನ ಒಳಭಾಗ ವಿಶಾಲವಾಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ.
  • ಮಾರುತಿ ಇಕೊ (Maruti Eeco) ಡಿಜಿಟಲ್ ಸ್ಪೀಡೋ ಮೀಟರ್, ರೋಟರಿ ಡಯಲ್ ಎಸಿ (Rotary Dial AC), ರಿಕ್ಲೈಯಿಂಗ್ ಫ್ರಂಟ್ ಸೀಟ್ (Reclining Front Seat), ಮ್ಯಾನುವಲ್ ಎಸಿ, 12V ಚಾರ್ಜಿಂಗ್ ಸೆಕೆಟ್ ಹೊಂದಿದೆ.
  • 81bhp ಪವರ್ ಮತ್ತು 104.4NM ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • ಸುರಕ್ಷತೆಯ ದೃಷ್ಟಿಯಿಂದ ಏರ್ ಬ್ಯಾಗ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸರ್ (Rear Parking Sensor) ಇತ್ಯಾದಿ ಆಪ್ಶನ್ ಕೂಡ ಇದರಲ್ಲಿ ನಿಮಗೆ ಸಿಗಲಿದೆ.

ಬೆಲೆ ಎಷ್ಟು?

 

 

ಸಾಮಾನ್ಯವಾಗಿ ಅಧಿಕ ಫೀಚರ್ಸ್ ಹೊಂದಿರುವ ಕಾರಿಗೆ ಅಧಿಕ ಬೆಲೆ ಇದ್ದೇ ಇರುತ್ತದೆ. ಆದರೆ ಈ ಒಂದು ಕಾರನ್ನು ಮಧ್ಯಮವರ್ಗದವರಿಗೆ ಅವಶ್ಯಕತೆಗೆ ಉಪಯೋಗವಾಗಲೆಂದೇ ತಯಾರಿಸಿದ್ದ ಕಾರಣ ಕಡಿಮೆ ಬಜೆಟ್ ನಲ್ಲೇ ಈ ಕಾರು ಜನರಿಗೆ ಸಿಗಲಿದೆ. ಈ ಮಾರುತಿ ಇಕೊ ಕಾರಿನ ಬೆಲೆ (Maruti Eeco Price) 5,21,700ರೂಪಾಯಿ ಆಗಿದ್ದು ಟಾಪ್ ರೂಪಾಂತರದ ಬೆಲೆ 6,53,000ರೂಪಾಯಿ ಆಗಲಿದೆ. ಹಾಗಾಗಿ ಈ ಕಾರಿನ ಬೆಲೆ ಇಷ್ಟು ಫೀಚರ್ಸ್ ನಡುವೆ ಹೊಲಿಸಿದರೆ ಕಡಿಮೆ ಎಂದು ಹೆಳಬಹುದು. ಇಎಂಐ ಸೌಲಭ್ಯ ಕೂಡ ಇದ್ದು ಕಡಿಮೆ ಡೌನ್ ಪೇಮೆಂಟ್ ಮಾಡಿ ಈ ಕಾರನ್ನು ನಿಮ್ಮ ಸ್ವಂತದ್ದಾಗಿಸಬಹುದು.

advertisement

Leave A Reply

Your email address will not be published.