Karnataka Times
Trending Stories, Viral News, Gossips & Everything in Kannada

RBI: ಸಾಲಮನ್ನಾ ಕ್ಕಾಗಿ ಕಾಯುತ್ತಿರುವವರಿಗೆ ಮಹತ್ವದ ಸೂಚನೆ ಕೊಟ್ಟ ಆರ್ ಬಿಐ!

advertisement

ಶಿಕ್ಷಣ, ವೃತ್ತಿ , ಮನೆ ಕಟ್ಟುವುದು, ಕೃಷಿ ಇನ್ನು ಅನೃಕ ಕಾರಣಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿರುವವರು ಕ್ಲಪ್ತ ಸಮಯಕ್ಕೆ ಹಿಂದಿರುಗಿಸದೇ ಆ ಸಾಲ ಮನ್ನಾ ಆಗುತ್ತಾ ಎಂದು ಕಾಯುತ್ತಾ ಕೂತಿರುವವರು ಇದ್ದಾರೆ. ಅದರಲ್ಲೂ ಶೈಕ್ಷಣಿಕ ಮತ್ತು ಕೃಷಿ ಸಂಬಂಧಿತ ಸಾಲ ಹೆಚ್ಚಿನ ಸಂದರ್ಭದಲ್ಲಿ ಆಯಾ ಪರಿಸ್ಥಿತಿಗೆ ಅನುಗುಣವಾಗಿ ರದ್ದಾಗಲಿದೆ. ಆದರೆ ಸಾಲ ರದ್ದತಿ ಯನ್ನೇ ಗುರಿಯಾಗಿರಿಸಿ ಪ್ರಚಾರ ಮಾಡುವ ಕೆಲ ಸಂಸ್ಥೆ, ರಾಜಕಾರಣಿ ಮತ್ತು ಸೆಲೆಬ್ರಿಟಿಗಳ ವಿರುದ್ಧ ಆರ್ ಬಿಐ ಎಚ್ಚರಿಕೆಯ ಸಂದೇಶ ನೀಡಿದೆ‌.

ಸಾಲ ಮನ್ನಾ ಮಾಡುವ ಪ್ರಚಾರದ ಅಬ್ಬರ ಇತ್ತೀಚೆಗೆ ಅಧಿಕವಾಗುತ್ತಿದೆ. ಅನೇಕ ಅಧಿಕಾರಿಗಳು, ರಾಜಕೀಯ ದುರುಣರು ಜನರನ್ನು ಆಕರ್ಷಿಸಲು ಅವರನ್ನು ತಪ್ಪು ಸಂದೇಶ ನೀಡುವ ಮೂಲಕ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿರುವುದು RBI ನ ಗಮನಕ್ಕೆ ಬಂದಿದೆ. ಸಾಲಗಾರರು ತಾವು ಮಾಡಿದ್ದ ಸಾಲವನ್ನು ಮನ್ನಾ ಮಾಡುವ ಆಸೆ ತೋರಿಸಿ ಜನರಿಂದ ತಮ್ಮ ಕಾರ್ಯ ಮಾಡಿಕೊಳ್ಳಲಾಗುತ್ತಿದೆ. ಈಬಗ್ಗೆ ಅನೇಕ ಜಾಹಿರಾತನ್ನು ಅಹ ಹಾಕುತ್ತಿದ್ದು ಅಂತವರ ವಿರುದ್ಧ ಆರ್ ಬಿಐ ಕಿಡಿಕಾರಿ ಎಚ್ಚರಿಕೆ ನೀಡಿದೆ.

ಆರ್ ಬಿ ಸ್ಪಷ್ಟನೆ

advertisement

ಬ್ಯಾಂಕುಗಳ ಸಾಲ‌ ಮನ್ನಾ ಮಾಡುವುದು ಯಾವುದೇ ಸಂಘ ಸಂಸ್ಥೆ ಅಥವಾ ವ್ಯಾಕ್ತಿಗೆ ಸೀಮಿತವಾದ ಅಧಿಕಾರವಲ್ಲ. ವ್ಯಕ್ತಿಗಳು ಈ ಬಗ್ಗೆ ಹೇಳಿಕೆ ನೀಡುವ ಯಾವುದೇ ನೈತಿಕ ಕಾನೂನಾತ್ಮಕ ಅಧಿಕಾರ ಹೊಂದಿರುವುದಿಲ್ಲ. ಹಾಗಿದ್ದರು ಮುದ್ರಣ ಮಾಧ್ಯಮ ಬಳಸಿ ಜಾಹಿರಾತು ನೀಡಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಸಾಲ ಮನ್ನಾ ಪ್ರಮಾಣ ಪತ್ರ ನೀಡುವ ಯಾವುದೇ ವಿಧವಾದ ಅಧಿಕಾರ ಅವರಿಗೆ ಇರಲಾರದು.

ಹೀಗೆ ಸುಳ್ಳು ಸುದ್ದಿ ನೀಡಿ ಜನರನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಭರವಸೆ ನೀಡಲಾಗುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಬಹಳ ಅವಶ್ಯವಿದೆ. ಇದು ಬ್ಯಾಂಕಿನ ಸೆಕ್ಯುರಿಟಿ ಮೇಲಿನ ಹಕ್ಕನ್ನು ಮೊಟಕುಗೊಳಿಸಿ ದಂತಾಗುವುದು. ಠೇವಣಿದಾರರ ಹಿತಾಸಕ್ತಿ ಕಳೆದುಕೊಳ್ಳಲಿದೆ. ಬಾಕಿ ಉಳಿದ ಮೊತ್ತ ಪಾವತಿಯಾಗದಿದ್ದರೆ ಆರ್ಥಿಕ ವ್ಯವಸ್ಥೆಗೆ ತೊಂದರೆ ಆಗಲಿದೆ. ಈ ವ್ಯವಸ್ಥೆ ಹಣಕಾಸು ಸಂಸ್ಥೆಗಳ ಕಾರ್ಯಚಟುವಟಿಕೆ ದುರ್ಬಲಮಾಡಿಸುತ್ತದೆ ಹಾಗಾಗಿ ಈ ರೀತಿ ಮನ್ನಾ ಮಾಡುವ ಅಧಿಕಾರ ವ್ಯಕ್ತಿಯ ವೈಯಕ್ತಿಕ ನಿರ್ಣಯ ಅಲ್ಲ ಎಂದು ಆರ್ ಬಿಐ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಒಟ್ಟಾರೆಯಾಗಿ ಚುನಾವಣೆ ಅಥವಾ ಇತರ ಕಾರಣಕ್ಕೆ ಸಾಲ‌ಮನ್ನಾ ಮಾಡುವ ಭರವಸೆಗೆ ಜೋತು ಬೀಳದಿರಿ ಎಂದು ಈ ಬಗ್ಗೆ ಆರ್ ಬಿಐ ತಿಳಿಸಿದೆ‌. ಜನರಿಗೆ ಈ ಬಗ್ಗೆ ಎಚ್ಚೆತ್ತುಕೊಳ್ಳಲು ತನ್ನ ಅಧೀನ ಬ್ಯಾಂಕುಗಳಿಗೆ ಸುತ್ತೋಲೆ ಮೂಲಕ‌ ತಿಳಿಸಿ ಈ ವಿಚಾರದ ಪೋಸ್ಟರ್ ಕೂಡ ಹಾಕಲಾಗುತ್ತಿದೆ. ಈ ಬಗ್ಗೆ‌ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.